ಸಹಜ ಸ್ಥಿತಿಗೆ ಮರಳಿದ ಸುರತ್ಕಲ್

ಮಂಗಳೂರು: ಗುರುವಾರ ರಾತ್ರಿ ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆಯಿಂದ ಅಘೋಷಿತ ಬಂದ್ ವಾತಾವರಣಕ್ಕೆ ತಿರುಗಿದ್ದ ಸುರತ್ಕಲ್ ಪಟ್ಟಣ ಇಂದು ಸಹಜ ಸ್ಥಿತಿಗೆ ಮರಳಿದೆ.
ಅಂಗಡಿ-ಮುಂಗಟ್ಟುಗಳು ತೆರೆದು ಎಂದಿನಂತೆ ಕಾರ್ಯಾಚರಿಸುತ್ತಿದ್ದು ಆಟೋರಿಕ್ಷಾಗಳು, ಬಸ್‌ಗಳು ಎಂದಿನಂತೆ ಓಡಾಡುತ್ತಿವೆ.
ಶುಕ್ರವಾರ ಸಂಜೆ ಕಮಿಷನರ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಪಿ ತುಕಡಿಗಳು ಪಥಸಂಚಲನ ನಡೆಸಿ ಜನರಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿದ್ದರು.
ಅದರೂ, ಪಟ್ಟಣದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದ್ದು, ಸದ್ಯ ಕೃತ್ಯ ನಡೆದ ಸ್ಥಳದಲ್ಲಿ ಒಂದು ಕೆಎಸ್ಆರ್‌ಪಿ ತುಕಡಿ ಸೇರಿದಂತೆ ನಗರದಲ್ಲಿ 3 ಕೆಎಸ್‌ಆರ್‌ಪಿಯನ್ನು ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







.jpeg)
.jpeg)



