ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹಿಂದೆ ಸರಿಯಲು ರಶ್ಯ ನಿರ್ಧಾರ
ಮಾಸ್ಕೊ, ಜು.28: ತಮ್ಮ ದೇಶವು 2024ರ ಬಳಿಕ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದೆ ಎಂದು ರಶ್ಯದ ಬಾಹ್ಯಾಕಾಶ ಯೋಜನೆಯ ನೂತನ ಮುಖ್ಯಸ್ಥ ಯೂರಿ ಬೊರಿಸೊವ್ ಹೇಳಿದ್ದಾರೆ. ಆದರೆ ಅಮೆರಿಕದೊಂದಿಗಿನ ತನ್ನ 2 ದಶಕಗಳ ಹಳೆಯ ಕಕ್ಷೀಯ ಪಾಲುದಾರಿಕೆಯನ್ನು ಕೊನೆಗೊಳಿಸುವ ಉದ್ದೇಶದ ಬಗ್ಗೆ ರಶ್ಯದಿಂದ ಅಧಿಕೃತ ಮಾಹಿತಿ ಲಭಿಸಿಲ್ಲ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ.
ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಬಳಿಕ ರಶ್ಯ-ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಿರುವುದರಿಂದ ಅಮೆರಿಕ-ರಶ್ಯ ಬಾಹ್ಯಾಕಾಶ ಸಹಕಾರ ಪಾಲುದಾರಿಕೆಯ ಬಗ್ಗೆ ಪ್ರಶ್ನೆಗಳು ಮೂಡಿದ್ದರೂ, ರಶ್ಯದ ಬಾಹ್ಯಾಕಾಶ ಸಂಸ್ಥೆ ರೊಸ್ಕೊಸ್ಮೋಸ್ನ ನೂತನ ಪ್ರಧಾನ ನಿರ್ದೇಶಕ ಬೊರಿಸೊವ್ ಅವರ ಘೋಷಣೆ ಅಚ್ಚರಿಗೆ ಕಾರಣವಾಗಿದೆ
Next Story





