ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧಿಕಾರ ಸ್ವೀಕಾರ

ಮಂಗಳೂರು, ಆ.1: ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಸರಕಾರವು ತಾತ್ಕಾಲಿಕವಾಗಿ ಆಡಳಿತಾತ್ಮಕ ತಡೆಯಾಜ್ಞೆ ನೀಡಿತ್ತು. ಅದನ್ನೀಗ ತೆರವುಗೊಳಿಸಲಾಗಿದ್ದು, ಅದರಂತೆ ಸೋಮವಾರ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಬಾವುಟಗುಡ್ಡೆಯ ಈದ್ಗಾ ಜುಮಾ ಮಸೀದಿಯ ಖತೀಬ್ ಸ್ವದಖತುಲ್ಲಾ ನದ್ವಿ ದುಆಗೈದರು.
ಈ ಸಂದರ್ಭ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಫಕೀರಬ್ಬ, ಎ.ಕೆ. ಜಮಾಲ್, ಅಬ್ದುಲ್ ರಹಿಮಾನ್ ಮೊಗರ್ಪಣೆ, ಸದಸ್ಯರಾದ ಸಿರಾಜುದ್ದೀನ್, ಸಿದ್ದೀಕ್ ಕಾಜೂರು, ಖಾಲಿದ್ ನಂದಾವರ, ಶಾಕೀರ್ ಕಣ್ಣೂರು, ಕಾರ್ಪೊರೇಟರ್ ಲತೀಫ್ ಕಂದಕ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮನ್ಸೂರ್ ಅಹ್ಮದ್ ಅಝಾದ್, ಹಾರಿಸ್ ಮರೈನ್, ಮುಹಮ್ಮದ್ ಕನ್ನಂಗಾರ್, ಹಾರಿಸ್ ಬೈಕಂಪಾಡಿ, ಬಿ.ಕೆ. ಹಿದಾಯತ್, ಮುನ್ನಾ ಕಮ್ಮರಡಿ ಉಪಸ್ಥಿತರಿದ್ದರು.
ವಕ್ಫ್ ಸಲಹಾ ಸಮಿತಿಯ ಸದಸ್ಯ ಸೈದುದ್ದೀನ್ ಸ್ವಾಗತಿಸಿದರು. ಸದಸ್ಯ ಅಶ್ರಫ್ ಕಿನಾರ ವಂದಿಸಿದರು.





