ಪ್ರವೀಣ್ ಹತ್ಯೆ ಪ್ರಕರಣ: ನಳಿನ್ ಕುಮಾರ್, ಸಚಿವ ಸುನಿಲ್ ರಿಗೆ ಕಾರ್ಯಕರ್ತರ ಘೆರಾವ್

ಬೆಳ್ಳಾರೆ: ಮಂಗಳವಾರ ರಾತ್ರಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ಯಾತ್ರೆ ಬೆಳ್ಳಾರೆಗೆ ಆಗಮಿಸಿದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ,ಸಚಿವ ಅಂಗಾರ ಶಾಸಕ ಸಂಜೀವ ಮಠಂದೂರು ಹಾಗು ಬಿಜೆಪಿ ನಾಯಕರ ವಿರುದ್ಧ ಸಾವಿರಾರು ಮಂದಿ ಕಾರ್ಯಕರ್ತರು ಧಿಕ್ಕಾರ ಕೂಗಿದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.
'ಗೋ ಬ್ಯಾಕ್' ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರು ನಾಯಕರನ್ನು ದಿಗ್ಬಂಧನಕ್ಕೊಳಪಡಿಸಿದರು. ನ್ಯಾಯಕ್ಕಾಗಿ ಒತ್ತಾಯಿಸಿದರು.
ಈ ಮಧ್ಯೆ ಪಾರ್ಥಿವ ಶರೀರದ ಮೆರವಣಿಗೆ ಮುಂದೆ ಸಾಗಿತು. ಆದರೆ ಕಾರ್ಯಕರ್ತರು ನಾಯರಕರ ದಿಗ್ಬಂಧನ ಮುಂದುವರಿಸಿ ಹಲವು ಸಮಯಗಳ ಕಾಲ ಗೋ ಬ್ಯಾಕ್, ಧಿಕ್ಕಾರ , ಶೇಮ್, ಶೇಮ್ ಎಂದು ಘೋಷಣೆ ಕೂಗಿದರು. ಕಾರ್ಯಕರ್ತರನ್ನು ಸಮಾಧಾನ ಪಡಿಸಲು ನಾಯಕರು ಪ್ರಯತ್ನಿಸಿದರೂ ವಿಫಲರಾದರು.
Next Story