ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪರಿಂದ ರಂಗಭೂಮಿ ಕಲಾವಿದನಿಗೆ ಅವಮಾನ: ಆರೋಪ

ಅಡ್ಡಂಡ ಸಿ.ಕಾರ್ಯಪ್ಪ
ಮೈಸೂರು,ಜು.27: ರಂಗಾಯಣದ ನಿರ್ದೇಶಕಅಡ್ಡಂಡ ಸಿ.ಕಾರ್ಯಪ್ಪ ರಂಗಭೂಮಿಕಲಾವಿದ ಅನುರಾಗ್ ಶರ್ಮ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ದೂರಲಾಗಿದೆ.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಂಗಕಲಾವಿದ ಅನುರಾಗ್ ಶರ್ಮ, 'ರೆಫರ್ಟರಿಕಲಾವಿದರ ಆಯ್ಕೆಯ ಸಂದರ್ಶನಕ್ಕೆ ತೆರಳಿದ್ದಾಗ ನನ್ನ ಸಂದರ್ಶವನ್ನೂ ಮಾಡದೇ ಅಡ್ಡಂಡ ಕಾರ್ಯಪ್ಪ ಬಾಯಿಗೆ ಬಂದಂತೆ ಮಾತನಾಡಿದರು. ನಾನು ಪರ್ವ ನಾಟಕದಲ್ಲಿಕರ್ಣನ ಪಾತ್ರ ಮಾಡುತ್ತಿದ್ದೆ.ಈ ಹಿಂದೆ ಬಹುರೂಪಿಗೆ ಚಕ್ರವರ್ತಿ ಸೂಲಿಬೆಲೆ ಕರೆಸದಂತೆ ಒತ್ತಾಯಿಸಿದ್ದವರ ಜೊತೆ ಗುರ್ತಿಸಿಕೊಂಡಿದ್ದೆ. ಇದೇಕಾರಣಕ್ಕೆ ಉದ್ದೇಶ ಪೂರ್ವಕವಾಗಿ ನನ್ನನ್ನು ಪರ್ವ ನಾಟಕತಂಡದಿಂದ ಹೊರ ಹಾಕಿದ್ದರು.ಇದೇ ಕಾರಣದಿಂದ ನನ್ನನ್ನು ಈಗ ನಿಂದಿಸಿದ್ದಾರೆ' ಎಂದು ಆರೋಪಿಸಿದರು.
'ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲೂ ಆಧಾರ ರಹಿತ ದೂರು ದಾಖಲಿಸಲು ಹೋಗಿ ದೂರು ದಾಖಲಿಸಲಾಗದೇ ವಾಪಸ್ ಬಂದಿದ್ದಾರೆ. ರೆಫರ್ಟರಿಕಲಾವಿದರ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಇದರಿಂದ ಅರ್ಹಕಲಾವಿದರಿಗೆ ಅನ್ಯಾಯವಾಗಿದೆ. ಹಾಗಾಗಿ ಫಲಿತಾಂಶಕ್ಕೆ ಸಂಬಂಧಪಟ್ಟವರುತಡೆ ನೀಡಬೇಕು. ಮತ್ತೆ ಹೊಸದಾಗಿ ಸಂಂದರ್ಶನ ಕರೆದು ಅರ್ಹ ಕಲಾವಿದರನ್ನು ಆಯ್ಕೆ ಮಾಡಬೇಕು' ಎಂದು ಒತ್ತಾಯಿಸಿದರು.