ಮಂಗಳೂರು; ನಿರ್ಬಂಧ ಉಲ್ಲಂಘನೆ: 200ಕ್ಕೂ ಅಧಿಕ ಮಂದಿ, 90ಕ್ಕೂ ಅಧಿಕ ವಾಹನ ವಶಕ್ಕೆ

ಮಂಗಳೂರು: ನಿರ್ಬಂಧ ಉಲ್ಲಂಘನೆಗೆ ಸಂಬಂಧಿಸಿ 200ಕ್ಕೂ ಅಧಿಕ ಮಂದಿ ಹಾಗೂ 90ಕ್ಕೂ ಅಧಿಕ ವಾಹನಗಳನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಕಮಿಷನರೇಟ್ ವ್ಯಾಪ್ತಿಯಲ್ಲಿ 19 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧ ಉಲ್ಲಂಘಿಸಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.






.jpeg)



