ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಭೇಟಿಯಾದ ಸಿದ್ದರಾಮಯ್ಯ

ಚನ್ನೈ, ಜು.30: ತಮಿಳುನಾಡು ಪ್ರವಾಸದಲ್ಲಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ತಮಿಳುನಾಡಿನ ವಿಡುದಲೈ ಚಿರುದೈಗಳ್ (ವಿಸಿಕೆ) ಪಕ್ಷ ಕೊಡುವ 'ಅಂಬೇಡ್ಕರ್ ಸುಡರ್' ಪ್ರಶಸ್ತಿ ಸ್ವೀಕರಿಸಲು ತಮ್ಮ ಆಪ್ತರೊಂದಿಗೆ ಚೆನ್ನೈಗೆ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದಾರೆ.
ಸಚಿವರಾದ ದೊರೈ ಮುರುಗನ್, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಳಗಿರಿ, ಸಂಸದರಾದ ತೋಲ್ ತಿರುಮಾವಲವನ್ ಮತ್ತಿತರ ನಾಯಕರು ಈ ವೇಳೆ ಹಾಜರಿದ್ದರು.
ಇಂದಿನ ಚನ್ನೈ ಪ್ರವಾಸದ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ @mkstalin ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಸಚಿವರಾದ ದೊರೈ ಮುರುಗನ್, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ @KS_Alagiri, ಸಂಸದರಾದ ತಿರುಮಾವಲವನ್ ಮತ್ತಿತರ ನಾಯಕರು ಈ ವೇಳೆ ಹಾಜರಿದ್ದರು. pic.twitter.com/cYbOd2sPMO
— Siddaramaiah (@siddaramaiah) July 30, 2022
Next Story









