ಮೊದಲ ಟ್ವೆಂಟಿ-20: ವೆಸ್ಟ್ಇಂಡೀಸ್ಗೆ 191 ರನ್ ಗುರಿ ನೀಡಿದ ಭಾರತ
ರೋಹಿತ್ ಶರ್ಮಾ ಅರ್ಧಶತಕ, ದಿನೇಶ್ ಕಾರ್ತಿಕ್ ಅಬ್ಬರದ ಬ್ಯಾಟಿಂಗ್

Photo:PTI
ತರೌಬ, ಜು.29: ನಾಯಕ, ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ(64 ರನ್, 44 ಎಸೆತ, 7 ಬೌಂಡರಿ, 2 ಸಿಕ್ಸರ್)ಹಾಗೂ ವಿಕೆಟ್ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ (ಔಟಾಗದೆ 41, 19 ಎಸೆತ, 4 ಬೌಂಡರಿ, 2 ಸಿಕ್ಸರ್)ಸಾಹಸದ ನೆರವಿನಿಂದ ಭಾರತವು ವೆಸ್ಟ್ಇಂಡೀಸ್ ಗೆಲುವಿಗೆ 191 ರನ್ ಗುರಿ ನೀಡಿದೆ.
ಶುಕ್ರವಾರ ಟಾಸ್ ಜಯಿಸಿದ ವಿಂಡೀಸ್ ನಾಯಕ ನಿಕೊಲಸ್ ಪೂರನ್ ಭಾರತವನ್ನು ಬ್ಯಾಟಿಂಗ್ಗೆ ಇಳಿಸಿದರು. ಭಾರತವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್(24 ರನ್)ಜೊತೆಗೆ ಇನಿಂಗ್ಸ್ ಆರಂಭಿಸಿದ ರೋಹಿತ್ ಮೊದಲ ವಿಕೆಟಿಗೆ 44 ರನ್ ಜೊತೆಯಾಟ ನಡೆಸಿದರು.
ಈ ಇಬ್ಬರು ಬೇರ್ಪಟ್ಟ ಬಳಿಕ ಶ್ರೇಯಸ್ ಅಯ್ಯರ್(0)ರಿಷಭ್ ಪಂತ್(14 ರನ್) , ಹಾರ್ದಿಕ್ ಪಾಂಡ್ಯ (1) ಬೇಗನೆ ಔಟಾದರು. ಆಗ ತಂಡಕ್ಕೆ ಆಸರೆಯಾದ ಹಿರಿಯ ಬ್ಯಾಟರ್ ದಿನೇಶ್ ಕಾರ್ತಿಕ್ ಆಲ್ರೌಂಡರ್ ಆರ್.ಅಶ್ವಿನ್ (ಔಟಾಗದೆ 13 ರನ್, 10 ಎಸೆತ)ಜೊತೆಗೂಡಿ 7ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 25 ಎಸೆತಗಳಲ್ಲಿ 52 ರನ್ ಸೇರಿಸಿ ತಂಡದ ಮೊತ್ತವನ್ನು 190ಕ್ಕೆ ತಲುಪಿಸಿದರು.
ವಿಂಡೀಸ್ ಪರ ಅಲ್ಝಾರಿ ಜೋಸೆಫ್(2-46)ಯಶಸ್ವಿ ಬೌಲರ್ ಎನಿಸಿಕೊಂಡರು.