Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬೆಳ್ಳಾರೆ: ಪ್ರವೀಣ್ ಅಂತಿಮ ಯಾತ್ರೆಯ...

ಬೆಳ್ಳಾರೆ: ಪ್ರವೀಣ್ ಅಂತಿಮ ಯಾತ್ರೆಯ ವೇಳೆ ಭುಗಿಲೆದ್ದ ಆಕ್ರೋಶ

► ಬಿಜೆಪಿ ರಾಜ್ಯಾಧ್ಯಕ್ಷ, ಸಚಿವರ ವಿರುದ್ಧ ಕಾರ್ಯಕರ್ತರ ಘೇರಾವ್ ► ಪರಿಸ್ಥಿತಿ ನಿಯಂತ್ರಣಕ್ಕೆ ಲಘು ಲಾಠಿಚಾರ್ಜ್

ವಾರ್ತಾಭಾರತಿವಾರ್ತಾಭಾರತಿ27 July 2022 10:18 PM IST
share
ಬೆಳ್ಳಾರೆ: ಪ್ರವೀಣ್ ಅಂತಿಮ ಯಾತ್ರೆಯ ವೇಳೆ ಭುಗಿಲೆದ್ದ ಆಕ್ರೋಶ

ಸುಳ್ಯ, ಜು.27: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್‌ರ ಮೃತದೇಹದ ಅಂತಿಮ ದರ್ಶನದ ವೇಳೆ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ಎಸ್.ಅಂಗಾರ, ಸುನೀಲ್ ಕುಮಾರ್ ಮತ್ತು ಶಾಸಕ ಸಂಜೀವ ಮಠಂದೂರು ಅವರ ಮುತ್ತಿಗೆ ಹಾಕಿ ದಿಗ್ಬಂಧನ ವಿಧಿಸಿದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಸೀದಿಯ ಮೇಲೂ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಮೂವರು ಗಾಯಗೊಂಡಿರುವುದು ವರದಿಯಾಗಿದೆ.

ಇಂದು ಬೆಳಗ್ಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಿಂದ ಹೊರಟ ಪ್ರವೀಣ್‌ರ ಮೃತದೇಹದ ಮೆರವಣಿಗೆ ನಿಂತಿಕಲ್ಲು ಮೂಲಕ ಬೆಳ್ಳಾರೆ ನಗರಕ್ಕೆ ಪ್ರವೇಶಿಸಿತು. ಬೆಳ್ಳಾರೆ ಬಸ್ ನಿಲ್ದಾಣದ ಎದುರು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೆ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸ್ಥಳೀಯ ಶಾಸಕ, ಸಚಿವ ಎಸ್.ಅಂಗಾರ ಶಾಸಕ ಸಂಜೀವ ಮಠಂದೂರು, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಸೇರಿದಂತೆ ಹಲವು ಬಿಜೆಪಿ ನಾಯಕರು ಆಗಮಿಸಿದರು. ಈ ವೇಳೆ ಅವರ ವಿರುದ್ಧ ಸ್ವಪಕ್ಷದ ನೂರಾರು ಕಾರ್ಯಕರ್ತರು ಮುತ್ತಿಗೆ ಹಾಕಿ ಘೇರಾವ್ ಹಾಕಿದರು. 

ಕಾರ್ಯಕರ್ತರ ಆಕ್ರೋಶದ ನಡುವೆಯೇ ಈ ನಾಯಕರು ಹರಸಾಹಸಪಟ್ಟು ಅಂತಿಮ ದರ್ಶನ ಪಡೆದು ಪಕ್ಕಕ್ಕೆ ಹೋಗಿ ನಿಂತರು. ಈ ವೇಳೆ ಕಾರ್ಯಕರ್ತರು ಏರುಧ್ವನಿಯಲ್ಲಿ ತೀವ್ರವಾಗಿ ತರಾಟೆಗೈದರಲ್ಲದೆ ಬಿಜೆಪಿಗೆ, ನಾಯಕರಿಗೆ ಧಿಕ್ಕಾರ ಕೂಗಿದರು. ಈ ವೇಳೆ ಸಂಘಟನೆಯ ಕೆಲವು ಮುಖಂಡರು ಧ್ವನಿವರ್ಧಕದಲ್ಲಿ ಶಾಂತಚಿತ್ತರಾಗಿರುವಂತೆ ಮನವಿ ಮಾಡಿಕೊಂಡರೂ ಕಾರ್ಯಕರ್ತರು ಗಣನೆಗೆ ತೆಗೆದುಕೊಳ್ಳಲಿಲ್ಲ. 

ಸಚಿವ, ಸಂಸದರ ಕಾರಿಗೆ ಮುತ್ತಿಗೆ

ಪ್ರತಿ ಬಾರಿ ಕಾರ್ಯಕರ್ತರ ಹತ್ಯೆಯಾದಾಗಲೂ ಅವರ ಹೆಸರಿನಲ್ಲಿ ಓಟು ಪಡೆಯುತ್ತೀರಿ. ಆದರೆ ನಮ್ಮದೇ ಸರಕಾರವಿದ್ದರೂ ನಮಗೆ ನ್ಯಾಯ ದೊರಕುತ್ತಿಲ್ಲ ಎಂದು ಕಾರ್ಯಕರ್ತರು ಕೂಗತೊಡಗಿದರು. ಈ ಹಂತದಲ್ಲಿ ಡಾ.ಪ್ರಭಾಕರ ಭಟ್ ಧ್ವನಿವರ್ಧಕದಲ್ಲಿ ಮನವಿ ಮಾಡಿಕೊಂಡರೂ ಯಾರೂ ಅದಕ್ಕೆ ಕಿವಿಗೊಡಲಿಲ್ಲ. ಕೊನೆಗೆ ಭಟ್ ನಾಯಕರು ಹಾಗೂ ಪೊಲೀಸರ ಬೆಂಗಾವಲಿನಲ್ಲಿ ಹರಸಾಹಸಪಟ್ಟು ರಸ್ತೆಗೆ ಬಂದಾಗ ಅವರ ಕಾರಿಗೆ ಕಾರ್ಯಕರ್ತರು ಅಡ್ಡನಿಂತರು. ಹೀಗಾಗಿ ಅವರು ಬೇರೊಂದು ವಾಹನದಲ್ಲಿ ತೆರಳಬೇಕಾಯಿತು. ಬಳಿಕ ಕಾರ್ಯಕರ್ತರ ಆಕ್ರೋಶ ಸಂಸದರು ಹಾಗೂ ಸಚಿವರತ್ತ ತಿರುಗಿತು. ರಸ್ತೆಯಲ್ಲಿ ನಿಂತಿದ್ದ ಸಂಸದರ ಕಾರನ್ನು ಹಿಡಿದು ಅಲ್ಲಾಡಿಸಿದ್ದಲ್ಲದೆ ಸಂಸದರ ಕಾರಿನ ಚಕ್ರದ ಗಾಳಿ ತೆಗೆದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.  

ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕೆಲವು ಕಾರ್ಯಕರ್ತರ ಕೋಪಕ್ಕೆ ಸ್ಥಳೀಯ ನಾಯಕರು ಕೂಡಾ ಈಡಾಗಬೇಕಾಯಿತು. ಕೈಕೈ ಮಿಲಾಯಿಸುವ ಹಂತಕ್ಕೂ ಬಂತು. ಕೊನೆಗೆ ಎಲ್ಲರೂ ದೂರ ಬಂದು ನಿಂತರು. ಅಲ್ಲಿಗೂ ಬಂದ ಕಾರ್ಯಕರ್ತರು ಸಚಿವರು ಹಾಗೂ ನಾಯಕರೊಂದಿಗೆ ಪ್ರಶ್ನೆ ಮಾಡುತ್ತಿದ್ದಾಗ ಇತರ ಕೆಲವು ನಾಯಕರಿಗೂ, ಕಾರ್ಯಕರ್ತರಿಗೂ ಮಾತಿನ ಚಕಮಕಿ ನಡೆಯಿತು. ಬಹಳ ಹೊತ್ತಿನ ಬಳಿಕ ಕೆಲವು ನಾಯಕರು ಪೊಲೀಸರ ಸಹಕಾರ ಪಡೆದು ಸಂಸದರು ಹಾಗೂ ಸಚಿವರನ್ನು ವಾಹನಗಳಲ್ಲಿ ಕರೆದೊಯ್ಯಲು ಯಶಸ್ವಿಯಾದರು.

ಮಸೀದಿಗೆ ಕಲ್ಲೆಸೆತ: ಲಾಠಿಚಾರ್ಜ್

ಪ್ರವೀಣ್‌ರ ಮೃತದೇಹದ  ಮೆರವಣಿಗೆ ಸಾಗಿ ಹೋದ ಬಳಿಕ ಉದ್ರಿಕ್ತರಾದ ಕಾರ್ಯಕರ್ತರ ಗುಂಪು ಬೆಳ್ಳಾರೆ ಮಸೀದಿಗೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. 

ಬೆಳ್ಳಾರೆ ಮಸೀದಿಯ ಎದುರು ಜಮಾಯಿಸಿದ ಪ್ರತಿಭಟನಾಕಾರರು ಮಸೀದಿಗೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪೊಲೀಸರು ಎಚ್ಚರಿಕೆ ನೀಡಿದರೂ ಕಡೆಗಣಿಸಿ ಕಾರ್ಯಕರ್ತರು ಕಲ್ಲು ತೂರಾಟ ಮುಂದುವರಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾರಿಚಾರ್ಜ್ ನಡೆಸಿದರು. ಲಾಠಿ ಪ್ರಹಾರದಿಂದ ಮತ್ತೆ ಕೆರಳಿದ ಕಾರ್ಯಕರ್ತರ ತಂಡಗಳು ಪೊಲೀಸರೊಂದಿಗೂ ವಾಗ್ಯುದ್ದಕ್ಕೆ ಮುಂದಾದರು. ಕೊನೆಗೂ ಪೊಲೀಸರು ಮತ್ತು ಸ್ಥಳೀಯ ನಾಯಕರು ಅವರನ್ನು ಸಮಾಧಾನಪಡಿಸಿದರು. 

ಈ ಸಂದರ್ಭ ಕಾಸರಗೋಡು ನಗರ ಸಭೆಯ ವಿಪಕ್ಷ ನಾಯಕ ಪಿ. ರಮೇಶ್ ಸೇರಿದಂತೆ ಮೂವರು ಗಾಯಗೊಂಡಿದ್ದು, ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬೆಳ್ಳಾರೆಯಲ್ಲಿ ಜು.28ರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಹೃಷಿಕೇಶ್ ಸೋನಾವಣೆ, ಪುತ್ತೂರು ಎಎಸ್ಪಿ ಡಾ.ಗಾನ ಕುಮಾರ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಂದವರಿಗೆ ಗಲ್ಲು ಶಿಕ್ಷೆಯಾಗಲಿ

"ನನ್ನ ಮಗನ್ನು ಕೊಂದವರಿಗೆ ಗಲ್ಲುಶಿಕ್ಷೆ ಆಗಲೇಬೇಕು. ನಮ್ಮ ಕುಟುಂಬ ಈಗ ಅನಾಥವಾಗಿದೆ. ಮನೆಯಲ್ಲಿ ನನ್ನ ಗಂಡ ಕಾಯಿಲೆಯಲ್ಲಿ ಬಿದ್ದಿದ್ದಾರೆ. ಮನೆ ಕಟ್ಟಲು ಅಡಿಪಾಯ ತೆಗೆದು ಆಗಿದೆ. ಬೋರ್‌ವೆಲ್ ಕೆಲಸ ಅರ್ಧದಲ್ಲಿದೆ. ಇನ್ನು ನಮ್ಮ ಕುಟುಂಬವನ್ನು ಪೋಷಿಸುವವರು ಯಾರು".
-ಮೃತ ಪ್ರವೀಣ್‌ರ ತಾಯಿ

"ಈ ಹಿಂದಿನ ಕೊಲೆಗೆ ಸಂಬಂಧವಿದೆ ಅನ್ನಿಸುವುದಿಲ್ಲ"

ಕೆಲದಿನಗಳ ಹಿಂದೆ ಬೆಳ್ಳಾರೆಯಲ್ಲಿ ನಡೆದ ಮಸೂದ್ ಹತ್ಯೆಗೂ ಪ್ರವೀಣ್‌ಗೂ ಯಾವುದೇ ಸಂಬಂಧವಿಲ್ಲ. ಅವರ ಹತ್ಯೆಗೆ ಇವರನ್ನು ಕೊಂದು ಪ್ರತೀಕಾರ ತೀರಿಸಬೇಕಾಗಿಲ್ಲ. ಯಾಕೆಂದರೆ ಹತ್ಯೆ ಆರೋಪಿಗಳ್ಯಾರು ಪ್ರವೀಣ್‌ರ ಸ್ನೇಹಿತರಲ್ಲ, ಪರಿಚಯಸ್ಥರೂ ಅಲ್ಲ ಎಂದು ಪ್ರವೀಣ್ ಪತ್ನಿ ನೂತನಾ ಹೇಳಿದ್ದಾರೆ.

ಮಾಧ್ಯಮದವರ ಜೊತೆ ತನ್ನ ನೋವು ತೋಡಿಕೊಂಡ ಅವರು, ನನ್ನ ಪತಿ ಯಾರಿಗೂ ಕೇಡು ಬಯಸುವ ವ್ಯಕ್ತಿಯಲ್ಲ. ಯಾರೊಂದಿಗೂ ಅವರು ದ್ವೇಷ ಹೊಂದಿರಲಿಲ್ಲ. ಕೊಲೆಯಾಗುವಂತಹ ಯಾವುದೇ ತಪ್ಪು ಅವರು ಮಾಡಿಲ್ಲ. ಇನ್ಯಾರಿಗೂ ಇಂತಹ ಅನ್ಯಾಯ ಆಗಬಾರದು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಅವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರವೀಣ್‌ರ ಅಂಗಡಿ ಅಕ್ಕಪಕ್ಕದಲ್ಲಿ ಮುಸ್ಲಿಮರ ಅಂಗಡಿಗಳೇ ಇವೆ. ಅವರು ಮುಸ್ಲಿಮರ ಜೊತೆ ತುಂಬಾ ಅನ್ಯೋನ್ಯವಾಗಿದ್ದರು. ಅವರು ಮುಸ್ಲಿಮ್ ವಿರೋಧಿ ಆಗಿರಲಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ನೂತನಾ ಉತ್ತರಿಸಿದರು.

ಬಿಗು ಬಂದೋಬಸ್ತ್: ನಿಷೇಧಾಜ್ಞೆ

ಪ್ರವೀಣ್ ನೆಟ್ಟಾರ್ ಹತ್ಯೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪುತ್ತೂರು ಉಪವಿಭಾಗ ವ್ಯಾಪ್ತಿಯ ಸುಳ್ಯ, ಪುತ್ತೂರು, ಕಡಬ ತಾಲೂಕುಗಳಲ್ಲಿ ಜು.27ರ ಬೆಳಗ್ಗೆ 6ರಿಂದ ಅನ್ವಯವಾಗುವಂತೆ ಜು.28ರ ಮಧ್ಯರಾತ್ರಿ 12ರವರೆ 144 ಸೆಕ್ಷನ್ ಜಾರಿಗೊಳಿಸಿ ಪುತ್ತೂರು ಉಪವಿಬಾಗಾಧಿಕಾರಿ ಗಿರೀಶ್ ನಂದನ್ ಎಸ್. ಆದೇಶ ಹೊರಡಿಸಿದ್ದಾರೆ.

ನಗರದ ಎಲ್ಲಾ ಅಯಕಟ್ಟಿನ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 

೧೫ ಮಂದಿಯ ವಿಚಾರಣೆ, ಯಾರನ್ನೂ ಬಂಧಿಸಿಲ್ಲ : ಎಡಿಜಿಪಿ

ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ 15 ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಆದರೆ ಯಾರನ್ನೂ ದಸ್ತಗಿರಿ ಮಾಡಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಇಂದು ಬೆಳ್ಳಾರೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.

ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಉಡುಪಿ ಪೊಲೀಸರ ಸಹಕಾರ ಪಡೆದು ತನಿಖೆ ನಡೆಸಲಾಗುತ್ತಿದೆ.  ಪ್ರಕರಣವನ್ನು ಶೀಘ್ರವಾಗಿ ಭೇದಿಸಲಾಗುವುದು ಎಂದು ಎಡಿಜಿಪಿ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X