ಡಿಕೆಎಸ್ಸಿ ಸಮಿತಿ; ಮಂಗಳೂರು ನಗರ ಶಾಖೆ ಉದ್ಘಾಟನಾ ಸಮಾರಂಭ

ಅಬ್ದುಲ್ಲಾ ಮಂಜನಾಡಿ, ಶೇಕ್ ಬಳ್ಕುಂಜೆ, ಅಬ್ದುಲ್ ಬಶೀರ್ ಕೈಕಂಬ
ಮಂಗಳೂರು : ಬಲ್ಮಠದಲ್ಲಿರುವ ಸಹೋದಯ ಸಭಾಭವನದಲ್ಲಿ ಡಿಕೆಎಸ್ಸಿ ಜಿಲ್ಲಾ ಸಮಿತಿ ಅಧೀನದಲ್ಲಿ ಮಂಗಳೂರು ನಗರ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿಯ ಅಧ್ಯಕ್ಷ ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್ ವಹಿಸಿದ್ದರು.
ಕೇಂದ್ರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಕೆ.ಸಿ.ಇಸ್ಮಾಯಿಲ್ ಕಿನ್ಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಡಿಕೆಎಸ್ಸಿ ನಡೆದು ಬಂದ ದಾರಿ ಹಾಗೂ ಅದರ ಬೆಳವಣಿಗೆಯ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿ ಡಿಕೆಎಸ್ಸಿ ಸಂಘಟನೆಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಹಾಗೂ ಹಾಲಿ ಜಿಲ್ಲಾ ಸಮಿತಿಯ ಸಲಹೆಗಾರರಾದ ಉಮರ್ ಹಾಜಿ ಮುಕ್ವೆ ಭಾಗವಹಿಸಿದ್ದರು.
ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷರಾದ ಹುಸೈನ್ ಹಾಜಿ ಕಿನ್ಯಾ ನೇತೃತ್ವದಲ್ಲಿ ಮಂಗಳೂರು ನಗರ ನೂತನ ಸಮಿತಿಯ ರಚನೆಯಾಯಿತು.
ಗೌರವಾಧ್ಯಕ್ಷರಾಗಿ ಅಬ್ಬಾಸ್ ಉಚ್ಚಿಲ, ಸಮಿತಿಯ ಅಧ್ಯಕ್ಷರಾಗಿ ಎನ್.ಎಸ್.ಅಬ್ದುಲ್ಲಾ ಮಂಜನಾಡಿ, ಪ್ರಧಾನ ಕಾರ್ಯದರ್ಶಿ ಶೇಕ್ ಬಳ್ಕುಂಜೆ, ಕೋಶಾಧಿಕಾರಿಯಾಗಿ ಅಬ್ದುಲ್ ಬಶೀರ್ ಕೈಕಂಬ, ಉಪಾಧ್ಯಕ್ಷರುಗಳಾಗಿ ಉದ್ಯಮಿ ಸ್ವಾಲಿಹ್ ಹಾಜಿ ಮಂಗಳೂರು ಮತ್ತು ಅಬ್ದುಲ್ ಲತೀಫ್ ಏಶಿಯನ್ ಟೈಲ್ಸ್ & ಸ್ಯಾನಿಟರಿ, ಕಾರ್ಯದರ್ಶಿಗಳಾಗಿ ಇಬ್ರಾಹಿಂ ದುಬಾಲ್, ಉದ್ಯಮಿ ಹನೀಫ್ ಫಳ್ನೀರ್, ಅಬ್ದುಲ್ ರಝಾಕ್, ಮಿನಾಝ್ ಸಲಹೆಗಾರರಾಗಿ ಅಲಿ ಅಬ್ಬಾಸ್, ಬದ್ರುದ್ದೀನ್ ಮಂಗಳೂರು, ಉಮರ್ ಬಿ.ಎ., ಡಾ. ನಜೀಬ್ ಕಣ್ಣಂಗಾರ್, ಇಸ್ಹಾಕ್ ಬೊಳ್ಳಾಯಿ, ಅಮಾನುಲ್ಲಾ.ಎ.(ನಿರೀಕ್ಷಕರು ಲೋಕಾಯುಕ್ತ) ಅಝ್ಮತ್ ಅಲಿ (ನಿರೀಕ್ಷಕರು, ಆರಕ್ಷಕ ಠಾಣೆ ಪಣಂಬೂರು) ಸಿರಾಜುದ್ದೀನ್ ಸಿ.ಎ., ಎಚ್.ಎಚ್. ಅಖೀಲ್ ಹಸನ್ ಇಂಜಿನಿಯರ್, ಎಚ್.ಎಚ್.ಅಮೀನ್, ಅಡ್ವಕೇಟ್ ಬದ್ರುದ್ದೀನ್ ಮಂಗಳೂರು, ಆರ್ಗನೈಝರ್(ಸಂಘಟಕ)ಗಳಾಗಿ ಅಬ್ದುಲ್ ಹಮೀದ್ ಕೊಂಚಾರ್, ಶೇಖ್ ಮಂಗಳೂರು, ಸದಸ್ಯರುಗಳಾಗಿ ಅನ್ವರ್ ಹುಸೈನ್ ಗೂಡಿನಬಳಿ, ಹಂಝ ಹಾಜಿ ಮಿತ್ತೂರ್, ಸಗೀರ್ ಬಂಟ್ವಾಳ, ಸಿದ್ದೀಕ್ ಬೆಂಗರೆ, ಅಮೀರುದ್ದೀನ್, ಆಯ್ಕೆಯಾದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡುತ್ತಾ ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ರವರು, ಮಂಗಳೂರಿನಲ್ಲಿ ಅದೆಷ್ಟೋ ಪ್ರತಿಷ್ಠಿತ ವ್ಯಕ್ತಿಗಳಿದ್ದಾರೆ, ಇಲ್ಲಿ ಬಂದಿರುವುದು ಬೆರಳೆಣಿಕೆಯ ಕೆಲವರು ಮಾತ್ರ. ಮುಂದಿನ ದಿನಗಳಲ್ಲಿ ಈ ಸಮಿತಿಯ ಮೂಲಕ ಅವರೆಲ್ಲರನ್ನು ಡಿಕೆಎಸ್ಸಿಗೆ ಸೇರಿಸುವಲ್ಲಿ ಸಫಲರಾಗಬೇಕು. ಡಿಕೆಎಸ್ಸಿಯ ಬಗ್ಗೆ ಎಲ್ಲರೂ ತಿಳಿಯಬೇಕು. ಈಗಿನ ಅಂಕಿ ಅಂಶಗಳ ಪ್ರಕಾರ ಅಲ್ ಇಹ್ಸಾನ್ ಅತೀ ದೊಡ್ಡ ವಿದ್ಯಾ ಸಂಸ್ಥೆ. ಈ ಸಂಸ್ಥೆಯನ್ನು ರಾಜ್ಯದಲ್ಲೆಡೆ ವಿಸ್ತರಿಸಬೇಕಿದೆ. ಇದಕ್ಕೆ ಸಹಕಾರಿಯಾಗುವಂತೆ ಎಲ್ಲಾ ಕಡೆಗಳಲ್ಲೂ ಘಟಕಗಳು ಹುಟ್ಟಿ ಬರಬೇಕು. ಅದಕ್ಕಾಗಿ ನಮ್ಮ ಜಿಲ್ಲಾ ಸಮಿತಿ ಶ್ರಮಿಸುತ್ತಿದೆ. ಎಲ್ಲಾ ಸದಸ್ಯರು ಇದಕ್ಕಾಗಿ ಸಹಕರಿಸಬೇಕಾಗಿದೆ ಎಂದರು.
ನೂತನ ಸಮಿತಿಯ ಅಧ್ಯಕ್ಷರಾದ ಎನ್.ಎಸ್.ಅಬ್ದುಲ್ಲಾ ಮಂಜನಾಡಿ ಮಾತನಾಡುತ್ತಾ ಬೆರಳೆಣಿಕೆಯ ಕೆಲವೊಂದು ನಿಸ್ವಾರ್ಥಿ ಪ್ರವಾಸಿಗಳಿಂದ ಆರಂಭಗೊಂಡ ಸಂಸ್ಥೆ ಇಂದಿಗೆ ಹತ್ತರಿಂದ ಹದಿನೈದು ಸಾವಿರ
ಸದಸ್ಯರನ್ನೊಳಗೊಂಡ ಬೃಹತ್ ಸಂಘಟನೆಯಾಗಿದೆ. ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಹೆಚ್ಚಿನ ಯೋಜನೆಗಳನ್ನು ಪೂರ್ತಿಗರಿಸಲು ಸಾಧ್ಯವಾಗಿದೆ ಎಂದರು. ಇಂದಿನ ಪ್ರಸಕ್ತ ಸನ್ನಿವೇಶಕ್ಕನುಗುಣವಾಗಿ ಇನ್ನಷ್ಟು ಪದ್ಧತಿಗಳನ್ನು ರೂಪೀಕರಿಸುವ ಅವಶ್ಯಕತೆ ಇದೆ. ಅದಕ್ಕಾಗಿ ನಮ್ಮ ಸಂಸ್ಥೆಗೆ ವಿದ್ಯಾವಂತ ಸುನ್ನತ್ ಜಮಾಅತಿನ ಆಶಯದಲ್ಲಿರುವ ಯುವಕರು, ಉದ್ಯಮಿಗಳು, ಸರ್ಕಾರಿ ಉದ್ಯೋಗದಲ್ಲಿರುವವರು, ಎಲ್ಲರೂ ಮುಂದೆ ಬಂದು ಕಾರ್ಯ ನಿರ್ವಹಿಸಬೇಕಾಗಿದೆ. ಅದಕ್ಕಾಗಿ ಜಿಲ್ಲಾ ಸಮಿತಿಯ ಅಧೀನದಲ್ಲಿ ಮಂಗಳೂರು ನಗರ ಘಟಕವು
ಕಾರ್ಯಾಚರಿಸಬೇಕಾಗಿದೆ ಎಂದರು.
ಕಾರ್ಯಕ್ರಮವನ್ನುದ್ದೇಶಿಸಿ ಸಲಹೆಗಾರರಾದ ಡಾ. ನಜೀಬ್ ಕಣ್ಣಂಗಾರ್, ಉಪಾಧ್ಯಕ್ಷರಾದ ಉದ್ಯಮಿ ಸ್ವಾಲಿಹ್ ಹಾಜಿ ಮಾತನಾಡಿದರು.
ಎನ್.ಎಸ್. ಅಬ್ದುಲ್ಲಾ ಮಂಜನಾಡಿ ಸ್ವಾಗತಿಸಿದರು. ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖ್ ಬಳ್ಕುಂಜೆ ವಂದಿಸಿದರು. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿದರು.