ಗಲ್ವಾನ್ ಘರ್ಷಣೆಗಳಲ್ಲಿ ಚೀನಿಯರ ಸಾವುನೋವುಗಳ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ: ಸಿಐಸಿ

ಹೊಸದಿಲ್ಲಿ,ಜು.29: ಎರಡು ವರ್ಷಗಳ ಹಿಂದೆ ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಘರ್ಷಣೆಯಲ್ಲಿ ಚೀನಿಯರ ಸಾವುನೋವುಗಳ ಕುರಿತ ಮಾಹಿತಿಗಳನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ವು ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.
ಆರ್ಟಿಐ ಅರ್ಜಿದಾರ ಅಖಂಡ್ ಅವರು,2020,ಜೂ.15 ಮತ್ತು 16ರ ನಡುವಿನ ರಾತ್ರಿ ವಾಸ್ತವ ನಿಯಂತ್ರಣ ರೇಖೆಯ ಸಮೀಪ ಗಲ್ವಾನ್ ಕಣಿವೆಯಲ್ಲಿ ಸಂಭವಿಸಿದ್ದ ಘರ್ಷಣೆಯಲ್ಲಿ ಭಾರತೀಯ ಯೋಧರ ಸಾವುನೋವುಗಳು ಹಾಗೂ ಮೃತ ಯೋಧರ ಕುಟುಂಬಗಳಿಗೆ ಪುನರ್ವಸತಿ ಮತ್ತು ಪಾವತಿಸಲಾಗಿರುವ ಪರಿಹಾರದ ಬಗ್ಗೆಯೂ ಮಾಹಿತಿಗಳನ್ನು ಕೋರಿದ್ದರು. ಘರ್ಷಣೆಯ ಬಳಿಕ ಯಾವುದೇ ಭಾರತೀಯ ಯೋಧರು ನಾಪತ್ತೆಯಾಗಿದ್ದಾರೆಯೇ ಎನ್ನುವುದನ್ನೂ ತಿಳಿಯಲು ಅವರು ಬಯಸಿದ್ದರು.
ಕೋರಲಾಗಿದ್ದ ಮಾಹಿತಿಗಳನ್ನು ಆರ್ಟಿಐ ಕಾಯ್ದೆಯ 8(1)(ಎ) ಮತ್ತು 8(1)(ಜೆ) ಕಲಮ್ಗಳಡಿ ಬಹಿರಂಗಗೊಳಿಸಲು ಸೇನೆಯು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅಖಂಡ್ ಸಿಐಸಿ ಮೊರೆ ಹೋಗಿದ್ದರು.
Next Story





