ಕೋಳಿ ಅಂಕಕ್ಕೆ ದಾಳಿ: ಎಂಟು ಮಂದಿ ಬಂಧನ

ಕಾಪು: ದೆಂದೂರುಕಟ್ಟೆಯ ಇಂದ್ರಾಳಿ ಎಂಬಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಎಂಟು ಮಂದಿಯನ್ನು ಕಾಪು ಪೊಲೀಸರು ಜು.31ರಂದು ಬಂಧಿಸಿದ್ದಾರೆ.
ಸದಾನಂದ ಪೂಜಾರಿ, ತೇಜಸ್, ಸುರೇಶ್, ನಿತೇಶ್, ಸಂತೋಷ್, ಸ್ವಾಮಿನಾಥ್, ಅಣ್ಣಪ್ಪ ಪೂಜಾರಿ, ಸಂದೀಪ್ ಶೆಟ್ಟಿ ಬಂಧಿತ ಆರೋಪಿಗಳು. ಇವರಿಂದ 450ರೂ. ನಗದು, 10 ಕೋಳಿಗಳು ಹಾಗೂ ಒಂದು ಬಾಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story