Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಿಕ್ಕಮಗಳೂರು: ಮೇಲ್ವರ್ಗದವರಿಂದ ದಲಿತರ...

ಚಿಕ್ಕಮಗಳೂರು: ಮೇಲ್ವರ್ಗದವರಿಂದ ದಲಿತರ ಜಾಗ ಕಬಳಿಸಲು ಹುನ್ನಾರ ಆರೋಪ

ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದ ದಲಿತ ಕುಟುಂಬಗಳು

ವಾರ್ತಾಭಾರತಿವಾರ್ತಾಭಾರತಿ27 July 2022 9:55 PM IST
share
ಚಿಕ್ಕಮಗಳೂರು: ಮೇಲ್ವರ್ಗದವರಿಂದ ದಲಿತರ ಜಾಗ ಕಬಳಿಸಲು ಹುನ್ನಾರ ಆರೋಪ

ಚಿಕ್ಕಮಗಳೂರು, ಜು.27: ಮೇಲ್ವರ್ಗದ ಸವರ್ಣೀಯ ಪ್ರಭಾವಿ ವ್ಯಕ್ತಿಯೊಬ್ಬರು ದಲಿತರಿಗೆ ಸೇರಿದ ಜಮೀನು ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದಲ್ಲದೇ ಗ್ರಾಮ ಸಂಪರ್ಕದ ರಸ್ತೆಗೆ ಖಾಸಗಿ ರಸ್ತೆ ಎಂದು ನಾಮಫಲಕ ಹಾಕಿ ದಲಿತರಿಗೆ ತಿರುಗಾಡಲೂ ತೊಂದರೆ ನೀಡುತ್ತಿದ್ದು,  ಈ ವಿಚಾರಕ್ಕೆ ಸಂಬಂಧಿಸಿದ ತಹಶೀಲ್ದಾರ್ ಸೇರಿದಂತೆ ಜನಪ್ರತಿನಿಧಿಗಳಿಗೆ ದೂರು, ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಇಲ್ಲಿನ ನಿವಾಸಿಗಳಿಗೆ ಧಯಾಮರಣಕ್ಕೆ ಅನುಮತಿ ನೀಡಬೇಕೆಂದು ಕಳಸ ತಾಲೂಕು ವ್ಯಾಪ್ತಿಯ ಕಲ್ಲುಕುಡಿಗೆ ಗ್ರಾಮದ ದಲಿತರು ರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದು ನ್ಯಾಯಕ್ಕೆ ಆಗ್ರಹಿಸಿರುವ ಘಟನೆ ವರದಿಯಾಗಿದೆ.

ಕಳಸ ತಾಲೂಕು ವ್ಯಾಪ್ತಿಯ ಬಾಳೆಹೊಳೆ ತೋಟದೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ತಲಗೋಡು ಗ್ರಾಮ ಸಮೀಪದ ಕಲ್ಲುಕುಡಿಗೆ ಗ್ರಾಮದ ಸ.ನಂ.81ರಲ್ಲಿನ ಸರಕಾರಿ ಜಾಗದಲ್ಲಿ ರಾಘವ, ವಿದ್ಯಾನಂದ, ರಾಮಯ್ಯ ಎಂಬ ಮೂರು ದಲಿತ ಕುಟುಂಬಗಳು ಜಮೀನು ಹಾಗೂ ವಾಸದ ಮನೆಗಳನ್ನು ಹೊಂದಿದ್ದು, ಈ ಜಮೀನು ಹಾಗೂ ವಾಸದ ಮನೆಗಳಿಗೆ ಸರಕಾರದಿಂದ ಹಕ್ಕುಪತ್ರಗಳನ್ನೂ ನೀಡಲಾಗಿದೆ. ಆದರೆ ಗ್ರಾಮದಲ್ಲಿ ಭೂಮಾಲಕರಾಗಿರುವ ಕೆ.ಸಿ.ನಾಗೇಶ್‍ಭಟ್, ಸುಬ್ರಹ್ಮಣ್ಯ ಭಟ್ ಎಂಬವರು ಸರ್ವೇ ಇಲಾಖೆಯ ವ್ಯಕ್ತಿಯೊಬ್ಬರನ್ನು ಕರೆ ತಂದು ದಲಿತರು ವಾಸವಾಗಿರುವ ಜಾಗವನ್ನು ದಬ್ಬಾಳಿಕೆ ಮೂಲಕ ಸರ್ವೆ ಮಾಡಿ ಜಾಗದ ಸರ್ವೆ ನಂಬರ್ ಅನ್ನು ಬದಲಾಯಿಸಿದ್ದಾರೆ. ಸದ್ಯ ಈ ದಲಿತ ಕುಟುಂಬಗಳಿಗೆ ಸೇರಿರುವ ಜಾಗ ಬೇರೆ ಸರ್ವೆ ನಂಬರ್‍ನಲ್ಲಿದ್ದು, ಹಾಲಿ ಇರುವ ಜಾಗವನ್ನು ಖುಲ್ಲಾ ಮಾಡಬೇಕೆಂದು ಒಕ್ಕಲೆಬ್ಬಿಸಲು ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.


'ನಾವು ಬದುಕಿ ಪ್ರಯೋಜನವಿಲ್ಲ; ದಯಾಮರಣಕ್ಕೆ ಅವಕಾಶ ನೀಡಿ':  ನಾವು ಅನಾದಿಕಾಲದಿಂದಲೂ ಇಲ್ಲಿ ವಾಸವಿದ್ದೇವೆ. ಸರಕಾರ ನಮ್ಮ ಮನೆ ಹಾಗೂ ಗ್ರಾಮಕ್ಕೆ ಸರಕಾರಿದಿಂದ ಎಲ್ಲ ಸೌಲಭ್ಯಗಳನ್ನು ನೀಡಿದ್ದಾರೆ. ನಮ್ಮ ಮನೆಗಳಿಗೆ ಹಕ್ಕುಪತ್ರಗಳನ್ನೂ ನೀಡಲಾಗಿದೆ. ಆದರೆ ಈ ಗ್ರಾಮದಲ್ಲಿರುವ ಬಿಜೆಪಿ ಮುಖಂಡರು ಹಾಗೂ ಬ್ರಾಹ್ಮಣ ಸಮುದಾಯದ ಭೂಮಾಲಕರು ದಲಿತರನ್ನು ಒಕ್ಕಲೆಬ್ಬಿಸಲು ಸಂಚು ಮಾಡಿದ್ದಾರೆ, ನಾವು ವಾಸಿಸುತ್ತಿರುವ ಜಾಗ ಬೇರೆ ಸರ್ವೇ ನಂಬರ್‍ಗೆ ಸೇರಿದೆ, ನೀವು ಜಾಗ ಬಿಡಬೇಕು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಅನಾದಿಕಾಲದಿಂದಲೂ ಇಲ್ಲಿ ವಾಸವಿರುವ ನಮಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಜಮೀನು, ಮನೆಗಳಿಗೆ ಸರಕಾರವೇ ನೀಡಿರುವ ಹಕ್ಕುಪತ್ರ ಇದ್ದರೂ ನಮ್ಮನ್ನು ಇಲ್ಲಿ ಬದುಕುಲು ಬಿಡುತ್ತಿಲ್ಲ. ಸರಕಾರದ ದಾಖಲೆಗಳಿಗೂ ಬೆಲೆ ಇಲ್ಲ ಎಂದ ಮೇಲೆ ನಾವು ಬದುಕು ಪ್ರಯೋಜನವಿಲ್ಲ. ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳಿಂದೂ ನ್ಯಾಯಸಿಗುತ್ತಿಲ್ಲ. ಕ್ಷೇತ್ರದ ಶಾಸಕರ ಬಳಿ ಹೇಳಿಕೊಂಡರೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ನಮಗೆ ದಯಾಮರಣಕ್ಕೆ ಅವಕಾಶ ನೀಡಬೇಕು. ಈ ಸಂಬಂಧ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇವೆ.

- ವಿದ್ಯಾನಂದ, ಕಲ್ಲುಕುಡಿಗೆ ಗ್ರಾಮದ ನಿವಾಸಿ
--------------------------------------------------------
'ನಾಯಿಗಳನ್ನು ಛೂ ಬಿಡುತ್ತಿದ್ದಾರೆ': 

ನಾನು ಕಳಸ ಪಟ್ಟಣದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಂದೆ ಕಲ್ಲುಕುಡಿಗೆ ಗ್ರಾಮದಲ್ಲಿ ಜಮೀನು, ಮನೆ ಹೊಂದಿದ್ದು, ಇಲ್ಲಿನ ಮೇಲ್ವರ್ಗದವರು ನಮ್ಮನ್ನು ಖುಲ್ಲಾ ಮಾಡಿಸಲು ಪ್ರತಿದಿನಿ ಕಿರುಕುಳ ನೀಡುತ್ತಿದ್ದಾರೆ. ನಾನು ಕಾಲೇಜಿಗೆ ಹೋಗುವಾಗ ನಾಯಿಗಳನ್ನು ಛೂಬಿಡುತ್ತಿದ್ದಾರೆ. ಇದರಿಂದ ಪ್ರಾಣಭಯದಿಂದಲೇ ಕಾಲೇಜಿಗೆ ಹೋಗುತ್ತಿದ್ದೇನೆ. ದಲಿತ ಕಾಲನಿಯ ನಿವಾಸಿಗಳು ತಿರುಗಾಡುವ ಜಾಗವನ್ನೂ ನಮ್ಮದು ಎನ್ನುತ್ತಿದ್ದಾರೆ. ಮೇಲ್ವರ್ಗದವರಿಂದ ಕಿರುಕುಳ ಅನುಭವಿಸಿ ಸಾಯುವುದಕ್ಕಿಂತ ಸರಕಾರವೇ ನಮ್ಮಗೆ ವಿಷ ನೀಡಿ ಸಾಯಿಸಲಿ. ಈ ಕಾರಣಕ್ಕೆ ನನ್ನ ತಂದೆ ವಿದ್ಯಾನಂದ ಸೇರಿದಂತೆ ಮೂವರು ದಲಿತ ಕುಟುಂಬದವರು ದಯಾಮರಣ ಕೋರಿ ದೇಶದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ನ್ಯಾಯ ಕೊಡಿಸಿ, ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ.

- ಪೂಜಾ, ಸಂತ್ರಸ್ತ ವಿದ್ಯಾನಂದ ಅವರ ಮಗಳು

-------------------------------------------------------

ನಮ್ಮ ತಂದೆ ಮಾಡಿದ್ದ ಜಾಗವನ್ನು ನಾವು ಕೃಷಿ ಮಾಡಿದ್ದೇವೆ. ಮನೆಯನ್ನೂ ಕಟ್ಟಿಕೊಂಡು ಕೂಲಿ ಮಾಡಿ ಬದುಕುತ್ತಿದ್ದೇವೆ, ಆದರೆ ಇಲ್ಲಿರುವ ಮೇಲ್ವರ್ಗದ ಬ್ರಾಹ್ಮಣವರ್ಗದವರು ನಮ್ಮ 1.30 ಎಕರೆ ಜಾಗವನ್ನು ಕಬಳಿಸಲು ಹೊಂಚು ಹಾಕಿದ್ದಾರೆ. ತಂದೆಯ ಜಾಗದಲ್ಲಿ ಮೂವರು ಸಹೋದರರು ಮನೆ ಕಟ್ಟಿಕೊಂಡು ಬದುಕುತ್ತಿದ್ದೇವೆ. ಆದರೆ ಮೇಲ್ವರ್ಗದವರ ಕಿರುಕುಳದಿಂದ ಬೇಸತ್ತಿದ್ದೇವೆ. ನಮ್ಮ ಮಕ್ಕಳನ್ನು ಶಾಲೆಗೂ ಕಳುಹಿಸಲು ಆಗುತ್ತಿಲ್ಲ. ದಲಿತರು ತಿರುಗಾಡುವ ಜಾಗವನ್ನೂ ಖಾಸಗಿ ಜಾಗ ಎನ್ನುತ್ತಿದ್ದಾರೆ. ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ನಮ್ಮ ಮೇಲೆಯೇ ದೌರ್ಜನ್ಯ ಎಸಗುತ್ತಿದ್ದಾರೆ. ಸರಕಾರ ಕೊಟ್ಟ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ. ದಬ್ಬಾಳಿಕೆಯಿಂದ ಜಾಗದ ಸರ್ವೆ ಮಾಡಿದ್ದಲ್ಲದೇ ನಮ್ಮ ಜಾಗ ಬೇರೆಡೆ ಇದೆ ಎನ್ನುತ್ತಿದ್ದಾರೆ. ನಮಗೆ ನ್ಯಾಯ ಯಾರಿಂದಲೂ ಸಿಗುತಿಲ್ಲ. ದಯವಿಟ್ಟು ದಯಾಮರಣಕ್ಕೆ ಅವಕಾಶ ಕಲ್ಪಿಸಿಕೊಡಿ.

- ಗಣೇಶ್, ಕೆ.ಆರ್, ಸಂತ್ರಸ್ತ
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X