Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಹೆಣಗಳನ್ನು ಬೀಳಿಸಲು ಅಮಿತ್ ಶಾ...

ಹೆಣಗಳನ್ನು ಬೀಳಿಸಲು ಅಮಿತ್ ಶಾ ರಾಜ್ಯಕ್ಕೆ ಬರುತ್ತಿರಬಹುದು: ಕುಮಾರಸ್ವಾಮಿ ಕಿಡಿ

ವಾರ್ತಾಭಾರತಿವಾರ್ತಾಭಾರತಿ2 Aug 2022 7:15 PM IST
share
ಹೆಣಗಳನ್ನು ಬೀಳಿಸಲು ಅಮಿತ್ ಶಾ ರಾಜ್ಯಕ್ಕೆ ಬರುತ್ತಿರಬಹುದು: ಕುಮಾರಸ್ವಾಮಿ ಕಿಡಿ

ರಾಮನಗರ, ಆ.2: ಕೇಂದ್ರ ಗೃಹ ಸಚಿವ ಅಮಿತ್ ಶಾ ಇನ್ನೊಂದಷ್ಟು ಹೆಣಗಳನ್ನು ಬೀಳಿಸಲು ರಾಜ್ಯಕ್ಕೆ ಬರುತ್ತಿರಬೇಕು. ಗುಜರಾತ್‍ನಲ್ಲಿನ ಹತ್ಯೆಗಳನ್ನೇ ಇಲ್ಲಿ ಮುಂದುವರಿಸಲು ಅವರು ಇಲ್ಲಿಗೆ ಬರುತ್ತಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಗಾರಿದ್ದಾರೆ.

ಮಂಗಳವಾರ ಬಿಡದಿಯ ತಮ್ಮ ತೋಟದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ನರಹತ್ಯೆ ನಡೆಸಿ, ರಾಜಕೀಯ ಮಾಡುವುದೇ ಬಿಜೆಪಿಯ ಹುಟ್ಟುಗುಣ. ಬಿಜಿಪಿ ಅಧಿಕಾರಕ್ಕೆ ಬರಲು ಹಿಂದುತ್ವದ ಹೆಸರಿನಲ್ಲಿ ಮನೆಯಲ್ಲಿ ನೆಮ್ಮದಿಯಾಗಿದ್ದ ಯುವಕರನ್ನು ಕರೆತಂದರು. ಈಗ ನೋಡಿದರೆ ನಾವು ಹೇಳಿದ ಹಾಗೆಯೇ ಕೇಳಬೇಕು ಎಂದು ಅಪ್ಪಣೆ ಮಾಡುತ್ತಿದ್ದಾರೆ. ಅಧಿಕಾರದ ಮದದಲ್ಲಿ ತಿಂದು ತೇಗಿದ್ದಾರೆ ಎಂದು ಗುಡುಗಿದರು.

ಸಿದ್ದರಾಮೋತ್ಸವದ ಬಗ್ಗೆ ಆಸಕ್ತಿ ಇಲ್ಲ: ಸಿದ್ದರಾಮೋತ್ಸವದ ಬಗ್ಗೆ ನನಗೇನೂ ಆಸಕ್ತಿ ಇಲ್ಲ. ಅವರು ಏನೋ ಮಾಡುತ್ತಿದ್ದಾರೆ. ಅದರ ಬಗ್ಗೆ ನಾನ್ಯಾಕೆ ಚಿಂತೆ ಮಾಡಲಿ. ಅವರ ಪಾಡಿಗೆ ಅವರು ಮಾಡಿಕೊಳ್ಳಲಿ ಬಿಡಿ. ಐದಲ್ಲದಿದ್ದರೆ ಇಪ್ಪತ್ತು ಲಕ್ಷ ಜನರನ್ನು ತೋರಿಸಲಿ. ಅವರ ನಾಯಕತ್ವದ ಬಗ್ಗೆ ದಿಲ್ಲಿಗೆ ಪ್ರದರ್ಶನ ಮಾಡಲಿ. ಇದರಿಂದ ಅವರ ಪಕ್ಷದಲ್ಲಿ ಬೆಂಕಿ ಹಂಟಿಕೊಳ್ಳುತ್ತದೆ. ನಮಗೇನು ಸಮಸ್ಯೆ ಎಂದು ಕುಮಾರಸ್ವಾಮಿ ಹೇಳಿದರು.

ಬಾಲಕೃಷ್ಣ ಅವರು, ನನಗೂ ಒಂದು ಚಾನ್ಸ್ ನೀಡಿ ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ? ರಾಜಕೀಯದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಕೆಲವೊಂದು ನಿರ್ಣಯ ಮಾಡಬೇಕಾಗುತ್ತದೆ. 2006ರಲ್ಲಿ ಎಂ.ಪಿ.ಪ್ರಕಾಶ್ ಮನೆಗೆ ಹೋಗಿ ನೀವೇ ಸಿಎಂ ಆಗಿ ಎಂದಿದ್ದೆ. ಆ ಸನ್ನಿವೇಶ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಇನ್ನಾರೋ ನನ್ನನ್ನು ಸಿಎಂ ಮಾಡಿದ್ದಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯಕ್ಕೆ ಯಾರ ಯಾರ ಕೊಡುಗೆ ಏನು ಎನ್ನುವುದು ಗೊತ್ತಿದೆ. ನನ್ನ ಸಾಧನೆ ಬಗ್ಗೆಯೂ ವಿಧಾನಸೌಧದಲ್ಲಿ ದಾಖಲೆಗಳಿವೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಬಗ್ಗೆ ಸಭೆ ಮಾಡಿದ್ದೇನೆ. ವರ್ತುಲ ರೈಲು ಯೋಜನೆಗೆ ಪ್ರಧಾನಿ ಈಗ ಕೈಹಾಕಿದ್ದಾರೆ. ಈಗ, ಅದಿನ್ನೂ ಟೇಕಾಫೇ ಆಗಿಲ್ಲ. ಆಗಲೇ ಫೋಟೋ ಕ್ರೆಡಿಟ್ ತೆಗೆದುಕೊಳ್ಳಲು ಹೊರಟಿದ್ದಾರೆ. ಇಲ್ಲಿಗೆ ಬಂದು ಫೋಟೋ ತೆಗೆಸಿಕೊಳ್ಳಲು ಇವರು ಯಾರು? ಎಂದು ಕುಮಾರಸ್ವಾಮಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಫೋಟೋ ರಾಜಕೀಯ ಶುರು ಮಾಡಿದ್ದರು. ಅದನ್ನು ಅವರ ಶಿಷ್ಯ ಪ್ರತಾಪ್ ಸಿಂಹ ಮುಂದುವರಿಸುತ್ತಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಕಳಪೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಯಾರದೋ ಸರಕಾರದಲ್ಲಿ ಆಗಿದ್ದ ಕೆಲಸಕ್ಕೆ ಬಿಜೆಪಿ ಸರಕಾರ ಟೇಪ್ ಕತ್ತರಿಸಿ ಬಿಲ್ಡಪ್ ತೆಗೆದುಕೊಳ್ಳುತ್ತಿದೆ ಎಂದು ಅವರು ಚಾಟಿ ಬೀಸಿದರು.

ರಾಮನಗರ ಡಿಸಿ, ಎಸ್ಪಿ ವಿರುದ್ಧ ಕಿಡಿ: ರಾಮನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಇಬ್ಬರೂ ಎಂಜಿನಿಯರ್ ಗಳಿಗೆ ಹೆದರಿಸಿ, ರಸ್ತೆಯ ಹಂಪ್‍ಗಳನ್ನ ತೆಗೆಸಿದ್ದಾರೆ. ಬಸವನಪುರದ ಬಳಿ ಪಿಡಿಒ ಒಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಕಾಲು ಕಳೆದುಕೊಂಡಿದ್ದಾರೆ. ನಿತ್ಯವೂ ಅಪಘಾತಗಳು ಆಗುತ್ತಿವೆ ಎಂದು ಅವರು ಕಿಡಿಗಾರಿದರು.

ಅಧಿಕಾರಿಗಳು ಇರುವುದು ಜನರ ರಕ್ಷಣೆ ಮಾಡುವುದಕ್ಕೆ, ಅದನ್ನು ಬಿಟ್ಟು ಜನರ ಪ್ರಾಣ ತೆಗೆಯಲು ಅಧಿಕಾರಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ತೋಟದ ಮನೆಯ ಮುಂದೆಯೇ ಅಪಘಾತ ಆಗಿ ಒಬ್ಬರು ಮೃತಪಟ್ಟಿದ್ದಾರೆ. ಹಂಪ್ ಹಾಕಿ ಎಂದರೂ ಈವರೆಗೂ ಹಾಕಿಲ್ಲ. ಇವರಿಗೆ ಯಾವ ಕೋರ್ಟ್ ಆದೇಶ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮನೆಗೆ ಬೆಂಕಿ ಬಿದ್ದಾಗ ಅಡುಗೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಹೇಳಿಕೆ ಬಗ್ಗೆ ಕಿಡಿಗಾರಿರುವ ಕುಮಾರಸ್ವಾಮಿ, ಸಚಿವರಾದವರು ತಲೆಯಲ್ಲಿ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ನಾಲಿಗೆ ಹೊರಳಿದ ಹಾಗೆಲ್ಲ ಮಾತನಾಡುವುದು ಸರಿಯಲ್ಲ. ಡಿಕೆ ಸಹೋದರರ ಜತೆ ಆಡಿದ ಆಟವನ್ನು ನನ್ನ ಹತ್ತಿರ ಆಡಿದರೆ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು.

ಅಶ್ವತ್ಥನಾರಾಯಣ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. 25 ಲಕ್ಷ ರೂ. ಕೊಡಲು ಶುರು ಮಾಡಿದ್ದು ಯಾರು? ಒಂದೊಂದು ಕಡೆ ಒದೊಂದು ರೂಲ್ಸ್ ಮಾಡಿದ್ದಾರೆ. ದುಡ್ಡಿನ ಮದದಿಂದ ಮಾತಿನ ಮೇಲೆ ಹಿಡಿತ ಮೀರಬಾರದು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X