ನಂಜನಗೂಡು: ಹುಲಿ ದಾಳಿಗೆ ವ್ಯಕ್ತಿ ಬಲಿ
ನಂಜನಗೂಡು,ಜು.31: ನಂಜನಗೂಡು ತಾಲ್ಲೂಕಿನ ಹಾದನೂರ ಒಡೆಯನಪುರ ಗ್ರಾಮದ ಬಳಿ ನರಭಕ್ಷಕ ಹುಲಿಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರವಿವಾರ ನಡೆದಿದೆ.
ನಂಜನಗೂಡು ತಾಲ್ಲೂಕಿನ ಹಾದನೂರ ಒಡೆಯನಪುರ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ವ್ಯಾಪ್ತಿಗೆ ಸೇರಿದ ಗ್ರಾಮದ ಬಳಿಯ ನಂಜದೇವರ ಬೆಟ್ಟ ಎಂಬಲ್ಲಿ ದನಗಾಹಿ ಪಟ್ಟಸ್ವಾಮಿ (46) ಎಂಬವರು ತಮ್ಮ ತಂಬಾಕು ಬೆಳೆಯ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಜಮೀನಿನಲ್ಲೆ ಅಡಗಿ ಕುಳಿತಿದ್ದ ನರಭಕ್ಷಕ ಹುಲಿ ದಾಳಿ ಮಾಡಿ ಹತ್ಯಗೈದು ನಂತರ ಒಂದು ಜಾನುವಾರನ್ನು ಕೂಡ ಬಲಿ ತೆಗೆದುಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳದಲ್ಲಿ ಹಾದನೂರ ಒಡೆಯನಪುರ ಗ್ರಾಮದ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು.
Next Story