ಬಾಂಗ್ಲಾ: ಬಸ್ ಗೆ ರೈಲು ಡಿಕ್ಕಿ; ವಿದ್ಯಾರ್ಥಿಗಳ ಸಹಿತ 11 ಮಂದಿ ಸಾವು
![ಬಾಂಗ್ಲಾ: ಬಸ್ ಗೆ ರೈಲು ಡಿಕ್ಕಿ; ವಿದ್ಯಾರ್ಥಿಗಳ ಸಹಿತ 11 ಮಂದಿ ಸಾವು ಬಾಂಗ್ಲಾ: ಬಸ್ ಗೆ ರೈಲು ಡಿಕ್ಕಿ; ವಿದ್ಯಾರ್ಥಿಗಳ ಸಹಿತ 11 ಮಂದಿ ಸಾವು](https://www.varthabharati.in/sites/default/files/images/articles/2022/07/30/344190-1659196334.jpg)
ಢಾಕಾ,ಜು.30: ಬಾಂಗ್ಲಾ ದೇಶದ ಚಿತ್ತಗಾಂಗ್ ಜಿಲ್ಲೆಯಲ್ಲಿ ಕಾವಲುರಹಿತ ಲೆವೆಲ್ ಕ್ರಾಸಿಂಗ್ನಲ್ಲಿ ರೈಲೊಂದಕ್ಕೆ ಮಿನಿಬಸ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅವಘಡದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಮಿಶಾರಾಯ್ ಉಪಜಿಲ್ಲೆಯಲ್ಲಿ ಕೋಚಿಂಗ್ ಸೆಂಟರ್ ಒಂದರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಕೊಂಡೊಯ್ಯುತ್ತಿದ್ದ ಮಿನಿಬಸ್ಗೆ,ಢಾಕಾಗೆ ತೆರಳುತ್ತಿದ್ದ ಪ್ರೊವಾಟಿ ಎಕ್ಸ್ಪ್ರೆಸ್ ರೈಲು ಜೋರಾಗಿಡಿಕ್ಕಿ ಹೊಡೆದಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಮೃತಪಟ್ಟವರಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರೆಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಅವರು ತಿಳಿಸಿದ್ದಾರೆ.
Next Story