ಐತಿಹಾಸಿಕ ಕಂಚಿನ ಪದಕ ಗೆದ್ದ ಹೈಜಂಪರ್ ತೇಜಸ್ವಿನ್ ಶಂಕರ್: ಪ್ರಧಾನಿ ಮೋದಿ ಅಭಿನಂದನೆ

Photo:twitter
ಹೊಸದಿಲ್ಲಿ: ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರಕ್ಕೆ ಮೊದಲ ಅತ್ಲೆಟಿಕ್ಸ್ ಪದಕ ಗೆದ್ದುಕೊಟ್ಟಿರುವ ತೇಜಸ್ವಿನ್ ಶಂಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಭಿನಂದಿಸಿದ್ದಾರೆ.
“ತೇಜಸ್ವಿನ್ ಶಂಕರ್ ಇತಿಹಾಸ ಸೃಷ್ಟಿಸಿದ್ದಾರೆ’’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
"ಶಂಕರ್ ಅವರು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮೊದಲ ಬಾರಿ ಹೈಜಂಪ್ ಸ್ಪರ್ಧೆಯಲ್ಲಿ ಪದಕವನ್ನು ಗೆದ್ದಿದ್ದಾರೆ. ಕಂಚಿನ ಪದಕವನ್ನು ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಪ್ರಯತ್ನಗಳಿಗೆ ಹೆಮ್ಮೆಯಾಗುತ್ತಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು. ಅವರು ಯಶಸ್ಸನ್ನು ಪಡೆಯಲಿ’’ ಎಂದು ಪ್ರಧಾನಿ ಟ್ವೀಟಿಸಿದ್ದಾರೆ.
ಬುಧವಾರ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ತೇಜಸ್ವಿನ್ ಶಂಕರ್ ಪುರುಷರ ಹೈಜಂಪ್ ಫೈನಲ್ನಲ್ಲಿ 2.22 ಮೀಟರ್ ದೂರಕ್ಕೆ ಜಿಗಿದು ಕಂಚಿನ ಪದಕವನ್ನು ಗೆದ್ದುಕೊಂಡರು.
ನ್ಯೂಝಿಲ್ಯಾಂಡ್ನ ಹ್ಯಾಮಿಶ್ ಕೆರ್ ಹೈಜಂಪ್ ನಲ್ಲಿ 2.25 ಮೀಟರ್ ದೂರ ಜಿಗಿದು ಚಿನ್ನ ಗೆದ್ದರು.
Tejaswin Shankar creates history. He wins our first high jump medal in the CWG. Congratulations to him for winning the Bronze medal. Proud of his efforts. Best wishes for his future endeavours. May he keep attaining success. @TejaswinShankar pic.twitter.com/eQcFOtSU58
— Narendra Modi (@narendramodi) August 4, 2022