ಸಿಇಟಿ ಫಲಿತಾಂಶ: ದ.ಕ. ಜಿಲ್ಲೆಗೆ ಮೂರು ರ್ಯಾಂಕ್

ಅದಿತ್ಯಾ ಕಾಮತ್ ಅಮ್ಮೆಂಬಳ
ಮಂಗಳೂರು, ಜು.30: ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಸಹಿತ ಸಿಇಟಿ ಪರೀಕ್ಷೆಯ ದ.ಕ.ಜಿಲ್ಲೆಗೆ ಒಟ್ಟು ಮೂರು ರ್ಯಾಂಕ್ ಬಂದಿದೆ. ಆ ಪೈಕಿ ಮಂಗಳೂರು ಎಕ್ಸ್ಪರ್ಟ್ ಕಾಲೇಜಿಗೆ 1 ಮತ್ತು ಮೂಡುಬಿದಿರೆಯ ಆಳ್ವಾಸ್ ಕಾಲೇಜಿಗೆ 2 ರ್ಯಾಂಕ್ ಬಂದಿದೆ.
ಐದು ವಿಭಾಗದ ಮೊದಲ 10 ರ್ಯಾಂಕ್ಗಳಲ್ಲಿ 2 ರ್ಯಾಂಕ್ಗಳನ್ನು ಮಂಗಳೂರಿನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಅಲ್ಲದೆ ಮೊದಲ 50 ರ್ಯಾಂಕ್ನಲ್ಲಿ 20 ರ್ಯಾಂಕ್ ಹಾಗೂ ಮೊದಲ 100 ರ್ಯಾಂಕ್ನಲ್ಲಿ 49 ರ್ಯಾಂಕ್ಗಳನ್ನು ಎಕ್ಸ್ಪರ್ಟ್ನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಎಕ್ಸ್ಪರ್ಟ್ ಕಾಲೇಜಿನ ಅದಿತ್ಯಾ ಕಾಮತ್ ಅಮ್ಮೆಂಬಳ ಬಿಎನ್ವೈಎಸ್ನಲ್ಲಿ 7, ಪಶು ವೈದ್ಯಕೀಯದಲ್ಲಿ 17, ಬಿ ಫಾರ್ಮದಲ್ಲಿ 34ನೇ ರ್ಯಾಂಕ್ ಪಡೆದುಕೊಂಡರೆ, ಪ್ರಣವ್ ಎಸ್. ಬಿಎನ್ವೈಎಸ್ನಲ್ಲಿ 10, ಪಶುವೈದ್ಯಕೀಯದಲ್ಲಿ 14, ಬಿ ಫಾರ್ಮಾದಲ್ಲಿ 18, ಕೃಷಿಯಲ್ಲಿ 60ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಮುಹಮ್ಮದ್ ರುಮೈಜ್ ಇಂಜಿನಿಯರಿಂಗ್ನಲ್ಲಿ 22, ಅಮರೆ ಗೌಡ ಪಶುವೈದ್ಯಕೀಯದಲ್ಲಿ 23, ಬಿ. ಫಾರ್ಮಾದಲ್ಲಿ 31, ಬಿಎನ್ವೈಎಸ್ನಲ್ಲಿ 53, ಕೃಷಿಯಲ್ಲಿ 61, ವೃಷಭ್ ವಿ.ಜವಳಿ ಪಶುವೈದ್ಯಕೀಯ 26, ಬಿ ಫಾರ್ಮಾದಲ್ಲಿ 36, ಬಿಎನ್ವೈಎಸ್ನಲ್ಲಿ 49, ಅನುಜ್ಞಾ ಕೆ. ಬಿಎನ್ವೈಎಸ್ನಲ್ಲಿ 29, ಕೃಷಿಯಲ್ಲಿ 59, ಪಶುವೈದ್ಯಕೀಯ 62, ಬಿ ಫಾರ್ಮಾ 95, ಸ್ಕಂದ ಶಾನಭಾಗ್ ಪಶುವೈದ್ಯಕೀಯದಲ್ಲಿ 29, ಬಿ ಫಾರ್ಮಾದಲ್ಲಿ 35, ಕೃಷಿಯಲ್ಲಿ 97, ಪವನ್ ಎಸ್. ಧೂಳಶೆಟ್ಟಿ ಕೃಷಿಯಲ್ಲಿ 30, ಬಿಎನ್ವೈಎಸ್ನಲ್ಲಿ 68, ಪಶುವೈದ್ಯಕೀಯದಲ್ಲಿ 91, ವಿಶಾಲ್ ಎಸ್. ಕೃಷಿಯಲ್ಲಿ 39, ಸಾಥ್ವಿಕ್ ಎ.ಎಸ್. ಕೃಷಿಯಲ್ಲಿ 40, ಪಶುವೈದ್ಯಕೀಯದಲ್ಲಿ 50, ಬಿಎನ್ವೈಎಸ್ನಲ್ಲಿ 52, ಬಿ ಫಾರ್ಮಾದಲ್ಲಿ 59, ಸ್ನೇಹಲ್ ಮಹಿಮ ಕ್ಯಾಸ್ಟಲಿನೊ ಕೃಷಿಯಲ್ಲಿ 44, ಬಿಎನ್ವೈಎಸ್ನಲ್ಲಿ 85, ಶ್ರೀ ಸಂಪತ್ ಎಸ್.ಡಿ. ಪಶುವೈದ್ಯಕೀಯದಲ್ಲಿ 49, ಬಿಎನ್ವೈಎಸ್ನಲ್ಲಿ 51, ಬಿ ಫಾರ್ಮಾದಲ್ಲಿ 60, ಅಭಿಷೇಕ್ ಬಿ.ವೈ. ಕೃಷಿಯಲ್ಲಿ 52, ತುಬಾಚಿ ಕೃತಿಕ್ ಚನ್ಗೌಡ ಬಿಎನ್ವೈಎಸ್ನಲ್ಲಿ 57, ಪಶುವೈದ್ಯಕೀಯದಲ್ಲಿ 73, ಸಮರ್ಥ್ ಎಸ್. ಬೆಟಗೇರಿ ಬಿಎನ್ವೈಎಸ್ನಲ್ಲಿ 59, ಪಶುವೈದ್ಯಕೀಯದಲ್ಲಿ 65, ಬಿ ಫಾರ್ಮಾದಲ್ಲಿ 81, ನಮಿತಾ ಎನ್. ಬಿಎನ್ವೈಎಸ್ನಲ್ಲಿ 71, ಹಿಮಾಂಶು ಎಲ್. ಕೃಷಿಯಲ್ಲಿ 72, ಸೂರ್ಯದೀಪ್ ಎಸ್. ಕೃಷಿಯಲ್ಲಿ 82, ಬಿಎನ್ವೈಎಸ್ನಲ್ಲಿ 93, ಭರತ್ ಕುಮಾರ್ ವೈ ರೇವಡಕುಂಡಿ ಕೃಷಿಯಲ್ಲಿ 84, ಯಶಸ್ವಿನಿ ಎಸ್. ಬಾಳಪ್ಪನವರ್ ಬಿಎನ್ವೈಎಸ್ನಲ್ಲಿ 87, ಪಶುವೈದ್ಯಕೀಯದಲ್ಲಿ 92, ಅಭಿ ಎಸ್. ಕುಮಾರ್ ಕೃಷಿಯಲ್ಲಿ 90, ದಿಶಾಂತ್ ಕೆ.ಪಶುವೈದ್ಯಕೀಯದಲ್ಲಿ 98ನೇ ರ್ಯಾಂಕ್ ಪಡೆದಿದ್ದಾರೆ.
ಪ್ರತೀ ದಿನವೂ ಶಿಸ್ತುಬದ್ಧವಾಗಿ ಅಭ್ಯಾಸ ಮಾಡಿದರೆ ಹಾಗೂ ಪಠ್ಯದ ಬಗ್ಗೆ ಇರುವ ಸಂಶಯವನ್ನು ತಕ್ಷಣ ಪರಿಹರಿಸಿದರೆ ಅಂಕ ಗಳಿಕೆ ಸುಲಭವಾಗಲಿದೆ. ಬೆಂಗಳೂರಿನಲ್ಲಿ ಐಎಸ್ಇಯಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ನೀಟ್ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಮೆಡಿಕಲ್ ಓದುತ್ತೇನೆ. ಈ ಬಗ್ಗೆ ಅಂತಿಮ ತೀರ್ಮಾನ ಮಾಡಿಲ್ಲ ಎಂದು ಸಿಇಟಿ ಬ್ಯಾಚುಲರ್ ಆ್ ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್ ವಿಭಾಗದಲ್ಲಿ 7ನೇ ರ್ಯಾಂಕ್ ಪಡೆದ ಮಂಗಳೂರು ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕಾಮತ್ ಅಮ್ಮೆಂಬಳ ಆದಿತ್ಯ ಕಾಮತ್ ತಿಳಿಸಿದ್ದಾರೆ. ಇವರು ಡಾ.ಮಂಜುನಾಥ ಕಾಮತ್ ಮತ್ತು ಡಾ. ಶಾಂತಿ ಕಾಮತ್ ದಂಪತಿಯ ಪುತ್ರ.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಮನೋಜ್ಗೆ ಎರಡುರ್ಯಾಂಕ್
ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ರಾಜ್ಯದ ಟಾಪ್ 9 ರ್ಯಾಂಕ್ಗಳಲ್ಲಿ 2 ರ್ಯಾಂಕ್ಗಳನ್ನು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಮನೋಜ್ ಪಡೆದಿದ್ದಾರೆ. ಬಿಎಸ್ಸಿ ಅಗ್ರಿಯಲ್ಲಿ 5ನೇ ರ್ಯಾಂಕ್, ಬಿಎನ್ವೈಎಸ್ಲ್ಲಿ 8ನೇ ರ್ಯಾಂಕ್, ಪಶು ವೈದ್ಯಕೀಯದಲ್ಲಿ 12ನೇ ರ್ಯಾಂಕ್, ಬಿ.ಫಾರ್ಮಾ ಹಾಗೂ ಡಿ.ಫಾರ್ಮಾದಲ್ಲಿ 22ನೇ ರ್ಯಾಂಕ್, ಇಂಜಿನಿಯರಿಂಗ್ನಲ್ಲಿ 77ನೇ ರ್ಯಾಂಕ್ ಗಳಿಸಿದ್ದಾರೆ.
ಮೊದಲ 50 ರ್ಯಾಂಕ್ಗಳಲ್ಲಿ 11 ರ್ಯಾಂಕ್, ಮೊದಲ 100ರಲ್ಲಿ 17 ರ್ಯಾಂಕ್ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ 1966 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು 180ರಲ್ಲಿ 150ಕ್ಕಿಂತ ಅಧಿಕ ಅಂಕಗಳನ್ನು ಪಿಸಿಬಿ ಹಾಗೂ ಪಿಸಿಎಂ ವಿಷಯಗಳಲ್ಲಿ ಪಡೆದಿದ್ದಾರೆ.
1,228 ವಿದ್ಯಾರ್ಥಿಗಳು 180ರಲ್ಲಿ 100ಕ್ಕೂ ಅಧಿಕ ಅಂಕ ಪಿಸಿಬಿ ವಿಷಯದಲ್ಲಿ ಹಾಗೂ 571 ವಿದ್ಯಾರ್ಥಿಗಳು ಪಿಸಿಎಂ ವಿಷಯದಲ್ಲಿ ಪಡೆದಿದ್ದಾರೆ.







