ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಬಿಜೆಪಿ ಸರ್ಕಾರದ ನಡೆ ಖಂಡನೀಯ: ಡಿ.ಕೆ. ಶಿವಕುಮಾರ್
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

ಬೆಂಗಳೂರು: 'ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ನಿಧನವು ಅತ್ಯಂತ ದುಃಖಕರ ವಿಷಯ ಆದರೆ ಅಂತ್ಯಸಂಸ್ಕಾರ ಮೆರವಣಿಗೆಯ ವೇಳೆ ಬಿಜೆಪಿ ಕಾರ್ಯಕರ್ತರು ನಡೆಸಿದ ದಾಂಧಲೆ ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ಆಸ್ತಿಪಾಸ್ತಿ ನಾಶಕ್ಕೆ ಮುಂದಾದ ಗುಂಪನ್ನು ಚದುರಿಸಲು ಕ್ರಮಕೈಗೊಂಡ 3 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಬಿಜೆಪಿ ಸರ್ಕಾರದ ನಡೆ ಖಂಡನೀಯ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬಿಜೆಪಿ ಪಕ್ಷವು ಈ ಮೂಲಕ ಗೂಂಡಾ ಸಂಸ್ಕೃತಿಗೆ ಒತ್ತು ನೀಡುತ್ತಿದೆ. ಸಾರ್ವಜನಿಕ ಆಸ್ತಿಗಳನ್ನು ನಾಶ ಮಾಡಲು ಮುಂದಾದವರನ್ನು ತಮ್ಮ ಕಾರ್ಯಕರ್ತರು ಎಂಬ ಕಾರಣಕ್ಕೆ ಬಿಜೆಪಿಯು ಬಂಧಿಸದೇ ಬಿಟ್ಟಿದೆಯೇ? ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ಮೂಲಕ ಯಾವ ಸಂದೇಶವನ್ನು ಬಿಜೆಪಿ ನೀಡುತ್ತಿದೆ? ಮಾನ್ಯ ಗೃಹಸಚಿವರು ಇದಕ್ಕೆ ಉತ್ತರಿಸುವರೇ' ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಳ್ಳಾರೆ, ಸುಬ್ರಹ್ಮಣ್ಯ ಪಿಎಸ್ಸೈಗಳ ದಿಢೀರ್ ವರ್ಗಾವಣೆ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟೂರು ಅವರ ನಿಧನವು ಅತ್ಯಂತ ದುಃಖಕರ ವಿಷಯ ಆದರೆ ಅಂತ್ಯಸಂಸ್ಕಾರ ಮೆರವಣಿಗೆಯ ವೇಳೆ ಬಿಜೆಪಿ ಕಾರ್ಯಕರ್ತರು ನಡೆಸಿದ ದಾಂಧಲೆ ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ಆಸ್ತಿಪಾಸ್ತಿ ನಾಶಕ್ಕೆ ಮುಂದಾದ ಗುಂಪನ್ನು ಚದುರಿಸಲು ಕ್ರಮಕೈಗೊಂಡ 3 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಬಿಜೆಪಿ ಸರ್ಕಾರದ ನಡೆ ಖಂಡನೀಯ.
— DK Shivakumar (@DKShivakumar) July 29, 2022
1/2







