ತುಳುನಾಡಿನ ಜಾನಪದ ಪರಂಪರೆ ಉಳಿಸುವಲ್ಲಿ ಆಟಿಕೂಟಗಳು ಪೂರಕ: ಶಶಿಕಲಾ ಕುಲಾಲ್

ಶಿರ್ವ, ಆ.2: ಆಟಿ ಕೂಟಗಳು ತುಳುನಾಡಿನ ಜಾನಪದ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಮಳೆಗಾಲದ ಸಂಕಷ್ಟದ ದಿನಗಳಲ್ಲಿ ಹಿರಿಯರ ಜೀವನ, ಪ್ರಕೃತಿದತ್ತ ಗಿಡಮೂಲಿಕೆ, ಗೆಡ್ಡೆ, ಸೊಪ್ಪುಗಳನ್ನು ಬಳಸಿ ಸಿದ್ಧಪಡಿಸಿದ ರುಚಿಕರ ತಿನಿಸುಗಳು, ಆಹಾರಪದ್ಧತಿಯನ್ನು ನೆನಪಿಸಿಕೊಳ್ಳು ವಂತೆ ಮಾಡುತ್ತದೆ ಎಂದು ಜಾನಪದ ತಿಂಡಿತಿನಿಸುಗಳ ಪ್ರವೀಣೆ ಶಶಿಕಲಾ ಕುಲಾಲ್ ಹೇಳಿದ್ದಾರೆ.
ಶಿರ್ವ ರೋಟರಿ ಕ್ಲಬ್ ವತಿಯಿಂದ ರವಿವಾರ ಶಿರ್ವ ಗುತ್ತುದ ಇಲ್ಲ್ ಕೋಡು ಸದಾನಂದ ಶೆಟ್ಟಿ ಅವರ ನಿವಾಸದಲ್ಲಿ ಏರ್ಪಡಿಸಿದ ಆಟಿ ಸ್ಂರಮ ಕಾರ್ಯ ಕ್ರಮದಲ್ಲಿ ಆಟಿ ತಿಂಗಳ ವೈಶಿಷ್ಠ್ಯಗಳ ಬಗ್ಗೆ ಅವರು ಮಾಹಿತಿ ನೀಡಿದರು.
ರೋಟರಿ ಯುತ್ ಲೀಡರ್‌ಶಿಪ್ ಅವಾರ್ಡ್ ಸಮಿತಿಯ ಜಿಲ್ಲಾ ಛೇರ‌್ಮನ್ ಶೈಲೇಂದ್ರ ರಾವ್ ಕಾರ್ಕಳ ಕಾರ್ಯ ಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಪ್ರೊ.ವಿಠಲ್ ನಾಯಕ್ ವಹಿಸಿದ್ದರು. ಕೋಡು ಸದಾನಂದ ಶೆಟ್ಟಿ, ಸುಮಾ ಎಸ್.ಶೆಟ್ಟಿ, ಶ್ರವಣ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘಸೇವಾ ನಿರ್ದೇಶಕ ಮೈಕಲ್ ಮತಾಯಸ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗುತ್ತುದ ಇಲ್ಲ್‌ನ ಹಿರಿಯರಾದ ಸುಮತಿ ಹೆಗ್ಗಡ್ತಿ ಅವರನ್ನು ಸನ್ಮಾನಿಸಲಾಯಿತು. ರಘುಪತಿ ಐತಾಳ್ ಪರಿಚಯಿಸಿದರು. ಹಿಲ್ಡಾ ಮತಾಯಸ್ ಮತ್ತು ಹೊನ್ನಯ್ಯ ಶೆಟ್ಟಿಗಾರ್ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ದಿನೇಶ್ ಮೂಲ್ಯ ವಂದಿಸಿದರು. ಪ್ರತೀ ಮನೆಗಳಿಂದ ತಯಾರಿಸಿ ತಂದ ಆಟಿ ತಿಂಗಳ ವಿವಿಧ ಖಾದ್ಯಗಳೊಂದಿಗೆ ರುಚಿಸುಚಿ ಬೋಜನಕೂಟ ಸಂಪನ್ನಗೊಂಡಿತು.