ಚಿಕ್ಕಮಗಳೂರು ಉಪ ವಿಭಾಗಧಿಕಾರಿಗೆ ಮಂಡ್ಯ ಎಡಿಸಿಯಾಗಿ ವರ್ಗಾವಣೆ

ಚಿಕ್ಕಮಗಳೂರು, ಆ.1: ಚಿಕ್ಕಮಗಳೂರು ಉಪ ವಿಭಾಗಧಿಕಾರಿಯಾಗಿರುವ ಎಚ್. ಆರ್ ನಾಗರಾಜ್ ಅವರನ್ನು ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ನೇಮಿಸಿ ಸರಕಾರ ತಕ್ಷಣದಲ್ಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಕಳೆದೆರಡು ವರ್ಷದಿಂದ ಉಪವಿಭಾಗಧಿಕಾರಿಯಾಗಿ ಕಾರ್ಯನಿರ್ವಸುತ್ತಿದ ನಾಗರಾಜ್ ಅನೇಕ ಜನಪ್ರಿಯ ಕೆಲಸಗಳನ್ನು ಮಾಡಿದ್ದು ಸಾರ್ವಜನಿಕ ವಿಶ್ವಾಸ ಗಳಿಸಿದ್ದರು.
Next Story





