ಹಿರಿಯ ಹಿಂದಿ ನಟ ಮಿಥಿಲೇಶ್ ಚತುರ್ವೇದಿ ನಿಧನ

Photo:twitter
ಮುಂಬೈ (ಮಹಾರಾಷ್ಟ್ರ): ಹಿಂದಿ ರಂಗಭೂಮಿ ಹಾಗೂ ಚಲನಚಿತ್ರ ರಂಗದ ಹಿರಿಯ ನಟ ಮಿಥಿಲೇಶ್ ಚತುರ್ವೇದಿ (Mithilesh Chaturvedi)ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಗುರುವಾರ ಬೆಳಿಗ್ಗೆ ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಇನ್ ಸ್ಟಾಗ್ರಾಮ್ ನಲ್ಲಿಈ ದುಃಖಕರ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ವರದಿಯ ಪ್ರಕಾರ, ಮಿಥಿಲೇಶ್ ಚತುರ್ವೇದಿ ಹೃದಯ ಸಂಬಂಧಿ ಕಾಯಿಲೆಯಿಂದ ಆಗಸ್ಟ್ 3 ರಂದು ನಿಧನರಾದರು. ಅವರ ಅಳಿಯ ಆಶಿಶ್ ಕೂಡ ಫೇಸ್ಬುಕ್ ನಲ್ಲಿ ಭಾವನಾತ್ಮಕ ಟಿಪ್ಪಣಿಯನ್ನು ಹಂಚಿಕೊಳ್ಳುವ ಮೂಲಕ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಸಾವಿನ ಸುದ್ದಿ ತಿಳಿದ ನಂತರ ನೆಟ್ಟಿಗರು ಸಂತಾಪ ಸೂಚಿಸಿದ್ದಾರೆ.
ಮಿಥಿಲೇಶ್ ಚತುರ್ವೇದಿ ಅವರು ತಾಲ್, ಕೋಯಿ ಮಿಲ್ ಗಯಾ, ಅಶೋಕ, ಗದ್ದರ್, ಏಕ್ ಪ್ರೇಮ್ ಕಥಾ, ಬಂಟಿ ಔರ್ ಬಬ್ಲಿ ಹಾಗೂ ರೆಡಿ ಸಹಿತ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
Next Story





