1ನೆ ತರಗತಿಗೆ 6 ವರ್ಷ ಕಡ್ಡಾಯ ಆದೇಶ ಮರು ಪರಿಶೀಲನೆಗೆ ಹರೀಶ್ ಕುಮಾರ್ ಆಗ್ರಹ

ಹರೀಶ್ ಕುಮಾರ್
ಮಂಗಳೂರು : ಪ್ರಸಕ್ತ ಸಾಲಿನಿಂದ 1ನೆ ತರಗತಿಗೆ ದಾಖಲಾತಿ ಪಡೆಯಲು ಮಕ್ಕಳಿಗೆ ಜೂನ್ 1ನೆ ತಾರೀಕಿಗೆ ಆರು ವರ್ಷ ಕಡ್ಡಾಯವಾಗಿರಬೇಕು ಎಂಬ ಆದೇಶ ಅವೈಜ್ಞಾನಿಕವಾಗಿದ್ದು, ಅದನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
2022-23ನೆ ಸಾಲಿನ ಶೈಕ್ಷಣಿಕ ವರ್ಷ ಮೇ 16ರಿಂದ ಆರಂಭವಾಗಿದೆ. 2020ರ ಸರಕಾರದ ಆದೇಶದಂತೆ ಎಲ್ಲಾ ಪೋಷಕರು ತಮ್ಮ 5 ವರ್ಷ ಮತ್ತು 5 ತಿಂಗಳು ತುಂಬಿರುವ ಮಕ್ಕಳನ್ನು 1ನೆ ತರಗತಿಗೆ ದಾಖಲಾತಿ ಮಾಡಿಕೊಂಡಿರುತ್ತಾರೆ. ಶಾಲಾ ಪಿಟಿ1 ಪರೀಕ್ಷೆಗಳು ಕೂಡಾ ಈಗಾಗಲೇ ಮುಗಿದಿವೆ. ಈ ಹಂತದಲ್ಲಿ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಹಳೆ ಆದೇಶವನ್ನು ರದ್ದು ಪಡಿಸಿ ಹೊಸ ಆದೇಶ ಒಹರಡಿಸಿರುವುದು ಹೆತ್ತವರು ಮತ್ತು ಶಾಲಾ ಆಡಳಿತ ಮಂಡಳಿಯನ್ನು ಗೊಂದಲಕ್ಕೀಡು ಮಾಡಿದೆ ಎಂದು ಹರೀಶ್ ಕುಮಾರ್ ಅವರು ಸಚಿವರಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
Next Story