Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೀರಜ್‌ಗೆ ತಪ್ಪಿದ ಚಿನ್ನದ ಗುರಿ

ನೀರಜ್‌ಗೆ ತಪ್ಪಿದ ಚಿನ್ನದ ಗುರಿ

ಆಟ-ಕೂಟ

ಇಬ್ರಾಹಿಂ ಅಡ್ಕಸ್ಥಳಇಬ್ರಾಹಿಂ ಅಡ್ಕಸ್ಥಳ28 July 2022 11:28 AM IST
share
ನೀರಜ್‌ಗೆ ತಪ್ಪಿದ ಚಿನ್ನದ ಗುರಿ

ಒಲಿಂಪಿಕ್ ಚಾಂಪಿಯನ್ ಭಾರತದ ನೀರಜ್ ಚೋಪ್ರಾ ಸ್ಪರ್ಧಿಸಿದ ಬಹುತೇಕ ಎಲ್ಲ ಸ್ಪರ್ಧೆಗಳಲ್ಲೂ ಚಿನ್ನ ಬಾಚಿಕೊಂಡವರು. ಒಟ್ಟು 7 ಪದಕಗಳ ದಾಖಲೆಯಲ್ಲಿ 6 ಚಿನ್ನ ಮತ್ತು ಒಂದು ಬೆಳ್ಳಿ ಅವರ ಹೆಸರಲ್ಲಿತ್ತು. ಈ ಬಾರಿಯ ವರ್ಲ್ಡ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರಿಗೆ ಮತ್ತೆ ರಜತ ಪದಕ ಒಲಿದಿದೆ. ಗ್ರೆನಡಾದ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ ಅವರು ನೀರಜ್‌ಗೆ ಚಿನ್ನ ನಿರಾಕರಿಸಿದರು. ಏಶ್ಯನ್ ಜೂನಿಯರ್ ಚಾಂಪಿಯನ್‌ಶಿಪ್ಸ್‌ನಲ್ಲಿ ಬೆಳ್ಳಿಗೆ ಭಾಜನರಾಗಿದ್ದ ನೀರಜ್, ಒಲಿಂಪಿಕ್ ಗೇಮ್ಸ್, ಏಶ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ಏಶ್ಯನ್ ಚಾಂಪಿಯನ್‌ಶಿಪ್ಸ್, ಸೌತ್ ಏಶ್ಯನ್ ಗೇಮ್ಸ್, ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಬಾಚಿಕೊಂಡವರು.

ಚೋಪ್ರಾ ಭಾರತದ ಚಿನ್ನದ ಹುಡುಗ. ಅವರ ಪ್ರದರ್ಶನಕ್ಕಿಂತ ಮೊದಲು ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅತ್ಲೀಟ್‌ಗಳ ಸಾಧನೆ ಅಷ್ಟೇನು ಇರಲಿಲ್ಲ. 2018ರಲ್ಲಿ ಸಿಡಬ್ಲೂಜಿ ಚೊಚ್ಚಲ ಪ್ರವೇಶ ಮಾಡುವ ಮೊದಲು ನೀರಜ್ ಅವರು ಜೂನಿಯರ್ ವಿಶ್ವ ಚಾಂಪಿಯನ್ ಆಗಿದ್ದರು. ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದರು, ತಮ್ಮದೇ ಆದ ರಾಷ್ಟ್ರೀಯ ದಾಖಲೆಯನ್ನು ಪುನಃ ಬರೆದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಪ್ರಭಾವಶಾಲಿಯಾಗಿ ಹೊರಹೊಮ್ಮಿದರು. ಜು.23ರಂದು ಯೂಜೀನ್‌ನಲ್ಲಿ ನಡೆದ ವರ್ಲ್ಡ್ ಅತ್ಲೆಟಿಕ್ಸ್‌ನಲ್ಲಿ ನೀರಜ್ 88.13 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಪಡೆದು ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ. 2003ರಲ್ಲಿ ಪ್ಯಾರಿಸ್‌ನಲ್ಲಿ ಅಂಜು ಬಾಬಿ ಜಾರ್ಜ್ ವರ್ಲ್ಡ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಕಂಚು ಪಡೆದಿದ್ದರು. ಆ ಬಳಿಕ ಭಾರತದ ಖಾತೆಗೆ ಇನ್ನೊಂದು ಪದಕ ಜಮೆಯಾಗಲು 19 ವರ್ಷಗಳ ಕಾಲ ಕಾಯಬೇಕಾಯಿತು. ಕೊನೆಗೂ ನೀರಜ್ ಚೋಪ್ರಾ ಪದಕ ಜಮೆ ಮಾಡಿದರು. ನೀರಜ್ ಜೋಪ್ರಾ ಚಿನ್ನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಆ್ಯಂಡರ್ಸನ್ 94.54 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಪಡೆಯುವುದರೊಂದಿಗೆ ಸತತ ಎರಡನೇ ಬಾರಿ ಈ ಸಾಧನೆ ಮಾಡಿದರು. ಚೋಪ್ರಾ (88.13 ಮೀ.) ಬೆಳ್ಳಿಗೆ ಕೊರಳೊಡ್ಡಬೇಕಾಯಿತು. ಆ್ಯಂಡರ್ಸನ್ ಚಿಕ್ಕಂದಿನಲ್ಲಿ ಕ್ರಿಕೆಟ್ ಪ್ರೇಮಿಯಾಗಿದ್ದರು. ಅವರು ಒಮ್ಮೆ ಬ್ರೆಟ್ ಲೀ ಮತ್ತು ಶುಐಬ್ ಅಖ್ತರ್ ಅವರಂತೆ ಕ್ರಿಕೆಟ್‌ನಲ್ಲಿ ವೇಗದ ಬೌಲರ್ ಆಗುವ ಕನಸು ಕಂಡಿದ್ದರು.

ಆದರೆ ಬೋಲ್ಟ್ ಅವರ ಅಂತರ್‌ರಾಷ್ಟ್ರೀಯ ಸಾಧನೆಯನ್ನು ನೋಡಿ ಅವರಂತೆ ಓಡುವ ಅಭ್ಯಾಸ ನಡೆಸಿದರು. ಗಾಯದ ಸಮಸ್ಯೆ ಅವರನ್ನು ಓಟದಿಂದ ಹೊರದಬ್ಬಿತು. ಬಳಿಕ ಅವರು ಜಾವೆಲಿನ್‌ನತ್ತ ಹೆಚ್ಚಿನ ಗಮನ ಹರಿಸಿದರು. ನೀರಜ್ ಮತ್ತು ಆ್ಯಂಡರ್ಸನ್ ತಮ್ಮ ಜಾವೆಲಿನ್ ಥ್ರೋ ವೃತ್ತಿಜೀವನವನ್ನು ಒಟ್ಟಿಗೆ ಒಂದೇ ವರ್ಷ ಪ್ರಾರಂಭಿಸಿದರು. ಇವರಿಬ್ಬರ ವಯಸ್ಸು 24. ನಿಜ ಹೇಳಬೇಕೆಂದರೆ ನೀರಜ್ ಅವರು ಆ್ಯಂಡರ್ಸನ್‌ಗಿಂತ ಉತ್ತಮ ಸಾಧನೆ ಮಾಡಿದವರು. ಜಾವೆಲಿನ್ ಎಸೆತದ ಭವಿಷ್ಯದ ತಾರೆ ಎಂದು ಪರಿಗಣಿಸಲ್ಪಟ್ಟವರು. ನೀರಜ್‌ಗೆ ಯಾವಾಗಲೂ ಆ್ಯಂಡರ್ಸನ್ ಎದುರಾಳಿಯಾಗಿ ಇರುತ್ತಿದ್ದರು. 2016ರ ಅಂಡರ್ -20 ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚಿನ್ನ ಗೆದ್ದರೆ, ಆ್ಯಂಡರ್ಸನ್ ಕಂಚು ಪಡೆದಿದ್ದರು. ಕಾಮನ್ವೆಲ್ತ್ ಗೇಮ್ಸ್ 2018ರಲ್ಲಿ ಆ್ಯಂಡರ್ಸನ್ ಕಂಚಿನ ಪದಕವನ್ನು ಪಡೆದರೆ, ನೀರಜ್ ಚಿನ್ನಕ್ಕೆ ಗುರಿ ಇಟ್ಟರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆ್ಯಂಡರ್ಸನ್‌ಗೆ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ನೀರಜ್ ಚಿನ್ನದ ಪದಕದೊಂದಿಗೆ ಭಾರತದ ಪರ ಹೊಸ ಇತಿಹಾಸ ಬರೆದರು. ಒಲಿಂಪಿಕ್ ಬಳಿಕ ಆ್ಯಂಡರ್ಸನ್ ಪೀಟರ್ಸ್ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಂಡಿದ್ದಾರೆ. ಮುಂದಿನ ತಿಂಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಟಾರ್ ಅತ್ಲೀಟ್‌ಗಳಾದ ನೀರಜ್ ಮತ್ತು ಆ್ಯಂಡರ್ಸನ್ ಪರಸ್ಪರ ಮುಖಾಮುಖಿಯಾಗುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ನೀರಜ್ ಚೋಪ್ರಾ ಅವರು ತೊಡೆಸಂದು ಗಾಯದಿಂದಾಗಿ ಕೂಟದಿಂದ ಹೊರಗುಳಿಯಲಿದ್ದಾರೆಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ದೃಢಪಡಿಸಿದ್ದಾರೆ. ಇದರಿಂದಾಗಿ ಭಾರತದ ಪಾಲಿಗೆ ಒಂದು ಪದಕ ತಪ್ಪಲಿದೆ. ಹಾಲಿ ಚಾಂಪಿಯನ್ ಚೋಪ್ರಾಗೆ ಒಂದು ತಿಂಗಳ ವಿಶ್ರಾಂತಿ ಅಗತ್ಯ ಎಂದು ಮೆಹ್ತಾ ಹೇಳಿದ್ದಾರೆ.

ಹರ್ಯಾಣದ ಖಾಂದ್ರಾ ಪಾಣಿಪತ್‌ನಲ್ಲಿ ಜನಿಸಿದ್ದ ಚೋಪ್ರಾ ಅವರದ್ದು ರೈತ ಕುಟುಂಬ. ಅಂತಹ ಕುಟುಂಬದಲ್ಲಿ ಚೋಪ್ರಾ ಬೆಳಗಿದ್ದಾರೆ. ‘‘ನಾನು ಗೆಲ್ಲಲು ಹೋರಾಡುವುದಿಲ್ಲ, ಶ್ರೇಷ್ಠತೆಗಾಗಿ ಹೋರಾಡುತ್ತೇನೆ. ಚಿನ್ನವೇ ಗುರಿ, ಆದ್ದರಿಂದ ನಾನು ಸತತವಾಗಿ ಕಠಿಣ ಪರಿಶ್ರಮ ಹಾಕುತ್ತೇನೆ ಮತ್ತು ಸಾಧನೆ ಉತ್ತಮಗೊಳ್ಳುವತ್ತ ಗಮನ ಹರಿಸುತ್ತೇನೆ’’ ಎಂದು ಚೋಪ್ರಾ ಇತ್ತೀಚೆಗೆ ಹೇಳಿದ್ದರು.

ಸೌತ್ ಏಶ್ಯನ್ ಗೇಮ್ಸ್‌ನಲ್ಲಿ ಚೋಪ್ರಾ ನೀಡಿದ ಪ್ರದರ್ಶನದ ನೆರವಿನಲ್ಲಿ ಇಂಡಿಯನ್ ಆರ್ಮಿಯಲ್ಲಿ ಅವರು ನೌಕರಿ ಗಿಟ್ಟಿಸಿಕೊಂಡಿದ್ದರು. ಇದರಿಂದ ಅವರ ವೃತ್ತಿ ಬದುಕಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದೆ.

 ಭಾರತೀಯ ಅತ್ಲೆಟಿಕ್ಸ್‌ನ ಮೇಲೆ ಆಗಾಗ ಡೋಪಿಂಗ್ ಕರಿಛಾಯೆ ಆವರಿಸುತ್ತದೆ. ದಾಖಲೆ ಹೊಂದಿರುವವರು ಸೇರಿದಂತೆ ಉನ್ನತ ಮಟ್ಟದ ಕ್ರೀಡಾಪಟುಗಳು ಸಿಕ್ಕಿಬಿದ್ದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿನ್ನದ ಹುಡುಗ ಚೋಪ್ರಾ ಡೋಪಿಂಗ್ ಬಲೆಗೆ ಸಿಲುಕದೆ ಜಾವಲಿನ್ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮೆರೆಯಲಿ ಎಂದು ಹಾರೈಸೋಣ.

share
ಇಬ್ರಾಹಿಂ ಅಡ್ಕಸ್ಥಳ
ಇಬ್ರಾಹಿಂ ಅಡ್ಕಸ್ಥಳ
Next Story
X