ಮಂಗಳೂರು : ಎಚ್ಐಎಫ್ ಇಂಡಿಯಾ ಮೆಡಿಕಲ್ ಸೆಲ್ ವತಿಯಿಂದ 12ನೆ ರಕ್ತದಾನ ಶಿಬಿರ

ಮಂಗಳೂರು, ಜು.31: ಎಚ್ಐಎಫ್ ಇಂಡಿಯಾ ವತಿಯಿಂದ ಮತ್ತು ಕೆಎಂಸಿ ಆಸ್ಪತ್ರೆಯ ಸಂಯೋಗದೊಂದಿಗೆ 12ನೆ ರಕ್ತದಾನ ಶಿಬಿರವು ನಗರದ ಇಹ್ಸಾನ್ ಮಸೀದಿಯಲ್ಲಿ ನಡೆಯಿತು.
ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಮೊಹಮ್ಮದ್ ಕುಂಞಿ ಭಾಗವಹಿಸಿದ್ದರು. ಮತ್ತೋರ್ವ ಮುಖ್ಯ ಅತಿಥಿ ಕೆಎಂಸಿ ಆಸ್ಪತ್ರೆಯ ವೈದ್ಯರು, ಬ್ಲಡ್ ಬ್ಯಾಂಕ್ ಆಫೀಸರ್ ಡಾ. ನಿಹಾರಿಕಾ ಮಾತನಾಡಿ, ರಕ್ತದಾನದ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಇಹ್ಸಾನ್ ಮಸೀದಿಯ ಇಮಾಮ್ ಮೌಲಾನ ಅಲ್ತಾಫ್ ಹುಸೇನ್ ಕುರ್‌ಆನ್ ವಚನ ಪಠಿಸಿದರು.
ಎಚ್ಐಎಫ್ ಅಧ್ಯಕ್ಷ ನಾಝಿಮ್ ಎ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಒಟ್ಟು 146 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಆದಿಲ್ ಫರ್ವೇಝ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮೆಡಿಕಲ್ ವಿಭಾಗದ ಸಂಚಾಲಕ ನಾಝಿಮ್ ಎಸ್.ಎಸ್ ಉಪಸ್ಥಿತರಿದ್ದರು.