ಬೈಠಕ್ ನಲ್ಲಿ ಕಲಿತದ್ದನ್ನು ಇಲ್ಲಿ ಗಿಳಿಪಾಠ ಒಪ್ಪಿಸುತ್ತಿದ್ದೀರಾ?: ಗೃಹ ಸಚಿವರಿಗೆ ಪ್ರಕಾಶ್ ರಾಥೋಡ್ ತರಾಟೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಯುವ ಮುಖಂಡ ಪ್ರವೀಣ್ ಹತ್ಯೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್‍ನ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ್ ಕೆ. ರಾಥೋಡ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗುರುವಾರ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಪ್ರಕಾಶ್ ರಾಥೋಡ್, 'ನಿಮಗೆ ಈ ಸಂಗತಿಯನ್ನು ಹೇಳಿದವರು ಯಾರು? ಬೈಠಕ್ ನಲ್ಲಿ ಕಲಿತದ್ದನ್ನು ಇಲ್ಲಿ ಗಿಳಿಪಾಠ ಒಪ್ಪಿಸುತ್ತಿದ್ದೀರಾ? ಶಿವಮೊಗ್ಗ ಹರ್ಷ, ಬೆಂಗಳೂರು ಚಂದ್ರು ಕೊಲೆ ಪ್ರಕರಣದಲ್ಲಿ ನೀವು ಕೊಟ್ಟ ಹೇಳಿಕೆಗೆ ಇಲಾಖೆಯ ಪಿಸಿ ಗಳೂ ನಿಮ್ಮನ್ನು ಗೇಲಿ ಮಾಡಿ ನಕ್ಕಿದ್ದರು. ಅಧಿಕಾರಿಗಳು ಬಹಿರಂಗವಾಗಿ ನಿಮ್ಮದು ಹೇಳಿಕೆ ಸುಳ್ಳು ಎಂದಿದ್ದರು' ಎಂಬುದಾಗಿ ಟ್ವೀಟಿಸಿದ್ದಾರೆ.
ಗೃಹ ಸಚಿವರ ಟ್ವೀಟ್ ಇಂತಿದೆ... :
ಕೇರಳಕ್ಕೆ ಹೊಂದಿಕೊಂಡಿರುವ ಕರಾವಳಿ ತೀರದ ಈ ಪ್ರದೇಶದಲ್ಲಿ ಈ ಹಿಂದೆಯೂ ಇಂತಹ ದುಷ್ಕೃತ್ಯಗಳು ನಡೆದಿವೆ. ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣದಲ್ಲಿ ಕೇರಳ ರಾಜ್ಯದಿಂದ ಹಂತಕರು ಬಂದು ಕೃತ್ಯ ನಡೆಸಿ ವಾಪಸ್ ಕೇರಳಕ್ಕೆ ಪರಾರಿಯಾಗಿರುವ ಸಾಧ್ಯತೆಗಳಿವೆ. ನಮ್ಮ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ.
ಆರಗ ಜ್ಞಾನೇಂದ್ರ, ಗೃಹ ಸಚಿವರು.
ನಿಮಗೆ ಈ ಸಂಗತಿಯನ್ನು ಹೇಳಿದವರು ಯಾರು @JnanendraAraga ರೇ?ಬೈಠಕ್ ನಲ್ಲಿ ಕಲಿತದ್ದನ್ನು ಇಲ್ಲಿ ಗಿಳಿಪಾಠ ಒಪ್ಪಿಸುತ್ತಿದ್ದೀರಾ? ಶಿವಮೊಗ್ಗ ಹರ್ಷ, ಬೆಂಗಳೂರು ಚಂದ್ರು ಕೊಲೆ ಪ್ರಕರಣದಲ್ಲಿ ನೀವು ಕೊಟ್ಟ ಹೇಳಿಕೆಗೆ ಇಲಾಖೆಯ ಪಿಸಿ ಗಳೂ ನಿಮ್ಮನ್ನು ಗೇಲಿ ಮಾಡಿ ನಕ್ಕಿದ್ದರು. ಅಧಿಕಾರಿಗಳು ಬಹಿರಂಗವಾಗಿ ನಿಮ್ಮದು ಹೇಳಿಕೆ ಸುಳ್ಳು ಎಂದಿದ್ದರು. pic.twitter.com/s98M3jIUu4
— Prakash Rathod (@PRathod_INC) July 28, 2022