Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಲಡಾಖ್‌ನ 2 ಪರ್ವತ ಶಿಖರ ಏರಿ ವಿಶ್ವ...

ಲಡಾಖ್‌ನ 2 ಪರ್ವತ ಶಿಖರ ಏರಿ ವಿಶ್ವ ದಾಖಲೆ ಬರೆದ 13ರ ಬಾಲಕ

ವಾರ್ತಾಭಾರತಿವಾರ್ತಾಭಾರತಿ27 July 2022 10:55 PM IST
share
ಲಡಾಖ್‌ನ 2 ಪರ್ವತ ಶಿಖರ ಏರಿ ವಿಶ್ವ ದಾಖಲೆ ಬರೆದ 13ರ ಬಾಲಕ

ಹೊಸದಿಲ್ಲಿ, ಜು. 26: ಲಡಾಖ್‌ನ ಮರ್ಖಾ ಕಣಿವೆಯಲ್ಲಿರುವ ಕಾಂಗ್ ಯಾಟ್ಸೆ ಹಾಗೂ ಡ್ಜೋ ಜೋಂಗೊ ಪರ್ವತ ಶ್ರೇಣಿಗಳನ್ನು ಏರುವಲ್ಲಿ  ಸಫಲನಾಗುವ ಮೂಲಕ ಹೈದರಾಬಾದ್‌ನ 13 ವರ್ಷದ ಬಾಲಕ ವಿಶ್ವನಾಥ್ ಕಾರ್ತಿಕೇಯ ಹೊಸ ವಿಶ್ವ ದಾಖಲೆ ಬರೆದಿದ್ದಾನೆ. 

‘‘ನಾನು ಕಾಂಗ್ ಯಾಟ್ಸೆ ಹಾಗೂ ಡ್ಜೊ ಜೋಂಗೊಗೆ ಜುಲೈ 9ರಂದು ಚಾರಣ ಆರಂಭಿಸಿದೆ. ಜುಲೈ 22ರಂದು ಪೂರ್ಣಗೊಳಿಸಿದೆ. ಪರ್ವತದ ಬೇಸ್ ಕ್ಯಾಂಪ್‌ನಿಂದ ಪ್ರಯಾಣ ಆರಂಭಿಸಿ ಶಿಖರ ತಲುಪುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಅತ್ಯಧಿಕ ಎತ್ತರದಲ್ಲಿ ವಾಯುವಿನ ಒತ್ತಡ ಇಳಿಕೆಯಾಗುತ್ತದೆ. ಆದರೆ, ನಾನು ಪ್ರಯತ್ನ ಬಿಡಲಿಲ್ಲ. ನನ್ನ ಮೊದಲ ಅನುಭವ ಅವಿಸ್ಮರಣೀಯ. ನಾನು ನನ್ನ ಕಠಿಣ ಪರಿಶ್ರಮವನ್ನು ನೆನಪಿಸಿಕೊಂಡೆ. ನಾನು ಈ ಸಾಧನೆ ಮಾಡಲು ಪಣ ತೊಟ್ಟಿದ್ದೆ. ಈಗ ಅದು ಸಾಕಾರಗೊಂಡಿದೆ’’ ಎಂದು ಕಾರ್ತಿಕೇಯನ್ ಹೇಳಿದ್ದಾನೆ. 

‘‘ಪರ್ವತ ಏರುವ ಸಂದರ್ಭ ಗಾಳಿಯಲ್ಲಿ ತೇವಾಂಶದ ಕೊರತೆ ಇದ್ದುದರಿಂದ ನಾನು ಉಸಿರಾಡಲು ಸಾಕಷ್ಟು ಸಮಸ್ಯೆ ಎದುರಿಸಿದೆ. ಡ್ಜೋ ಜೋಂಗೊ ಪರ್ವತ ಏರುವ ಸಂದರ್ಭ ನನ್ನ ಬಾಯಿ ಒಣಗಿತ್ತು. ದೀರ್ಘ ನಡಿಗೆ ನನ್ನಲ್ಲಿ ಆಯಾಸ ಹಾಗೂ ಹಸಿವು  ಉಂಟು ಮಾಡಿತ್ತು’’ ಎಂದು ಆತ ವಿವರಿಸಿದ್ದಾನೆ. 

ಈ ಚಾರಣಕ್ಕೆ ಮೊದಲು ತಾನು ಹಲವು ವೈಫಲ್ಯಗಳನ್ನು ಎದುರಿಸಿದ್ದೇನೆ ಎಂದು 9ನೇ ತರಗತಿಯ ಕಾರ್ತಿಕೇಯ ಹೇಳಿದ್ದಾನೆ. ಉತ್ತರಾಖಂಡದ ಮೌಂಟ್ ರುದುಗೈರಾ ಹಾಗೂ ರಶ್ಯದ ಮೌಂಟ್ ಎಲ್‌ಬ್ರಸ್ ಚಾರಣವನ್ನು ಪೂರ್ಣಗೊಳಿಸಲು ತನಗೆ ಸಾಧ್ಯವಾಗಲಿಲ್ಲ ಎಂದು ಆತ ತಿಳಿಸಿದ್ದಾನೆ. ಆದರೆ, ವಿಫಲ ಪ್ರಯತ್ನ ಪರೋಕ್ಷವಾಗಿ ವರದಾನವಾಗಿ ಪರಿಣಮಿಸಿದೆ ಎಂದು ಆತ ಹೇಳಿದ್ದಾನೆ. 

ಫಿಟ್ನೆಸ್ ಉತ್ಸಾಹಿ ಹಾಗೂ ಚಾರಣವನ್ನು ಆನಂದಿಸುವ ಸಹೋದರಿ ತನಗೆ ಪ್ರೇರಣೆ. ಆಕೆಗೆ ಕೂಡ ಪರ್ವತ ಚಾರಣದಲ್ಲಿ ಆಸಕ್ತಿ ಇದೆ ಎಂದು ಆತ ತಿಳಿಸಿದ್ದಾನೆ. 

‘‘ನನ್ನ ಮೊದಲ ಚಾರಣ ಮೌಂಟ್ ರುದುಗೈರಾಕ್ಕೆ. ನನಗೆ ಪರ್ವತದ ಬೇಸ್ ಕ್ಯಾಂಪ್‌ಗೆ ತಲುಪಲು ಕೂಡ ಸಾಧ್ಯವಾಗಲಿಲ್ಲ. ಅನಂತರ ನಾನು ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೈನೀಯರಿಂಗ್‌ಗೆ  ತೆರಳಿ 10 ದಿನಗಳ ತರಬೇತಿ ಪಡೆದೆ. ಅನಂತರ ಕೂಡ ವಿಫಲನಾದೆ. ಮತ್ತೆ ಮೌಂಟ್ ಎಲ್‌ಬ್ರಸ್‌ಗೆ ಏರಲು ತರಬೇತಿ ಪಡೆದುಕೊಂಡೆ. ಆದರೂ ವಿಫಲನಾದೆ. ಬಳಿಕ ನಿರಂತರ ಅಭ್ಯಾಸ ಹಾಗೂ ಫಿಟ್ನೆಸ್ ತರಬೇತಿಯಿಂದ ನೇಪಾಲದಲ್ಲಿರುವ ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಹಾಗೂ ಮನಾಲಿಯಲ್ಲಿರುವ ಫ್ರೆಂಡ್‌ಶಿಪ್ ಶಿಖರದ ಚಾರಣ ಪೂರ್ಣಗೊಳಿಸಿದೆ’’ ಎಂದು ವಿಶ್ವನಾಥ್ ಕಾರ್ತಿಕೇಯನ್ ಹೇಳಿದ್ದಾನೆ. 

ಚಾರಣವನ್ನು ಪೂರ್ಣಗೊಳಿಸಲು ನೆರವು ನೀಡಿದ ಸಲಹೆಗಾರರಾದ ಭರತ್ ಹಾಗೂ ರೋಮಿಲ್ ಅವರಿಗೆ ಕಾರ್ತಿಕೇಯನ್ ಕೃತಜ್ಞತೆ ಸಲ್ಲಿಸಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X