ರಶ್ಯವನ್ನು ಭಯೋತ್ಪಾದನೆಯಪ್ರಾಯೋಜಕ ದೇಶವೆಂದು ಘೋಷಿಸಲು ಝೆಲೆನ್ಸ್ಕಿ ಆಗ್ರಹ
ಕೀವ್,ಜು.31: ಉಕ್ರೇನ್ನ ಡಾಂಟೆಸ್ಕ್ ಪ್ರಾಂತದ ಒಲೆನಿವ್ಕಾ ಕಾರಾಗೃಹದಲ್ಲಿ 40ಕ್ಕೂ ಅಧಿಕ ಉಕ್ರೇನಿ ಯುದ್ಧ ಕೈದಿಗಳ ಸಾವಿಗಾಗಿ ರಶ್ಯವನ್ನು ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರವೆಂಬುದಾಗಿ ಘೋಷಿಸಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಆಗ್ರಹಿಸಿದ್ದಾರೆ.
ರಶ್ಯವನ್ನು ಭಯೋತ್ಪಾದನೆ ಪ್ರಾಯೋಜಕ ದೇಶವೆಂಬುದಾಗಿ ಘೋಷಿಸಬೇಕೆಂದು ವಿಶೇಷವಾಗಿ ಅಮೆರಿಕಗೆ ಮನವಿ ಮಾಡುತ್ದೇನೆ. ಈ ನಿಟ್ಟಿನಲ್ಲಿ ಈಗಲೇ ಅಗತ್ಯ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆಯೆಂದು ಝೆಲೆನ್ಸ್ಕಿ ಅವರು ಶುಕ್ರವಾರ ತಡರಾತ್ರಿ ಪ್ರಸಾರವಾದ ವಿಡಿಯೋ ಭಾಷಣವೊಂದರಲ್ಲಿ ತಿಳಿಸಿದ್ದಾರೆ.
ಯುದ್ಧಕೈದಿಗಳು ಸಾವನ್ನಪ್ಪಿರುವ ಕಾರಾಗೃಹವನ್ನು ಪ್ರವೇಶಿಸಲು ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ತನಗೆ ಅವಕಾಶ ನೀಡಬೇಕೆಂದು ರೆಡ್ಕ್ರಾಸ್ ಮನವಿ ಮಾಡಿದೆ. ಒಲೆನಿವ್ಕಾ ಕಾರಾಗೃಹದಲ್ಲಿ ಯುದ್ಧಕೈದಿಗಳ ಸಾವಿಗೆ ಉಕ್ರೇನ್ ಹಾಗೂ ರಶ್ಯ ಪರಸ್ಪರ ವಿರುದ್ಧ ದೋಷಾರೋಪ ಹೊರಿಸಿವೆ.
Next Story