ಪಿ.ಎ. ಎಂಬಿಎನಲ್ಲಿ ರಾಷ್ಟ್ರ ಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ 'ಫ್ಲೇಮ್ಸ್-2022'

ರಾಷ್ಟ್ರ ಮಟ್ಟದ ಮ್ಯಾನೇಜ್ ಮೆಂಟ್ ಫೆಸ್ಟ್ 'ಫ್ಲೇಮ್ಸ್-2022' ವಿಜೇತ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ತಂಡ.
ಮಂಗಳೂರು, ಜು.27: ಪಿ.ಎ. ಕಾಲೇಜಿನ ಸೆಂಟರ್ ಫಾರ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಮ್ಯಾನೇಜ್ ಮೆಂಟ್ ಫೆಸ್ಟ್ 'ಫ್ಲೇಮ್ಸ್-2022' ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್. ಮಾತನಾಡಿ, ವಿದ್ಯಾರ್ಥಿಗಳು ಉದ್ಯಮ ಆಧಾರಿತ ಕಲಿಕೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಪೇಸ್ ಗ್ರೂಪ್ ನಿರ್ದೇಶಕ ಝುಬೈರ್ ಇಬ್ರಾಹೀಂ ಮಾತನಾಡಿ ಶುಭ ಹಾರೈಸಿದರು. ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರಮೀಸ್ ಎಂ.ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಡಾಕ್ಟರೇಟ್ ವಿದ್ಯಾಭ್ಯಾಸ ಪೂರೈಸಿದ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಸಹಾಯಕ ಪ್ರಾಧ್ಯಾಪಕ ಡಾ.ಝೊಹೇಬ್ ಅಲಿಯವರನ್ನು ಸನ್ಮಾನಿಸಲಾಯಿತು.
ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಸಂಜಯ್ ಎಸ್. ವಾಲಿ, ಪಿ.ಎ. ಸಮೂಹ ಸಂಸ್ಥೆಗಳ ಸಹಾಯಕ ವ್ಯವಸ್ಥಾಪಕ ಶರ್ಫುದ್ದೀನ್ ಪಿ.ಕೆ., ಬ್ಯಾಂಕ್ ಆಫ್ ಬರೋಡಾ ಕೊಣಾಜೆ ಶಾಖಾ ವ್ಯವಸ್ಥಾಪಕ ಡೆರಿಕ್, ಫ್ಲೇಮ್ಸ್-2022ರ ವಿದ್ಯಾರ್ಥಿ ಸಂಯೋಜಕ ಹನ್ಸಾಬ್ ಮತ್ತು ಇಬ್ರಾಹೀಂ ಆಶಿಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
11 ವೈವಿಧ್ಯ ಸ್ಪರ್ಧೆಗಳಲ್ಲಿ ಒಟ್ಟು 31 ತಂಡಗಳಲ್ಲಿ480ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸೆಂಟರ್ ಫಾರ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ನ ನಿರ್ದೇಶಕ ಹಾಗೂ ಪಿ.ಎ. ಸಮೂಹ ಸಂಸ್ಥೆಗಳ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಸೈಯದ್ ಅಮೀನ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಶಿತೋಷ್ ಹಾಗೂ ನುಫೈಝ ಬಾನು ಕಾರ್ಯಕ್ರಮ ನಿರೂಪಿಸಿದರು .