ಪರ್ಕಳ: ಧರೆಗುರುಳಿದ ಬೃಹತ್ ಗಾತ್ರದ ನಗರಸಭೆಯ ನೀರಿನ ಟ್ಯಾಂಕ್
![ಪರ್ಕಳ: ಧರೆಗುರುಳಿದ ಬೃಹತ್ ಗಾತ್ರದ ನಗರಸಭೆಯ ನೀರಿನ ಟ್ಯಾಂಕ್ ಪರ್ಕಳ: ಧರೆಗುರುಳಿದ ಬೃಹತ್ ಗಾತ್ರದ ನಗರಸಭೆಯ ನೀರಿನ ಟ್ಯಾಂಕ್](https://www.varthabharati.in/sites/default/files/images/articles/2022/08/2/344451-1659411880.jpeg)
ಪರ್ಕಳ: ಇಲ್ಲಿನ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ ಪಕ್ಕದಲ್ಲಿರುವ ಬೃಹತ್ ಗಾತ್ರದ ನೀರಿನ ಟಾಂಕಿಯೊಂದು ಪಕ್ಕದಲ್ಲಿರುವ ಪರ್ಕಳ ಎಜುಕೇಶನ್ ಸೊಸೈಟಿಯ ಜಾಗದೊಳಗೆ ಮಗುಚಿ ಬಿದ್ದಿದೆ.
ತನ್ನೆಲ್ಲ ಸ್ತಂಭಗಳು ಶೀತಲಾವಸ್ಥೆಯಲ್ಲಿದ್ದ, ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ ಹಳೆಯದಾದ ನೀರಿನ ಟ್ಯಾಂಕಿ ಬಿದ್ದಿದೆ. ಪಕ್ಕದಲ್ಲಿ 80ನೇ ಬಡಗಬೆಟ್ಟಿಗೆ ಸಂಚರಿಸುವ ರಸ್ತೆ ಜನನಿಬಿಡ ಪ್ರದೇಶವಾಗಿದ್ದು, ಆಯತಪ್ಪಿ ರಸ್ತೆಗೆ ಬಿದಿದ್ದರೆ ಅನಾಹುತ ಆಗುತ್ತಿತ್ತು. ಪರ್ಕಳ ಎಜುಕೇಶನ್ ಸೊಸೈಟಿಯ ಈ ಜಾಗದಲ್ಲಿ ಹಿಂದೆ ಅಂಗನವಾಡಿ ಕೂಡ ಇತ್ತು. ಇದೀಗ ಮುಚ್ಚಲ್ಪಟ್ಟಿದೆ ಸದ್ಯ ಇಲ್ಲಿ ಇರುವ ಕಟ್ಟಡದಲ್ಲಿ ಯಾರು ಇಲ್ಲದೇ ಇರುವುದರಿಂದ ಪ್ರಾಣ ಹಾನಿ ಸಂಭವಿಸಿಲ್ಲ.
ನಗರಸಭೆಯ ವ್ಯಾಪ್ತಿಯಲ್ಲಿ ಇಂತಹ ನೀರಿನ ಟ್ಯಾಂಕಿ ಇದ್ದಲ್ಲಿ ಕೂಡಲೇ ತೆರವುಗೊಳಿಸುವ ಕಾರ್ಯ ಮಾಡಬೇಕು. ಈ ಪ್ರಕರಣ ನಗರಸಭೆಯ ಅಧ್ಯಕ್ಷರ ವಾರ್ಡು ಹಾಗೂ ಅವರ ಮನೆಯ ಸಮೀಪ ನಡೆದಿರುವುದು ತುಂಬಾ ಕೇದಕರ. ತಕ್ಷಣ ಇದನ್ನು ತೆರವು ಮಾಡಬೇಕು ಹಾಗೂ ಇತರ ಕಡೆ ಇಂತಹ ನಿರ್ಜೀವ ಸ್ಥಿತಿಯಲ್ಲಿರುವ ನೀರಿನ ಟ್ಯಾಂಕಿಗಳನ್ನ ಕೂಡಲೇ ನೆಲಸಮ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೆಬೆಟ್ಟು, ರಾಜೇಶ್ ಪ್ರಭು ಪರ್ಕಳ, ನಗರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.