ಎನ್ಐಟಿಕೆ ಬೀಚ್ನಲ್ಲಿ ಯುವತಿಯ ಅತ್ಯಾಚಾರ: ಆರೋಪಿಯ ಬಂಧನ

ಮುನಾಝ್ ಅಹ್ಮದ್
ಮಂಗಳೂರು, ಆ.1: ಬೀಚ್ನಲ್ಲಿ ಸಹಪಾಠಿಯೊಂದಿಗಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಮೀನು ಲಾರಿ ಚಾಲಕ ಮುನಾಝ್ ಅಹ್ಮದ್ (30) ಬಂಧಿತ ಆರೋಪಿ.
ಜುಲೈ 27ರಂದು ನಗರದ ಎನ್ಐಟಿಕೆ ಬೀಚ್ನಲ್ಲಿ ತನ್ನ ಸ್ನೇಹಿತನ ಜತೆಯಲ್ಲಿದ್ದ ವೇಳೆ ಅಲ್ಲಿಗೆ ಆಗಮಿಸಿದ ಆರೋಪಿ ಸಹಪಾಠಿಯನ್ನು ಬೆದರಿಸಿ ಓಡಿಸಿ ಅತ್ಯಾಚಾರ ಎಸಗಿರುವುದಾಗಿ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿನಿ ಜತೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಅದನ್ನು ವೀಡಿಯೋ ಕೂಡಾ ಮಾಡಿದ್ದು, ಆ ಮೂಲಕ ಬೆದರಿಕೆ ಒಡ್ಡಿರುವುದಾಗಿ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿರುವುದಾಗಿ ಪೋಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
Next Story