Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಇಂದಿನ ಕಾಲಘಟ್ಟಕ್ಕೆ ಬುದ್ಧ, ಅಂಬೇಡ್ಕರ್...

ಇಂದಿನ ಕಾಲಘಟ್ಟಕ್ಕೆ ಬುದ್ಧ, ಅಂಬೇಡ್ಕರ್ ವಿಚಾರಧಾರೆಗಳು ಅತ್ಯಗತ್ಯ: ಲೇಖಕ ಎಚ್.ಎಸ್. ವೆಂಕಟೇಶ್‍ ಮೂರ್ತಿ

ವಾರ್ತಾಭಾರತಿವಾರ್ತಾಭಾರತಿ31 July 2022 9:28 PM IST
share
ಇಂದಿನ ಕಾಲಘಟ್ಟಕ್ಕೆ ಬುದ್ಧ, ಅಂಬೇಡ್ಕರ್ ವಿಚಾರಧಾರೆಗಳು ಅತ್ಯಗತ್ಯ: ಲೇಖಕ ಎಚ್.ಎಸ್. ವೆಂಕಟೇಶ್‍ ಮೂರ್ತಿ

ಚಿಕ್ಕಮಗಳೂರು: ಇಂದಿನ ಕಾಲಘಟ್ಟದಲ್ಲಿ ಬುಧ್ಧ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳು ಸಮಾಜದ ಸ್ವಾಸ್ಥ್ಯಕ್ಕಾಗಿ ಅತ್ಯಗತ್ಯ. ಈ ಕಾರಣಕ್ಕಾಗಿ ಮೊದಲು ಬುದ್ಧನ ಬಗ್ಗೆ ಬರೆಯುವ ಕನಸು ಕಂಡಿದ್ದೆ. ಈ ಸಂಬಂಧ ಸಾಕಷ್ಟು ಅಧ್ಯಯನ ಮಾಡಿ 2 ವರ್ಷ ಪರಿಶ್ರಮ ವಹಿಸಿ ಬುದ್ಧಚರಣ ಮಹಾಕಾವ್ಯ ರಚಿಸಿದ್ದೇನೆ ಎಂದು ಲೇಖಕ ಎಚ್.ಎಸ್.ವೆಂಕಟೇಶ್‍ಮೂರ್ತಿ ತಿಳಿಸಿದರು.

ರವಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಸುಗಮ ಸಂಗೀತ ಗಂಗಾ, ಜಿಲ್ಲಾ ಕನ್ನಡ ಸಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಚ್.ಎಸ್.ವೆಂಕಟೇಶ್‍ಮೂರ್ತಿ ರಚಿತ ಬುದ್ಧಚರಣ ಅವಲೋಕನ ಹಾಗೂ ಬಿ.ಆರ್.ಲಕ್ಷ್ಮಣ್‍ರಾವ್ 75ನೇ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬುದ್ಧನ ಕುರಿತು ಮಹಾಕಾವ್ಯ ರಚಿಸಬೇಕೆಂಬ ಕನಸು ಹೊಂದಿದ್ದೆ. ಈ ಹಿನ್ನೆಲೆಯಲ್ಲಿ ನೇಪಾಳ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದೆ. ಎಷ್ಟು ಪ್ರಯತ್ನಪಟ್ಟರೂ ಕಾವ್ಯ ರಚನೆಗೆ ಬೇಕಾದ ಲಯ ಮತ್ತು ನೆಲಗಟ್ಟು ಕೈವಶವಾಗಿರಲಿಲ್ಲ. ನಮ್ಮ ಮನೆಯಲ್ಲೇ ನಡೆದ ಕೆಲವು ಕಹಿಘಟನೆಗಳು ಬುದ್ಧನ ಬಗ್ಗೆ ಮಹಾಕಾವ್ಯ ರಚಿಸುವ ಮನಸ್ಥಿತಿ ಬೆಳೆಸಿತು ಎಂದರು.

ಬುದ್ಧನ ಕಾರುಣ್ಯ ಮನಸ್ಸಿನಲ್ಲಿ ಸಂಚರಿಸಿತು. ಆಗ ಮಹಾಕಾವ್ಯ ಬರೆಯಲು ಶುರು ಮಾಡಿದೆ. ಹತ್ತು ವರ್ಷಗಳಿಂದ ಪೂರ್ವಸಿದ್ಧತೆ ಮಾಡಿಕೊಂಡು 2ವರ್ಷಗಳ ಸತತ ಪ್ರಯತ್ನದಿಂದ ಮಹಾಕಾವ್ಯ ರಚಿಸಿದೆ. ಕೋವಿಡ್ ಸಂದರ್ಭದಲ್ಲಿ ಉಂಟಾದ ಸಾವು ನೋವು, ಮನುಷ್ಯರ ಅಸಹಾಯಕತೆಯಂತಹ ಎಲ್ಲಾ ಅಂಶಗಳು ಕಾವ್ಯ ರಚನೆಗೆ ಕಾರಣವಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಗೋವಿಂದ ಪೈ ಅವರ ವೈಶಾಕ ಹೊರತುಪಡಿಸಿ ಕನ್ನಡ ಭಾಷೆಯಲ್ಲಿ ಬುದ್ಧನ ಕುರಿತು ಕೃತಿಗಳು ಬಂದಿಲ್ಲ. ಗೋವಿಂದ ಪೈ ಅವರ ವೈಶಾಕ ಮತ್ತು ಮಾಸ್ತಿಯವರ ಕಥೆಗಳು ನನ್ನ ಮೇಲೆ ಪ್ರಭಾವ ಬೀರಿದವು. ಬುದ್ಧಚರಣ ಮಹಾಕಾವ್ಯವನ್ನು ಆಡುಭಾಷೆಯಲ್ಲಿ ಬರದಿದ್ದು, ಸಾಹಿತ್ಯಾಸಕ್ತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದ ಅವರು, ಇಂದಿನ ಕಾಲಘಟ್ಟದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳು ಸಮಾಜಕ್ಕೆ ಅಗತ್ಯವಿದೆ. ಬುದ್ಧನ ಕಾರುಣ್ಯ, ಸ್ನೇಹ ಈ ಲೋಕಕ್ಕೆ ಇಂದು ಬೇಕಾಗಿದೆ. ಬುದ್ಧ ಮತ್ತು ಅಂಬೇಡ್ಕರ್ ಅವರ ಜೀವನದ ಮೌಲ್ಯ ಸರ್ವಕಾಲಿಕ ಎಂದರು.

ಚುಟುಕು ಕವಿ ದುಂಡಿರಾಜ್ ಮಾತನಾಡಿ, ಮಹಾಕಾವ್ಯಗಳ ಅಧ್ಯಯನದ ಬಗ್ಗೆ ಅಷ್ಟು ಆಸಕ್ತಿಯನ್ನು ತೆಳೆದಿರಲಿಲ್ಲ. ಎಚ್.ಎಸ್.ವೆಂಕಟೇಶ್‍ಮೂರ್ತಿ ಅವರ ಬುದ್ಧಚರಣ ಮಹಾಕಾವ್ಯ ಮಹಾಕಾವ್ಯವನ್ನು ಓದುವ ಗೀಳನ್ನು ಹೆಚ್ಚಿಸಿತು. ವಿ.ಕೃ.ಗೋಕಾಕ್ ಅವರ ಭಾರತ ಸಿಂಧು ರಶ್ಮಿಯುವ ನನಗೆ ಹನಿಗವನಗಳನ್ನು ರಚಿಸಲು ಸ್ಫೂರ್ತಿ ನೀಡಿತು ಎಂದ ಅವರು, ಬುದ್ಧಚರಣ ಒಳ್ಳೆಯ ಕವಿಗೆ ಸಿಗಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಎಂದು ಬಣ್ಣಿಸಿದರು.

ಲೇಕಖ ಬಿ.ಆರ್.ಲಕ್ಷ್ಮಣ್‍ರಾವ್ ಮಾತನಾಡಿ, ಎಚ್.ಎಸ್.ವೆಂಕಟೇಶ್‍ಮೂರ್ತಿ ಅವರ ಮಹಾಕಾವ್ಯ ಬದುಕನ್ನು ಬಿಚ್ಚಿಡುವ ಕೆಲಸ ಮಾಡಿದೆ. ಪ್ರತೀ ಬಾರಿಯೂ ಕಾವ್ಯವನ್ನು ಓದಿದಾಗಲು ವಿಶೇಷ ಅರ್ಥವನ್ನು ನೀಡುತ್ತದೆ ಎಂದರು.

ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಬಿ.ಆರ್.ಲಕ್ಷ್ಮಣ್‍ರಾವ್ ಕೃತಿಯನ್ನು ವಿಮರ್ಶಿಸಿದರು. ಉಪನ್ಯಾಸಕ ಸತ್ಯನಾರಾಯಣ್ ಎಚ್.ಎಸ್.ವೆಂಕಟೇಶ್‍ಮೂರ್ತಿ ಮಹಾಕಾವ್ಯದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವೇಣುಗೋಪಾಲ್, ಆಶಾಕಿರಣ ಅಂಧಮಕ್ಕಳ ಶಾಲೆ ಡಾ.ಜೆ.ಪಿ.ಕೃಷ್ಣೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಎಂ.ಆರ್.ದತ್ತಾತ್ರಿ, ಉಪನ್ಯಾಸಕ ನಾಗರಾಜ್ ರಾವ್ ಕಲ್ಕಟ್ಟೆ, ವಕೀಲ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ವೇಳೆ ಗಮಕವಾಚನ ಮತ್ತು ಸುಗಮ ಸಂಗೀತ ಗಂಗಾ ಕಲಾವಿದರಿಂದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X