ಸುಲಿಗೆ ಆರೋಪ: ತಡವಾಗಿ ದೂರು ಸಲ್ಲಿಸಿದ್ದಕ್ಕೆ ಹೈಕೋರ್ಟ್ ನಿಂದ ಎಫ್‍ಐಆರ್ ರದ್ದು

ಬೆಂಗಳೂರು, ಆ.4: ಸುಲಿಗೆ ಆರೋಪ ಹಿನ್ನೆಲೆಯಲ್ಲಿ ದೂರು ದಾಖಲಿಸುವುದು ತಡವಾದರೆ ಅದು ದೂರಿನ ನೈಜತೆ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ಸಂಬಂಧ ಪ್ರಕರಣವೊಂದರಲ್ಲಿ ವ್ಯಕ್ತಿಯ ಮೇಲೆ ದಾಖಲಿಸಲಾಗಿದ್ದ ಎಫ್‍ಐಆರ್ ರದ್ದುಗೊಳಿಸಿ ಆದೇಶಿಸಿದೆ.
ದಾವಣಗೆರೆಯ ಇಮ್ರಾನ್ ಸಿದ್ದಿಕಿ ಎನ್ನುವವರು ಸುಲಿಗೆ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಿಸಲಾಗಿದ್ದ 2 ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿದ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರ ಸಿದ್ದಿಕಿ ಅವರು ತಮ್ಮನ್ನು ಬೆದರಿಸಿ ಎರಡು ಲಕ್ಷ ರೂ.ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಮುಬಾರಕ್ ಎಂಬ ವ್ಯಾಪಾರಿಯೊಬ್ಬರು, ಕಳೆದ ಮೇ 1ರಂದು ದೂರು ಸಲ್ಲಿಸಿದ್ದರು.ಅದನ್ನು ಆಧರಿಸಿ ದಾವಣಗೆರೆ ಗ್ರಾಮೀಣ ಠಾಣಾ ಪೊಲೀಸರು ಸಿದ್ದಿಕಿಯನ್ನು ಬಂಧಿಸಿದ್ದರು.
Next Story





