ಹೈದರಾಬಾದ್ ಗ್ಯಾಂಗ್ ರೇಪ್ ಪ್ರಕರಣ: ನಾಲ್ವರು ಅಪ್ರಾಪ್ತ ವಯಸ್ಸಿನ ಆರೋಪಿಗಳಿಗೆ ಜಾಮೀನು

ಸಾಂದರ್ಭಿಕ ಚಿತ್ರ, Photo:PTI
ಹೈದರಾಬಾದ್: ಒಂದು ತಿಂಗಳ ಹಿಂದೆ ತೆಲಂಗಾಣದಲ್ಲಿ ಆಕ್ರೋಶ ಹಾಗೂ ರಾಜಕೀಯ ಘರ್ಷಣೆಗೆ ಕಾರಣವಾಗಿದ್ದ ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ನಾಲ್ವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಶಾಸಕರ ಪುತ್ರ ಸೇರಿದಂತೆ ಎಲ್ಲಾ ನಾಲ್ವರು ಆರೋಪಿಗಳನ್ನು ಜೂನ್ ಮೊದಲ ವಾರದಿಂದ ಬಂಧಿತರಾಗಿದ್ದ ಬಾಲಾಪರಾಧಿಗೃಹದಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಾಲ್ವರಿಗೆ ಬಾಲ ನ್ಯಾಯ ಮಂಡಳಿಯಿಂದ ಜಾಮೀನು ಮಂಜೂರಾಗಿದೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ಐದನೇ ಅಪ್ರಾಪ್ತ ಬಾಲಕ ಜಾಮೀನಿಗಾಗಿ ತೆಲಂಗಾಣ ಹೈಕೋರ್ಟ್ಗೆ ಮೊರೆ ಹೋಗಿರುವುದರಿಂದ ಬಾಲಾಪರಾಧಿ ಗೃಹದಲ್ಲಿಯೇ ಇರುತ್ತಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಏಕೈಕ ವಯಸ್ಕ ಆರೋಪಿ ಸಾದುದ್ದೀನ್ ಮಲಿಕ್ ಜೈಲಿನಲ್ಲಿದ್ದಾನೆ.
ಮೇ 28 ರಂದು ಹೈದರಾಬಾದ್ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆರು ಜನರನ್ನು ಬಂಧಿಸಲಾಗಿದೆ.
Next Story





