ಭಟ್ಕಳ; ಇಬ್ಬರನ್ನು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ ಎನ್.ಐ.ಎ
ದೆಹಲಿಗೆ ಬರುವಂತೆ ನೋಟೀಸ್

ಸಾಂದರ್ಭಿಕ ಚಿತ್ರ
ಭಟ್ಕಳ: ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಭಟ್ಕಳದ ಇಬ್ಬರು ಸಹೋದರರನ್ನು ಎನ್.ಐ.ಎ. ಅಧಿಕಾರಿಗಳು ರವಿವಾರ ವಶಕ್ಕೆ ಪಡೆದು, ವಿಚಾರಣೆ ನಡೆಸಿ ನಂತರ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಇಂದು ಭಟ್ಕಳಕ್ಕೆ ಬಂದ ಎನ್.ಐ.ಎ ತಂಡ ಇಲ್ಲಿನ ಮುಖ್ಯ ರಸ್ತೆಯಲ್ಲಿ ಅಬ್ದುಲ್ ಮುಕ್ತದಿರ್ ಮತ್ತು ಅವರ ಸಹೋದರನನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದು, ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಬರುವಂತೆ ನೋಟೀಸು ನೀಡಿ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಅಬ್ದುಲ್ ಮುಕ್ತದಿರ್ ಅಮಾಯಕನಾಗಿದ್ದು ಆತ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಆತನ ಕಟುಂಬಸ್ಥರು ಹೇಳಿದ್ದಾರೆ.
ಈ ರೀತಿ ಏಕಾಎಕಿ ಬೆಳಗಿನ ಜಾವ ಮನೆಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ. ಯಾಕೆ, ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಕೂಡಾ ನೀಡಿರಲಿಲ್ಲ. ಆತನು ಅಂತಹ ಯಾವುದೇ ಕೃತ್ಯದಲ್ಲಿ ಭಾಗಿಯಾಗುವವನಲ್ಲ, ಆತ ಅಮಾಯಕ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.







