ನವಮಂಗಳೂರು ಬಂದರಿಗೆ ಆಗಮಿಸಿದ ಬೃಹತ್ ಗಾತ್ರದ ಸರಕು ಸಾಗಾಟ ನೌಕೆ

ಮಂಗಳೂರು: ನವಮಂಗಳೂರು ಬಂದರಿಗೆ ಜು.23ರಂದು 1,936 ಕಂಟೈನರ್ ಗಳನ್ನು ಹೊಂದಿರುವ ಬೃಹತ್ ಗಾತ್ರದ ಸಿಮಾ ಮೆರೈನ್ ಇಂಡಿಯಾ ಕಂಪೆನಿಗೆ ಸೇರಿದ ಸರಕು ಸಾಗಾಟ ನೌಕೆ ಕೊಚ್ಚಿಯಿಂದ ಆಗಮಿಸಿದೆ.
ಜು.25ರಂದು ನವಮಂಗಳೂರು ಬಂದರಿನಲ್ಲಿ 925 ಕಂಟೈನರ್ ರಫ್ತು ಸರಕು ,1011ಆಮದು ಸರಕುಗಳ ಕಂಟೈನರ್ ಗಳನ್ನು ಹೊತ್ತ ಈ ನೌಕೆ ಮತ್ತೆ ಕೊಚ್ಚಿ ಬಂದರಿಗೆ ತೆರಳಿದೆ. ಬಳಿಕ ಈ ಸರಕನ್ನು ಗಲ್ಫ್ ರಾಷ್ಟ್ರದ ಹಡಗಿಗೆ ರವಾನಿಸಲಿದೆ.
ಈ ಹಿಂದೆ 1521 ಕಂಟೈನರ್ ಹೊಂದಿದ್ದ ಸರಕು ಸಾಗಾಟ ನೌಕೆ ಜೂ.14, 2021ರಂದು ನಿರ್ವಹಣೆ ಮಾಡಿರುವುದು ಗರಿಷ್ಟ ದಾಖಲೆಯಾಗಿತ್ತು.
Next Story





