ಕಾಮನ್ ವೆಲ್ತ್ ಗೇಮ್ಸ್ : ವೇಟ್ ಲಿಫ್ಟರ್ ಜೆರೆಮಿಗೆ ಚಿನ್ನ

ಬರ್ಮಿಂಗ್ ಹ್ಯಾಮ್: ಸ್ಟಾರ್ ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪುರುಷರ 67 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದಾರೆ. ಇದರೊಂದಿಗೆ ಭಾರತವು ಪ್ರಸಕ್ತ ಕ್ರೀಡಾಕೂಟದಲ್ಲಿ ಎರಡನೇ ಚಿನ್ನದ ಪದಕ ಜಯಿಸಿದೆ. ರವಿವಾರ ನಡೆದ ಫೈನಲ್ ನಲ್ಲಿ ಮಿಝೋರಾಂನ 19ರ ಹರೆಯದ ಜೆರೆಮಿ ಒಟ್ಟು 300 ಕೆಜಿ ಎತ್ತಿ ಹಿಡಿದು ಚಿನ್ನ ಗೆದ್ದುಕೊಂಡರು. ಮಹಿಳಾ ವೇಟ್ ಲಿಫ್ಟರ್ ಮೀರಾ ಬಾಯಿ ಚಾನು ಶನಿವಾರ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಜೆರೆಮಿ ಸಾಹಸದೊಂದಿಗೆ ಭಾರತವು ಇದೀಗ ಕ್ರೀಡಾಕೂಟದಲ್ಲಿ 2 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚು ಜಯಿಸಿದಂತಾಗಿದೆ.
Next Story