ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ಸುಳ್ಯ ಜು.31: ಹತ್ಯೆಗೀಡಾದ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಪ್ರವೀಣ್ ಕುಟುಂಬಸ್ಥರ ಜೊತೆ ಮಾತನಾಡಿದ ಅವರು ಆರ್ಥಿಕ ನೆರವು ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ಸರಕಾರ ಎನ್‍ಐಎ ಹಸ್ತಾಂತರ ಮಾಡಿದೆ. ಎನ್‍ಐಎ ತನಿಖೆಯಿಂದ ಪ್ರಕರಣದ ಹಿಂದಿನ ನೈಜ ಆರೋಪಿಗಳ ಬಂಧನ ಮಾಡುವುದರ ಜೊತೆಗೆ ಇದರ ಹಿಂದಿನ ಷಡ್ಯಂತ್ರ ಬಯಲಾಗಲಿದೆ ಎಂದು ಹೇಳಿದರು.
ಈ ರೀತಿಯ ಘಟನೆಗಳು ನಡೆದು ಅಮಾಯಕರು ಬಲಿಯಾದಾಗ ಆಕ್ರೋಶ, ನೋವು ಬರುವುದು ಸಹಜ. ಈ ರೀತಿಯ ಘಟನೆಗಳು ಮರುಕಳಿಸದಂತೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಅಗತ್ಯ. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಷಡ್ಯಂತ್ರಗಳು ಬಯಲಾಗಬೇಕು ಎಂದು ಅವರು ಹೇಳಿದರು.
Next Story





