ಕೇರಳ: ಸಿಪಿಐ(ಎಂ) ಸೇರಲು ಸಜ್ಜಾದ ವಿಶ್ವ ಹಿಂದೂ ಪರಿಷತ್ ನಾಯಕ

ಸುಭಾಷ್ ಚಂದ್ (Photo: thenewsminute)
ಕೊಚ್ಚಿ: ಕೇರಳದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನಾಯಕರೊಬ್ಬರು ರಾಜ್ಯದ ಆಡಳಿತ ಪಕ್ಷವಾದ ಸಿಪಿಐ(ಎಂ) ಸೇರಲು ಸಿದ್ಧರಾಗಿದ್ದಾರೆ. ಕೊಚ್ಚಿ ಮೂಲದ ವಕೀಲರ ಎಸ್ ಸುಭಾಷ್ ಚಂದ್, ಹಿಂದೂ ಪರಿಷತ್ ಸಂಘಟನೆಯ ಎರ್ನಾಕುಲಂ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಚಂದ್ ಅವರು ಸಿಪಿಐ(ಎಂ) ಸೇರಲು ಕಾರಣಗಳನ್ನು ವಿವರಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸೈದ್ಧಾಂತಿಕವಾಗಿ ಸಂಘ ಪರಿವಾರದ ಸಂಘಟನೆಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವುದರಿಂದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ ಮತ್ತು ಜಾತ್ಯತೀತ ಶಕ್ತಿಗಳ ಬಲವರ್ಧನೆ ಇಂದಿನ ಅಗತ್ಯ ಎಂಬ ನಂಬಿಕೆಯಿಂದ ರಾಜೀನಾಮೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಕೋಮುವಾದ ಬೆಳೆದಂತೆ ಜಾತ್ಯತೀತತೆ ದುರ್ಬಲವಾಗುತ್ತದೆ, ಇದು ಮುಂದುವರಿದರೆ ದೇಶದಲ್ಲಿ ಕೋಮುಗಲಭೆಗಳ ಸ್ಮಶಾನವಾಗುತ್ತದೆ, ಇದನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಜವಾಬ್ದಾರಿಯಾಗಿದೆ. ನಾನು ಸಿಪಿಐ(ಎಂ) ಜೊತೆಗೂಡಲು ನಿರ್ಧರಿಸಿದ್ದೇನೆ. ಅದು ಜಾತ್ಯತೀತತೆಗಾಗಿ ರಾಜಿಯಿಲ್ಲದೆ ಕೆಲಸ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ಸಾಮಾನ್ಯ ಜನರ ಪ್ರಗತಿಗಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತದೆ ” ಎಂದು ಅವರು ಹೇಳಿದ್ದಾರೆ.





