Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹೀಗೊಂದು ಸ್ಮಾರ್ಟ್ ನೆಕ್ಲೆಸ್

ಹೀಗೊಂದು ಸ್ಮಾರ್ಟ್ ನೆಕ್ಲೆಸ್

ಆರ್.ಬಿ.ಗುರುಬಸವರಾಜಆರ್.ಬಿ.ಗುರುಬಸವರಾಜ31 July 2022 12:09 AM IST
share
ಹೀಗೊಂದು ಸ್ಮಾರ್ಟ್ ನೆಕ್ಲೆಸ್

ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಬೆವರುತ್ತೇವೆ. ಬಿಸಿಲ ಧಗೆಯಿಂದಾಗಲಿ, ಶ್ರಮದ ಆಯಾಸದಿಂದಾಗಲಿ ಅಥವಾ ಭಯದ ಒತ್ತಡದಿಂದಾಗಲಿ ಬೆವರುವುದು ಸಹಜ. ಬೆವರುವಿಕೆಯ ಪ್ರಮಾಣ ಭಿನ್ನವಾಗಿರುತ್ತದೆ. ಕೆಲವರು ವಿರಳ ಸನ್ನಿವೇಶಗಳಲ್ಲಿ ಮಾತ್ರ ಬೆವರುತ್ತಾರೆ. ಕೆಲವರು ಸಣ್ಣ ಪುಟ್ಟ ಸನ್ನಿವೇಶಗಳಲ್ಲಿ ಬೆವರುತ್ತಾರೆ. ಬೆವರುವಿಕೆಯು ಒಂದು ಸ್ವಾಭಾವಿಕ ಕ್ರಿಯೆಯಾಗಿದ್ದು, ದೇಹವನ್ನು ತಣ್ಣಗಾಗಲು ಮಾತ್ರವಲ್ಲ, ವಿಷವನ್ನು ತೊಡೆದುಹಾಕುವ ನೈಸರ್ಗಿಕ ವಿಧಾನಗಳಲ್ಲಿ ಒಂದಾಗಿದೆ. ಬೆವರು ನಮ್ಮ ಆರೋಗ್ಯದ ಸುಳಿವುಗಳನ್ನು ಬಹಿರಂಗಪಡಿಸುವ ಮಹತ್ತರ ಅಂಶವಾಗಿದೆ.

ಬೆವರು ಗ್ರಂಥಿಗಳಿಂದ ಬೆವರು ಉತ್ಪತ್ತಿಯಾಗುತ್ತದೆ. ಈ ಬೆವರು ಗ್ರಂಥಿಗಳು ನಮ್ಮ ದೇಹದಾದ್ಯಂತ ಚರ್ಮದ ಪದರದಲ್ಲಿವೆ. ಚರ್ಮದಲ್ಲಿನ ಸಣ್ಣ ಸಣ್ಣ ರಂಧ್ರಗಳು ಬೆವರನ್ನು ಹೊರಹಾಕುತ್ತವೆ. ಒಂದು ಹನಿ ಬೆವರು ಸುಮಾರು ಶೇ. 99 ನೀರು ಮತ್ತು ಶೇ. 1 ಯೂರಿಯಾ, ಯೂರಿಕ್ ಆಮ್ಲ, ಅಮೋನಿಯಾ, ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಸಿ ಮತ್ತು ಇತರ ಪದಾರ್ಥಗಳ ಕುರುಹುಗಳನ್ನು ಹೊಂದಿದೆ. ಗ್ರಂಥಿಗಳಿಂದ ಉತ್ಪತ್ತಿಯಾಗುವ ಬೆವರನ್ನು ತಜ್ಞರು ಎರಡು ರೀತಿಯಲ್ಲಿ ವಿಂಗಡಿಸಿದ್ದಾರೆ. ಒಂದು ಸಾಮಾನ್ಯ ಬೆವರು, ಇನ್ನೊಂದು ಒತ್ತಡದ ಬೆವರು. ಸಾಮಾನ್ಯ ಬೆವರು (ಎಕ್ರಿನ್) ಬೇಸಿಗೆಯ ದಿನಗಳಲ್ಲಿ ಅಥವಾ ದೇಹಕ್ಕೆ ಹೆಚ್ಚು ಉಷ್ಣತೆ ದೊರೆತಾಗ ಚರ್ಮದ ಹೊರಪದರದಲ್ಲಿ ಹಗುರವಾದ ಬೆವರ ಹನಿಗಳ ರೂಪದಲ್ಲಿ ಹೊರಬರುತ್ತದೆ. ಹೀಗೆ ರೂಪುಗೊಂಡ ಬೆವರ ಹನಿಗಳು ಆವಿಯಾದಾಗ ದೇಹವು ತಂಪಾಗುತ್ತದೆ. ಕೆಲವು ವೇಳೆ ಶ್ರಮದ ಕೆಲಸ ಮಾಡಿದಾಗ ಅಥವಾ ವ್ಯಾಯಾಮ ಮಾಡಿದಾಗಲೂ ಸಾಮಾನ್ಯ ಬೆವರು ಉಂಟಾಗುತ್ತದೆ. ಒತ್ತಡದ ಬೆವರು (ಅಪೋಕ್ರೈನ್) ಸಾಮಾನ್ಯ ಬೆವರಿಗಿಂತ ಒಂದಿಷ್ಟು ದಪ್ಪವಾಗಿರುತ್ತದೆ. ಏಕೆಂದರೆ ಈ ಬೆವರು ವಾಸ್ತವವಾಗಿ ಕೊಬ್ಬನ್ನು ಹೊಂದಿರುತ್ತದೆ. ಇದು ತೀವ್ರ ಒತ್ತಡದ ಸಮಯದಲ್ಲಿ ಕಂಕುಳ, ನೆತ್ತಿ ಮತ್ತು ತೊಡೆಸಂದು ಪ್ರದೇಶದಲ್ಲಿ ದೇಹದ ಕೂದಲಿನ ಬೇರುಗಳಿಂದ ಉತ್ಪತ್ತಿಯಾಗುತ್ತದೆ. ಬೆವರಿಗೇಕೆ ವಾಸನೆ? ಬೆವರು ದುರ್ಗಂಧವಾಗಿರುತ್ತದೆ ಎಂಬುದು ಸಾಮಾನ್ಯ ತಿಳುವಳಿಕೆ. ಬೆವರಿನಿಂದಾದ ವಾಸನೆ ಅಹಿತಕರವಾಗಿರುವುದರಿಂದ ಅದು ಕಿರಿಕಿರಿ ಎನಿಸುತ್ತದೆ. ಆದರೆ ವಾಸ್ತವವಾಗಿ ಬೆವರಿಗೆ ವಾಸನೆ ಇಲ್ಲ. ಬೆವರು ನಮ್ಮ ಚರ್ಮದ ಮೇಲಿನ ಬ್ಯಾಕ್ಟೀರಿಯಾದೊಂದಿಗೆ ಸಂಪರ್ಕಕ್ಕೆ ಬಂದಾಗ, ಅದು ಫೌಲ್ ಆಗಲು ಪ್ರಾರಂಭಿಸುತ್ತದೆ. ಬ್ಯಾಕ್ಟೀರಿಯಾ ಬೆವರಿನಲ್ಲಿರುವ ಸಾವಯವ ಕಣಗಳನ್ನು ತಿನ್ನುತ್ತದೆ ಮತ್ತು ಜೀರ್ಣಕಾರಿ ಅನಿಲವನ್ನು ಹೊರಹಾಕುತ್ತದೆ. ಬ್ಯಾಕ್ಟೀರಿಯಾ ಹೊರಹಾಕಿದ ಅನಿಲದ ವಾಸನೆಯನ್ನೇ ನಾವು ಬೆವರಿನ ವಾಸನೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಆದರೆ ಅದು ಬೆವರಿನ ವಾಸನೆಯಲ್ಲ. ಹೀಗೆ ಉತ್ಪತ್ತಿಯಾದ ಬ್ಯಾಕ್ಟೀರಿಯಾದ ಅನಿಲವು ಚರ್ಮ ಮತ್ತು ಬಟ್ಟೆಗಳಲ್ಲಿ ಶೇಖರವಾಗುತ್ತದೆ. ಈ ವಾಸನೆಯು ಬಹುಬೇಗ ನಾಶವಾಗುವುದಿಲ್ಲ. ಈ ದುರ್ಗಂಧವನ್ನು ತೊಡೆದುಹಾಕಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಡಿಯೋಡ್ರೆಂಟ್‌ಗಳು ಲಭ್ಯ ಇವೆ. ಡಿಯೋಡ್ರೆಂಟ್‌ಗಳು ಬ್ಯಾಕ್ಟೀರಿಯಾಗಳ ಅನಿಲದ ವಾಸನೆಯನ್ನು ತಡೆಯುತ್ತವೆಯೇ ವಿನಹ ಬೆವರು ಉತ್ಪಾದನೆಯನ್ನಲ್ಲ ಎಂಬುದು ನೆನಪಿಡಬೇಕಾದ ಸಂಗತಿ. ಬೆವರು ಆರೋಗ್ಯದ ಸೂಚಕ. ಅದು ನಮ್ಮ ಆರೋಗ್ಯದ ಸ್ಥಿತಿಯನ್ನು ತಿಳಿಸುವ ಬಯೋಮಾರ್ಕರ್. ಬೆವರಿನಲ್ಲಿ ನೂರಾರು ಬಯೋಮಾರ್ಕರ್‌ಗಳಿವೆ. ಬಯೋಮಾರ್ಕರ್‌ಗಳು ದೇಹದ ಆಳವಾದ ರಹಸ್ಯಗಳನ್ನು ಬಹಿರಂಗಪಡಿಸುವ ಪದಾರ್ಥಗಳಾಗಿವೆ. ರೋಗ, ಸೋಂಕು ಮತ್ತು ಭಾವನಾತ್ಮಕ ಆಘಾತದ ಪುರಾವೆಗಳಿಂದ ಹಿಡಿದು ಎಲ್ಲವೂ ವ್ಯಕ್ತಿಯ ದೈಹಿಕ ದ್ರವಗಳಲ್ಲಿ ಕಂಡುಬರುತ್ತದೆ. ಬಯೋಮಾರ್ಕರ್‌ಗಳಲ್ಲಿ ಬೆವರು, ಕಣ್ಣೀರು, ಲಾಲಾರಸ ಮತ್ತು ಮೂತ್ರ ಸೇರಿವೆ. ಜೀವಶಾಸ್ತ್ರಜ್ಞರು ದೇಹದಲ್ಲಿನ ಇಂತಹ ಬಯೋಮಾರ್ಕರ್‌ಗಳ ಮೇಲೆ ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ. ಸಂಶೋಧಕರು ಬೆವರಿನ ಸಂಯೋಜನೆಯನ್ನು ವಿಶ್ಲೇಷಿಸುವುದರ ಜೊತೆಗೆ, ಈ ಸಂವೇದಕವನ್ನು ಮುಂದೊಂದು ದಿನ ಜೈವಿಕ ಇಂಪ್ಲಾಂಟ್‌ಗಳಾಗಿ ಕಸ್ಟಮೈಸ್ ಮಾಡಬಹುದು ಮತ್ತು ನರಪ್ರೇಕ್ಷಕಗಳು ಮತ್ತು ಹಾರ್ಮೋನುಗಳನ್ನು ಪತ್ತೆಹಚ್ಚಲು ಬಳಸಬಹುದೆಂದು ನಂಬುತ್ತಾರೆ. ಇದರ ಭಾಗವಾಗಿ ಬೆವರಿನಿಂದ ಆರೋಗ್ಯದ ಸ್ಥಿತಿ ತಿಳಿಯಲು ಒಂದು ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದೇ ಸ್ಮಾರ್ಟ್ ನೆಕ್ಲೆಸ್.

ಏನಿದು ಸ್ಮಾರ್ಟ್ ನೆಕ್ಲೆಸ್?

 
 

ಬೆವರಿನ ಮೂಲಕ ಆರೋಗ್ಯ ಸ್ಥಿತಿಯನ್ನು ಟ್ರ್ಯಾಕ್ ಮಾಡುವ ಬಯೋಸೆನ್ಸಾರ್ ಸಾಧನವೇ ಸ್ಮಾರ್ಟ್ ನೆಕ್ಲೆಸ್. ವ್ಯಕ್ತಿಯ ಆರೋಗ್ಯದಲ್ಲಿನ ಬದಲಾವಣೆಗಳನ್ನು ಬೆವರಿನಲ್ಲಿರುವ ರಾಸಾಯನಿಕ ಬಯೋಮಾರ್ಕರ್‌ಗಳ ಮೂಲಕ ಪತ್ತೆಹಚ್ಚಿ ಆರೋಗ್ಯದ ಸ್ಥಿತಿಯನ್ನು ತಿಳಿಸುವ ಸ್ಮಾರ್ಟ್ ನೆಕ್ಲೆಸ್‌ನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಕೊಲಂಬಿಯಾದ ತಂಡವು ಬ್ಯಾಟರಿ ಮುಕ್ತ, ವೈರ್‌ಲೆಸ್ ಜೀವರಾಸಾಯನಿಕ ಸಂವೇದಕವನ್ನು ತಯಾರಿಸಿದೆ. ಇದಕ್ಕೆ ‘ಸ್ಮಾರ್ಟ್ ನೆಕ್ಲೆಸ್’ ಎಂದು ಹೆಸರಿಸಿದೆ. ಸ್ಮಾರ್ಟ್ ನೆಕ್ಲೆಸ್ ರಕ್ತದಲ್ಲಿನ ಸಕ್ಕರೆ ಅಥವಾ ಗ್ಲೂಕೋಸ್ ಅನ್ನು ಪತ್ತೆ ಮಾಡುತ್ತದೆ. ಮಾನವರು ವ್ಯಾಯಾಮ ಮಾಡುವಾಗ ಅವರ ಚರ್ಮದಿಂದ ಹೊರಹಾಕುವ ಬೆವರನ್ನು ಗ್ರಹಿಸುವ ಮೂಲಕ ಈ ಸ್ಮಾರ್ಟ್ ನೆಕ್ಲೆಸ್ ಆರೋಗ್ಯದ ಮಾಹಿತಿಯನ್ನು ತಿಳಿಸುತ್ತದೆ. ಸ್ಮಾರ್ಟ್ ನೆಕ್ಲೆಸ್‌ಗೆ ಚಿಕ್ಕದೊಂದು ಪೆಂಡೆಂಟ್ ಇದ್ದು, ಅದು ಜೀವರಾಸಾಯನಿಕ ಸಂವೇದನೆಗಳನ್ನು ಗ್ರಹಿಸುತ್ತದೆ. ಈ ನೆಕ್ಲೆಸನ್ನು ಕುತ್ತಿಗೆಯ ಸುತ್ತ ಧರಿಸಿದರೆ ಸಾಕು, ಅದರಲ್ಲಿನ ಗ್ರಾಹಕ ಕೋಶಗಳು ದೇಹದ ಗ್ಲುಕೋಸ್ ಮಟ್ಟವನ್ನು ತಿಳಿಸುತ್ತವೆ. ನಮ್ಮ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬೃಹತ್ ಗಾತ್ರದ ಮತ್ತು ಕಠಿಣವಾದ ಚಿಪ್‌ಗಳನ್ನು ಬಳಸುವ ಬದಲು, ಸಂವೇದಕಗಳನ್ನು ಅತಿ ತೆಳುವಾದ ವಸ್ತುಗಳಿಂದ ತಯಾರಿಸಲಾಗುತ್ತದೆ. ನಾವು ಈಗಾಗಲೇ ಇಂತಹ ಇ-ವಿನ್ಯಾಸದ ಶೈಲಿಯ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸುತ್ತಲೇ ಇದ್ದೇವೆ. ಸ್ಮಾರ್ಟ್ ವಾಚ್‌ಗಳು ಸಹ ಇದೇ ರೀತಿಯ ಸಂವೇದಕಗಳನ್ನು ಹೊಂದಿವೆ. ಸಂಶೋಧಕರು ಸ್ಮಾರ್ಟ್ ನೆಕ್ಲೆಸ್‌ನಲ್ಲಿ ಬ್ಯಾಟರಿಯ ಬದಲಿಗೆ ರೆಸೋನೆನ್ಸ್ ಸರ್ಕ್ಯೂಟ್ ಅನ್ನು ಬಳಸಿರುವುದು ವಿಶೇಷ. ಇದು ಬಾಹ್ಯ ರೀಡರ್ ಸಿಸ್ಟಮ್‌ನಿಂದ ಕಳುಹಿಸಲಾದ ರೇಡಿಯೊ ಆವರ್ತನ ಸಂಕೇತಗಳನ್ನು ಪ್ರತಿಬಿಂಬಿಸುತ್ತದೆ. ಇದನ್ನು ವಿವಿಧ ಸನ್ನಿವೇಶ ಮತ್ತು ವಿವಿಧ ವ್ಯಕ್ತಿಗಳ ಮೇಲೆ ಪ್ರಯೋಗಿಸಿ ಪ್ರಮಾಣೀಕರಿಸಿದ್ದಾರೆ. ಈ ಪ್ರಯೋಗದಲ್ಲಿ ಭಾಗವಹಿಸಿದವರು 30 ನಿಮಿಷಗಳ ಕಾಲ ಒಳಾಂಗಣ ಸೈಕ್ಲಿಂಗ್‌ನಲ್ಲಿ ತೊಡಗಿದ್ದರು. ನಂತರ 15 ನಿಮಿಷಗಳ ಕಾಲ ವಿರಾಮವನ್ನು ತೆಗೆದುಕೊಂಡರು. ಅವರು ಸೈಕ್ಲಿಂಗ್ ಅನ್ನು ಪುನರಾರಂಭಿಸುವ ಮೊದಲು ಸಿಹಿ ಪಾನೀಯಗಳನ್ನು ಸೇವಿಸಿದರು. ಸಿಹಿ ಪಾನೀಯಗಳನ್ನು ಸೇವಿಸಿದ ನಂತರ ಬೆವರುಗಳಲ್ಲಿ ಗ್ಲೂಕೋಸ್ ಮಟ್ಟವು ಹೆಚ್ಚಾಗಬೇಕು ಎಂದು ಸಂಶೋಧಕರು ತಿಳಿದಿದ್ದರು. ಈ ಹೊಸ ಸಂವೇದಕವು ಹೆಚ್ಚಿನ ಗ್ಲುಕೋಸ್ ಮಟ್ಟವನ್ನು ತೋರಿಸುತ್ತದೆಯೋ ಇಲ್ಲವೋ ಎಂಬುದು ಪ್ರಶ್ನೆಯಾಗಿತ್ತು ಎಂದು ಅಧ್ಯಯನದ ಸಹ ಲೇಖಕ ಮತ್ತು ಓಹಿಯೋದಲ್ಲಿ ಮೆಟೀರಿಯಲ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನ ಸಹಾಯಕ ಪ್ರಾಧ್ಯಾಪಕ ಜಿಂಗುವಾ ಲಿ ಹೇಳುತ್ತಾರೆ. ಫಲಿ ಸಂವೇದಕವು ಗ್ಲೂಕೋಸ್ ಮಟ್ಟವನ್ನು ಯಶಸ್ವಿಯಾಗಿ ಟ್ರ್ಯಾಕ್ ಮಾಡಿದೆ ಎಂಬುದನ್ನು ಫಲಿತಾಂಶಗಳು ತೋರಿಸಿವೆ. ಇದು ಬೆವರಿನಲ್ಲಿರುವ ಇತರ ಪ್ರಮುಖ ರಾಸಾಯನಿಕಗಳನ್ನು ಮೇಲ್ವಿಚಾರಣೆ ಮಾಡಲು ಕೆಲಸ ಮಾಡುತ್ತದೆ ಎಂಬುದು ಸಾಬೀತಾಗಿದೆ. ಸದ್ಯಕ್ಕೆ ನಮ್ಮ ದೈನಂದಿನ ಜೀವನದಲ್ಲಿ ಸುಲಭವಾಗಿ ಸಂಯೋಜಿಸಬಹುದಾದ ಸರಳ ಸರ್ಕ್ಯೂಟ್ ವಿನ್ಯಾಸಗಳನ್ನು ಬಳಸುತ್ತೇವೆ. ಸ್ಮಾರ್ಟ್ ನೆಕ್ಲೆಸ್ ಬಳಕೆಯ ಹಿಂದಿನ ತತ್ವದ ಆಧಾರದ ಮೇಲೆ ಮುಂದೊಂದು ದಿನ ಸ್ಮಾರ್ಟ್ ಉಂಗುರ, ಸ್ಮಾರ್ಟ್ ಕಿವಿಯೋಲೆಗಳೂ ಬರಬಹುದು. ಇಂತಹ ಸಾಧನಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತವೆ ಎಂದರೆ ನಮಗೆ ಹೆಮ್ಮೆಯಲ್ಲವೇ? ಈ ಅಧ್ಯಯನದ ಮೂಲ ಮಾದರಿಯನ್ನು ಹೋಲುವ ಸಾಧನವು ಸಾರ್ವಜನಿಕರಿಗೆ ಲಭ್ಯವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಸಂಶೋಧಕರು. ಈ ಸಂಭಾವ್ಯ ಸಾಧನವು ಜೀವ ಉಳಿಸುವ ತಂತ್ರಜ್ಞಾನದ ಅಗತ್ಯವಿರುವ ಜನರಿಗೆ ಪ್ರಯೋಜನವಾಗಲಿ ಎಂಬುದೇ ನಮ್ಮ ಆಶಯ

share
ಆರ್.ಬಿ.ಗುರುಬಸವರಾಜ
ಆರ್.ಬಿ.ಗುರುಬಸವರಾಜ
Next Story
X