ಕೊಲೆಯಾದ ಮಸೂದ್ ಮನೆಗೆ ಶಾಸಕ ಯು.ಟಿ. ಖಾದರ್ ಭೇಟಿ, ಹತ್ಯೆಯಾದ ಪ್ರವೀಣ್ ಕುಟುಂಬಸ್ಥರ ಜತೆ ಮಾತುಕತೆ

ಮಂಗಳೂರು, ಜು. 29: ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಹತ್ಯೆಗೀಡಾದ ಮಸೂದ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದ ಶಾಸಕ ಯು.ಟಿ.ಖಾದರ್ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರುರವರ ಪತ್ನಿ ಮತ್ತು ಹೆತ್ತವರು ವಿಶ್ರಾಂತಿಯಲ್ಲಿರುವುದರಿಂದ ದೂರವಾಣಿ ಮೂಲಕ ಸಾಂತ್ವನ ತಿಳಿಸಿದ್ದಾರೆ.
ಬೆಂಗಳೂರಿನಿಂದ ಇಂದು ಮುಂಜಾನೆ ಮಂಗಳೂರು ತಲುಪಿದ ವಿಪಕ್ಷ ಉಪ ನಾಯಕ, ಶಾಸಕ ಯು.ಟಿ.ಖಾದರ್‌ರವರು ಕಳೆದ ವಾರ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಹತ್ಯೆಯಾದ ಮಸೂದ್‌ರವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರುರವರ ಮನೆಗೂ ಭೇಟಿ ನೀಡಲಿದ್ದರು. ಆದರೆ, ಅವರ ಪತ್ನಿ ಮತ್ತು ಹೆತ್ತವರು ವಿಶ್ರಾಂತಿಯಲ್ಲಿರುವುದರಿಂದ ನೆಟ್ಟಾರುರವರ ಚಿಕ್ಕಪ್ಪ ವಿಶ್ವನಾಥ ಅವರಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ತಿಳಿಸಿದರು.