ಮಲ್ಪೆ; ಬೈಲಕೆರೆ ಬಿಜೆಪಿ ಮುಖಂಡರಿಂದ ಸಾಮೂಹಿಕ ರಾಜೀನಾಮೆ

ಮಲ್ಪೆ, ಜು.28: ಪ್ರವೀಣ್ ನೆಟ್ಟಾರು ಕೊಲೆ ವಿಚಾರದಲ್ಲಿ ನೊಂದ ಮಲ್ಪೆ ಬೈಲಕೆರೆಯ ಹಲವು ಮಂದಿ ಬಿಜೆಪಿ ಮುಖಂಡರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ತೆಂಕನಿಡಿಯೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಪ್ರಕಾಶ್ ಬೈಲಕೆರೆ, ಶಕ್ತಿಕೇಂದ್ರದ ಅಧ್ಯಕ್ಷ, ಮಾಜಿ ತಾಪಂ ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ತೆಂಕನಿಡಿಯೂರು ಗ್ರಾಪಂ ಉಪಾಧ್ಯಕ್ಷ ಅರುಣ್ ಜತ್ತನ್ನ, ಗ್ರಾಪಂ ಸದಸ್ಯ ಹಾಗೂ ವಾರ್ಡ್ ಸಮಿತಿ ಅಧ್ಯಕ್ಷ ಸತೀಶ್ ಆರ್.ಪೂಜಾರಿ, ಗ್ರಾಪಂ ಸದಸ್ಯೆ ವಿಕಿತಾ ಸುರೇಶ್, ಮಂಜುನಾಥ್, ಪ್ರಶಾಂತ್ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
Next Story