ಸಿದ್ದರಾಮಯ್ಯರನ್ನು ತಬ್ಬಿಕೊಂಡ ಡಿ.ಕೆ.ಶಿವಕುಮಾರ್

ದಾವಣಗೆರೆ.ಆ.3: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಗಿದಪ್ಪಿಕೊಳ್ಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ ನಮ್ಮ ಮಧ್ಯೆ ಮುನಿಸಿಲ್ಲ ಎನ್ನುವ ಸಂದೇಶ ನೀಡಿದರು.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮ ಉದ್ಘಾಟಿಸಿ ಆಸೀನರಾಗಿತ್ತಿದ್ದಂತೆ ಅವರೊಂದಿಗೆ ಸಿದ್ದರಾಮಯ್ಯ ಕೂಡ ಆಸೀನರಾದರು. ಈ ವೇಳೆ ವೇದಿಕೆಗೆ ಸಿದ್ದರಾಮಯ್ಯ ಅವರು ಕುಳಿತಿದ್ದ ಜಾಗಕ್ಕೆ ಹೋದ ಡಿಕೆಶಿ ಅವರನ್ನು ಕೈ ಹಿಡಿ ಎಬ್ಬಿಸಿ ರಾಮನಗರ ರೇಷ್ಮೆ ಶಾಲನ್ನು ಹಾಕಿ ಸನ್ಮಾನಿಸಿ ಬಿಗಿದಪ್ಪಿಕೊಂಡರು.
ನಂತರ ನೆರೆದಿದ್ದ ಅಪಾರ ಜನಸ್ತೋಮದ ಮುಂದೆ ಉಭಯ ನಾಯಕರು ಪರಸ್ಪರ ಹಿಡಿದುಕೊಂಡಿದ್ದ ಕೈಗಳನ್ನು ಮೇಲಕ್ಕೆತ್ತಿದರು.
Next Story





