ಬ್ರಹ್ಮಾವರ-ಚೇರ್ಕಾಡಿ ಚತುಷ್ಪಥ ರಸ್ತೆ ಹೆಬ್ರಿವರೆಗೆ ವಿಸ್ತರಣೆ

ಬ್ರಹ್ಮಾವರ, ಆ.3: ಈಗಾಗಲೇ ಬ್ರಹ್ಮಾವರದಿಂದ ಚೇರ್ಕಾಡಿವರೆಗೆ ನಡೆದಿರುವ ಚತುಷ್ಪಥ ರಸ್ತೆ ಕಾಮಗಾರಿಯನ್ನು ಹೆಬ್ರಿ-ಸೀತಾನದಿಯವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಇದಕ್ಕಾಗಿ ಚೇರ್ಕಾಡಿಯಿಂದ ಮುಂದುವರಿದ ಕಾಮಗಾರಿಗಾಗಿ ಶಾಸಕ ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ 33 ಕೋಟಿ ರೂ.ಅನುದಾನ ಮಂಜೂರಾಗಿದೆ. ಈ ರಸ್ತೆ ಕಾಮಗಾರಿಯನ್ನು ಕಂದಾಯ, ಅರಣ್ಯ, ಮೆಸ್ಕಾಂ, ಪಂಚಾಯತ್‌ರಾಜ್ ಇಲಾಖೆಗಳ ಸಮನ್ವಯದೊಂದಿಗೆ ಪೂರ್ಣಗೊಳಿಸುವ ಬಗ್ಗೆ ಶಾಸಕರು ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಸಲಹೆ ಸೂಚನೆ ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ರಾಕೇಶ್, ಮೆಸ್ಕಾಂ ಬ್ರಹ್ಮಾವರ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರವಿ ಕುಮಾರ್, ಸಹಾಯಕ ಅಭಿಯಂತರ ಗಿರೀಶ್, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್, ಗುತ್ತಿಗೆದಾರ ರಾಜೇಶ್ ಕಾರಂತ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತ ರಿದ್ದರು.