ಸರಕಾರ ಪರಿಹಾರ ನೀಡದೆ ಶಾಂತಿ ಸೌಹರ್ದತೆಗೆ ಕುಂದಾಗಿದೆ: ಐವನ್ ಡಿಸೋಜ ಖಂಡನೆ

ಮಂಗಳೂರು: ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು ಕೊಲೆಯಾದ 3 ಕಡೆಗಳ ಪೈಕಿ ಕೇವಲ ಒಂದು ಕುಟುಂಬಕ್ಕೆ ಮಾತ್ರ ಸಾರ್ವಜನಿಕರ ಹಣದಲ್ಲಿ 25ಲಕ್ಷ ರೂಪಾಯಿ ನೀಡಿದ್ದು, ಅಂತಹದೇ ಪ್ರಕರಣಗಳಲ್ಲಿ ಕೊಲೆಗೀಡಾದ ಮತ್ತೆರಡು ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡದೇ, ಸೌಹರ್ದತೆ ಸಭೆ ಕರೆದು, ‘ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬ ಮಲತಾಯಿ ಧೋರಣೆ ತೋರಿಸಿರುವುದೇ ಶಾಂತಿ ಸಭೆಯ ಬಹಿಷ್ಕಾರಕ್ಕೆ ಮೂಲ ಕಾರಣವಾಗಿದ್ದು, ಸರಕಾರದ ಮೇಲೆ ನಂಬಿಕೆ ಕಳೆದುಕೊಂಡ ಸಮಾಜದ ಪ್ರಮುಖ ವರ್ಗವು ಸರಕಾರ ಪರಿಹಾರ ಯಾಕೆ ನೀಡಿಲ್ಲ ?. ಎಂಬ ಪ್ರಶ್ನೆಗೆ ಮೊದಲು ಉತ್ತರಿಸಿ. ಎಲ್ಲರನ್ನು ಸಮಾನತೆಯಿಂದ ನೋಡಿ ಎಂದು ಮಾಜಿ ಶಾಸಕ ಐವನ್ ಡಿಸೋಜ ಸರಕಾರವನ್ನು ಒತ್ತಾಯಿಸಿದ್ದಾರೆ.
ಒಂದು ಕೇಸು ಎನ್.ಐ.ಎ.ಗೆ, ಮತ್ತೆರಡು ಕೇಸುಗಳು ರಾಜ್ಯ ಸರಕಾರ ತೀರ್ಮಾನಿಸುವುದು ಸಹಜವಾಗಿ ಸರಕಾರದ ಮೇಲೆ ಜನರಿಗೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಕಾನೂನು ಕ್ರಮ ಕೈಗೊಂಡ ಪೊಲೀಸರಿಗೆ ವರ್ಗಾವಣೆ, ಇಂತಹ ಕ್ರಮಗಳಿಂದ ಸರಕಾರ ತನ್ನ ದಾರಿಯನ್ನು ಬಿಟ್ಟು, ಎಲ್ಲರ ರಕ್ಷಣೆಗೆ ಮುಂದಾಗದೇ ಕೇವಲ ಒಂದು ವರ್ಗದ ಸರಕಾರವಾಗಿ ಆಡಳಿತ ನಡೆಸುವುದು ಖೇದಕರ ವಿಚಾರ. ಈ ಬಗ್ಗೆ ಕೂಡಲೇ ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡಬೇಕು ಮತ್ತು ಪರಿಹಾರ ಘೋಷಿಸುವಂತೆ ಮಾಡಬೇಕು. ಆಡಳಿತ ವೈಖರ್ಯತೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಐವನ್ ಡಿ ಸೋಜ ಒತ್ತಾಯಿಸಿದ್ದಾರೆ.







