ಸುಳ್ಯ: ಎಸೆಸ್ಸೆಫ್ ದ.ಕ. ಈಸ್ಟ್ ಜಿಲ್ಲಾ ಕ್ಯಾಂಪಸ್ ಅಸೆಂಬ್ಲಿ

ಸುಳ್ಯ, ಜು.26: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ನೇತೃತ್ವದಲ್ಲಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ನಡೆಯುವ ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮವು ದ.ಕ. ಜಿಲ್ಲೆ (ಈಸ್ಟ್) ವತಿಯಿಂದ ರವಿವಾರ ಸುಳ್ಯದ ಗೂನಡ್ಕ ಸಜ್ಜನ ಸಭಾಂಗಣ ಬೀಜದಕಟ್ಟೆಯಲ್ಲಿ ನಡೆಯಿತು.
ನೈತಿಕತೆ, ಸಮಗ್ರತೆ, ಸಮರ್ಪಣೆ ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯ ಐದು ಡಿವಿಷನ್‌ಗಳಿಂದ 650ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೇರಡ್ಕ ಮಖಾಂ ಝಿಯಾರತ್‌ನೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಧ್ವಜಾರೋಹಣವನ್ನು ಗೂನಡ್ಕ ಜಮಾಅತ್ ಕಮಿಟಿಯ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕೊಪ್ಪತಜೆ ನೆರವೇರಿಸಿದರು.
ಸಜ್ಜನ ಪ್ರತಿಷ್ಟಾನ ಬೀಜದಕಟ್ಟೆ ಸ್ಥಾಪಕ ಡಾ.ಉಮರ್ ಬೀಜದಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಕೊಡಗು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ ಅಧ್ಯಾತ್ಮಿಕ ತರಗತಿ, ಮೋಟಿವೇಶನ್ ತರಗತಿ, ಪ್ಯಾನೆಲ್ ಚರ್ಚೆ ಸಹಿತ ವಿವಿಧ ತರಗತಿಗಳಲ್ಲಿ ಕ್ರಮವಾಗಿ ನೌಫಲ್ ಸಖಾಫಿ ಕಳಸ, ಸಿ.ಎನ್.ಜಾಫರ್ ಕಾಸರಗೋಡು, ಜಿ.ಎಂ.ಕಾಮಿಲ್ ಸಖಾಫಿ, ಡಾ.ಸಿ.ಎಂ.ಹನೀಫ್ ಬೆಳ್ಳಾರೆ, ರಖೀಬ್ ಮಾಸ್ಟರ್ ಕನ್ನಂಗಾರ್, ರಾಶಿದ್ ಬುಖಾರಿ ಕುಟ್ಯಾಡಿ ನಡೆಸಿಕೊಟ್ಟರು.
ಎಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ, ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಬ್ರೈಟ್ ಇಬ್ರಾಹೀಂ ಹಾಜಿ, ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ, ರಾಜ್ಯ ಎಸ್ಸೆಸ್ಸೆಫ್ ಕೋಶಾಧಿಕಾರಿ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಮುಖ್ಯ ಭಾಷಣ ಮಾಡಿದರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಜಿ.ಕೆ. ಇಬ್ರಾಹೀಂ ಅಮ್ಜದಿ ಮಂಡೆಕೋಲು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ಕಾರ್ಯದರ್ಶಿ ಎನ್.ಸಿ.ರಹೀಂ ಹೊಸ್ಮಾರ್, ಸದಸ್ಯರಾದ ಮುಜೀಬ್ ಕೊಂಡಂಗೇರಿ, ಉಮರಾ ನಾಯಕರಾದ ಯೂಸುಫ್ ಗೌಸಿಯಾ ಸಾಜ, ಇಬ್ರಾಹೀಂ ಹಾಜಿ ಕುಂಬಕ್ಕೋಡು, ಟಿ.ಎಂ.ಶಹೀದ್ ತೆಕ್ಕಿಲ್, ಲತೀಫ್ ಅರ್ಲಡ್ಕ, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಮುಸ್ತಫ ಕೋಡಪದವು, ಫಾರೂಕ್ ಇಂಜಿನಿಯರ್ ಬುಳೇರಿಕಟ್ಟೆ, ಕಲಂದರ್ ಕಬಕ ಕೆಸಿಎಫ್, ಸಿದ್ದೀಕ್ ಮಾಂಬ್ಲಿ ಒಮಾನ್, ನಝೀರ್ ನಾರ್ಶ, ಸಲಾಂ ಅಳಿಕೆ ಕೆಸಿಎಫ್, ಹಸನ್ ಮದನಿ ಮಂಡೆಕೋಲು, ಫೈಝಲ್ ಕಟ್ಟೆಕಾರ್, ಸಂಪಾಜೆ ಗ್ರಾಪಂ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ಸದಸ್ಯ ಅಬೂಸಾಲಿ ಗೂನಡ್ಕ, ಸವಾದ್ ಗೂನಡ್ಕ, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ. ಎಸ್.ಉಮರ್, ಸುಳ್ಯ ಎಸ್‌ವೈಎಸ್ ಸೆಂಟರ್ ನಾಯಕರಾದ ಅಬ್ದುಲ್ಲತೀಫ್ ಜೌಹರಿ, ಹಮೀದ್ ಬೀಜಕೊಚ್ಚಿ, ಸಿದ್ದೀಕ್ ಕಟ್ಟೆಕಾರ್, ಸ್ಥಳೀಯ ಮಸೀದಿಯ ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರಂಮ ಜಿಲ್ಲಾ ಕೊಶಾಧಿಕಾರಿ ಸಿದ್ದೀಕ್ ಗೂನಡ್ಕ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಶ್ಫಾಕ್ ಕೊಡಂಗಾಯಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ವಂದಿಸಿದರು.