ತೋಟಬೆಂಗ್ರೆ; ಅಪಘಾತಕ್ಕೀಡಾದ ನಾಡದೋಣಿ: ಐದು ಮಂದಿಯ ರಕ್ಷಣೆ

ಮಂಗಳೂರು, ಜು.27: ನಗರ ಹೊರವಲಯದ ತೋಟಬೆಂಗ್ರೆಯ ನಾಡದೋಣಿಯೊಂದು ಕಾಪು ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಬುಧವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ದೋಣಿಯಲ್ಲಿದ್ದ ಐವರು ಸುರಕ್ಷಿತವಾಗಿ ದಡ ಸೇರಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಆದರೆ, ನಾಡದೋಣಿಗೆ ಹಾನಿಯಾಗಿ 15 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೀನುಗಾರಿಕೆಗೆ ತೆರಳಿದ್ದ ತೋಟಬೆಂಗ್ರೆಯ ಲತೀಶ್ ಪುತ್ರನ್ ಅವರ ನಾಡದೋಣಿ ಇಂಜಿನ್‌ನ ತಾಂತ್ರಿಕ ದೋಷದಿಂದ ಗಾಳಿಯ ರಭಸಕ್ಕೆ ಸಿಲುಕಿ ಕಾಪು ಲೈಟ್ ಹೌಸ್ ನೇರವಿರುವ ಬಂಡೆಗೆ ಢಿಕ್ಕಿಯಾಗಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಐವರು ಮೀನುಗಾರರು ಈಜಿ ಬಂಡೆಯಲ್ಲಿ ರಕ್ಷಣೆ ಪಡೆದಿದ್ದಾರೆ. ಬಳಿಕ ಮೀನುಗಾರರು ಬೇರೆ ದೋಣಿಯವರ ಸಹಾಯದಿಂದ ಮಲ್ಪೆ ಬಂದರು ತಲುಪಿದ್ದಾರೆ.

Next Story