ಮಧ್ಯಪ್ರದೇಶ: ತಾಯಿಯ ಮೃತದೇಹವನ್ನು ಬೈಕ್‌ಗೆ ಕಟ್ಟಿಕೊಂಡು ಮನೆಗೆ ಸಾಗಿಸಿದ ಪುತ್ರರು!
ಶವ ಸಾಗಿಸಲು ವಾಹನ ಒದಗಿಸದ ಜಿಲ್ಲಾಸ್ಪತ್ರೆ

ಭೋಪಾಲ್: ಮಧ್ಯಪ್ರದೇಶದ ಸಾಗರ್‌ನಲ್ಲಿ ಒಂದೇ ಸಿರಿಂಜ್ ಬಳಸಿ 30 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಶಾಹದೋಲ್ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆಯು ಶವ ಸಾಗಿಸಲು ವಾಹನವನ್ನು ಒದಗಿಸದ ಕಾರಣ ಪುತ್ರರಿಬ್ಬರು ತಮ್ಮ ತಾಯಿಯ ಶವವನ್ನು ಬೈಕ್ ಗೆ ಕಟ್ಟಿಕೊಂಡು 80 ಕಿ.ಮೀ. ದೂರದಲ್ಲಿರುವ ತಮ್ಮ ಹಳ್ಳಿಗೆ ತೆಗೆದುಕೊಂಡು ಹೋದ ಘಟನೆ ನಡೆದಿದೆ. ತಮ್ಮ ಹಳ್ಳಿಗೆ ತಾಯಿಯ ಶವ ಸಾಗಿಸಲು 5,000 ರೂ. ಕೇಳಿದ ಖಾಸಗಿ ವಾಹನವನ್ನು ಬಾಡಿಗೆ ಪಡೆಯಲು ಈ ವ್ಯಕ್ತಿಗೆ ಸಾಧ್ಯವಾಗಲಿಲ್ಲ.
ಇಬ್ಬರು ಯುವಕರು ತಮ್ಮ ತಾಯಿಯ ಚಿಕಿತ್ಸೆಗಾಗಿ ಅನುಪ್ಪುರ್ ಜಿಲ್ಲೆಯಿಂದ ಶಾಹದೋಲ್ ವೈದ್ಯಕೀಯ ಕಾಲೇಜಿಗೆ ಬಂದಿದ್ದರು. ಸೂಕ್ತ ಚಿಕಿತ್ಸೆಯ ಕೊರತೆಯಿಂದ ತಮ್ಮ ತಾಯಿ ಸಾವನ್ನಪ್ಪಿದ್ದಾರೆ. ಮೃತದೇಹ ಸಾಗಿಸಲು ಆಸ್ಪತ್ರೆಯವರು ವಾಹವನ್ನು ಕೂಡ ಒದಗಿಸಲಿಲ್ಲ ಎಂದು ಮಕ್ಕಳಿಬ್ಬರು ದೂರಿದ್ದಾರೆ.
100 ರೂ.ಗೆ ಮರದ ವಸ್ತು ಖರೀದಿಸಿದ ಪುತ್ರರು, ಅದಕ್ಕೆ ತಾಯಿಯ ಶವವನ್ನು ಕಟ್ಟಿಕೊಂಡು 80 ಕಿ.ಮೀ ದೂರದಲ್ಲಿರುವ ಅನುಪ್ಪುರ್ ಜಿಲ್ಲೆಯ ಗುಡಾರು ಗ್ರಾಮಕ್ಕೆ ತೆರಳಿದರು.
ಅನುಪ್ಪೂರಿನ ಗೋಡಾರು ಗ್ರಾಮದ ನಿವಾಸಿ ಜೈಮಂತ್ರಿ ಯಾದವ್ ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಯ ಸ್ಥಿತಿ ಹದಗೆಟ್ಟಿದ್ದರಿಂದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ. ತನ್ನ ತಾಯಿಯ ಸಾವಿಗೆ ಜಿಲ್ಲಾ ಆಸ್ಪತ್ರೆಯ ನರ್ಸ್‌ಗಳ ನಿರ್ಲಕ್ಷ್ಯದ ಚಿಕಿತ್ಸೆ ಹಾಗೂ ವೈದ್ಯಕೀಯ ಆಸ್ಪತ್ರೆಯ ಆಡಳಿತ ಮಂಡಳಿಯೇ ಕಾರಣ ಎಂದು ಮೃತ ಮಹಿಳೆಯ ಪುತ್ರ ಸುಂದರ್ ಯಾದವ್ ಆರೋಪಿಸಿದರು.
ತಾಯಿಯ ಮೃತದೇಹವನ್ನು ಗ್ರಾಮಕ್ಕೆ ಸಾಗಿಸಲು ವಾಹನದ ಅಗತ್ಯಯಿತ್ತು. ಆದರೆ ನಮಗೆ ವಾಹನ ಒದಗಿಸಲು ನಿರಾಕರಿಸಲಾಯಿತು ಹಾಗೂ ನನಗೆ ಖಾಸಗಿ ವಾಹನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಯಾದವ್ ಹೇಳಿದ್ದಾರೆ.
किसी भी राज्य में मंत्रिमंडल क्यों हो,अगर हां तो तस्वीर क्यों नहीं बदलती ये शहडोल का छोटा अस्पताल नहीं मेडिकल कॉलेज हैं बेटे अपनी मां का शव बाइक पर ले जा रहे हैं @ChouhanShivraj इसके बाद भी स्वास्थ्य मंत्री के तर्क हो सकते हैं! आपलोग सिर्फ चुनाव विभाग रखें जो काम साल भर करते हैं pic.twitter.com/NJ9NvoWDsv
— Anurag Dwary (@Anurag_Dwary) August 1, 2022







