ಪ್ರವೀಣ್ ಹತ್ಯೆ ಹಿನ್ನೆಲೆ: ಸುಳ್ಯದಲ್ಲಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಹಿಂದುತ್ವ ಸಂಘಟನೆಗಳು

ಸುಳ್ಯ, ಜು.27: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ಬಹುತೇಕ ಅಂಗಡಿಮುಂಗಟ್ಟುಗಳು ಬಂದ್ ಆಗಿವೆ.
ಸುಳ್ಯದಲ್ಲಿ ಹಿಂದುತ್ವ ಸಂಘಟನೆಗಳ 50ಕ್ಕೂ ಹೆಚ್ಚು ಕಾರ್ಯಕರ್ತರು ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಾ ಬಂದ್ ಗೆ ಕರೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಯ ಹಳೆ ಗೇಟಿನಿಂದ ರಥ ಬೀದಿವರೆಗೆ ಎಲ್ಲಾ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ. ರಥ ಬೀದಿಯಿಂದ ಗಾಂಧಿನಗರದ ಕೆಲವು ಅಂಗಡಿಗಳು ಮಾತ್ರ ತೆರೆದಿವೆ. ಖಾಸಗಿ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಆಟೋ ಚಾಲಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ಮೆಡಿಕಲ್ ಅಂಗಡಿಗಳು, ಹಾಲಿನ ಅಂಗಡಿಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ.
ಶಾಲಾ ವಿದ್ಯಾರ್ಥಿಗಳು ಅವರವರ ಮನೆಗೆ ತೆರಳುತ್ತಿದ್ದು ಸುಳ್ಯದ ಕೆಲವು ಶಾಲೆಗಳು ಈಗಾಗಲೇ ರಜೆ ಘೋಷಿಸಿವೆ ಎಂದು ತಿಳಿದುಬಂದಿದೆ.

Next Story