ಕರೋನಿಲ್ ಸಂಬಂಧಿಸಿದಂತೆ ಸ್ಪಷ್ಟೀಕರಣದ ಕರಡು ನೀಡಲು ರಾಮ್ದೇವ್ಗೆ ಸಮಯ ನೀಡಿದ ಹೈಕೋರ್ಟ್
ಯೋಗ ಗುರು ನೀಡಿರುವ ಪ್ರಸ್ತುತ ಕರಡು ಸ್ಪಷ್ಟೀಕರಣದಿಂದ ತನಗೆ ತೃಪ್ತಿ ಇಲ್ಲ ಎಂದ ನ್ಯಾಯಮೂರ್ತಿ

ರಾಮ್ದೇವ್
ಹೊಸದಿಲ್ಲಿ: ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದಂತೆ ಕರೋನಿಲ್(Coronil)ನಿಂದ ತಪ್ಪು ಮಾಹಿತಿ ಮತ್ತು ಆಧಾರರಹಿತ ಹಕ್ಕುಗಳನ್ನು ಹರಡಿದ ಆರೋಪದ ಮೇಲೆ ನ್ಯಾಯಯುತ ಮತ್ತು ಸ್ವೀಕಾರಾರ್ಹ ವಿವರಣೆಯನ್ನು ನೀಡಲು ಯೋಗ ಗುರು ರಾಮ್ದೇವ್(Baba Ramdev)ಗೆ ದಿಲ್ಲಿ ಹೈಕೋರ್ಟ್ ಸ್ವಲ್ಪ ಸಮಯವನ್ನು ನೀಡಿದೆ. ಕೋವಿಡ್ ಬಗ್ಗೆ ತಪ್ಪು ಮಾಹಿತಿ ಹಂಚಿದೆ ಎಂದು ಆರೋಪಿಸಿ ಕೆಲವು ವೈದ್ಯಕೀಯ ಸಂಘಗಳು ರಾಮದೇವ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಯೋಗ ಗುರು ನೀಡಿರುವ ಪ್ರಸ್ತುತ ಕರಡು ಸ್ಪಷ್ಟೀಕರಣದಿಂದ ತನಗೆ ತೃಪ್ತಿ ಇಲ್ಲ ಎಂದು ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಹೇಳಿದ್ದಾರೆ. ಇದು (ಕರಡು ಸ್ಪಷ್ಟೀಕರಣ) "ಬೆನ್ನು ತಟ್ಟಿದಂತೆ", ಇದೆ ಎಂದು ಅವರು ಟೀಕಿಸಿದ್ದಾರೆ.
ರಾಮ್ದೇವ್ಗೆ ನ್ಯಾಯಾಲಯವು 'ಪದಗಳನ್ನು ನುಂಗಬೇಡಿ' ಎಂದು ಸಲಹೆ ನೀಡಿದ್ದು, ಕೊರೊನಿಲ್ ಕೋವಿಡ್ -19 ಗೆ ಚಿಕಿತ್ಸೆ ಅಲ್ಲ, ಇದು ರೋಗನಿರೋಧಕವಾಗಿದೆ ಎಂದು ಸ್ಪಷ್ಟವಾಗಿ ಹೇಳಿ, ನಿಮ್ಮ ಸಂವಹನದಲ್ಲಿ ಕಲ್ಪನೆಯು ಸ್ಪಷ್ಟವಾಗಿರಬೇಕು. ಪದಗಳು ಆಲೋಚನೆಯನ್ನು ವ್ಯಕ್ತಪಡಿಸಬೇಕು, ಅದನ್ನು ಮರೆಮಾಡಬಾರದು. ಇದನ್ನು ರೂಪಿಸಿದ ರೀತಿ, ಚಿಂತನೆ, ಪ್ರಾಮಾಣಿಕ ಚಿಂತನೆಯಿದ್ದರೆ ಅದನ್ನು ಮರೆಮಾಚಬಾರದು ಎಂದು ತಿಳಿ ಹೇಳಿದೆ.
ನ್ಯಾಯಾಲಯದಲ್ಲಿ ಸಲ್ಲಿಸಿದ ಕರಡು ಸ್ಪಷ್ಟೀಕರಣದಲ್ಲಿ, ರಾಮ್ದೇವ್ ಅವರು ಕೊರೊನಿಲ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ COVID-19 ಚಿಕಿತ್ಸೆಯಲ್ಲಿ ಪೂರಕ ಕ್ರಮವಾಗಿದೆ ಎಂದು ಹೇಳಿದ್ದರು.
ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಕಾರಣದಿಂದಾಗಿ ಈ ವಿಷಯವು "ತುರ್ತು ಅಂಶ" ವನ್ನು ಪಡೆದುಕೊಂಡಿದೆ ಹಾಗೂ ಕರೋನಿಲ್ ಬಳಕೆಯ ಬಗ್ಗೆ ಯಾವುದೇ ಗೊಂದಲವನ್ನು ಎದುರಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 17ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.
ರಾಮದೇವ್ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಹಲವು ವೈದ್ಯರ ಸಂಘಗಳು ಕಳೆದ ವರ್ಷ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಕೋವಿಡ್ -19 ಸೋಂಕಿತ ಅನೇಕ ಜನರ ಸಾವಿಗೆ ಅಲೋಪತಿ ಕಾರಣ ಎಂದು ಹೇಳುವ ಮೂಲಕ ರಾಮದೇವ್ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದ್ದರು.
ಯೋಗ ಗುರು ಪರ ವಾದ ಮಂಡಿಸಿದ ಹಿರಿಯ ವಕೀಲ ಪಿವಿ ಕಪೂರ್, ರಾಮ್ದೇವ್ ಅವರು ಸ್ಪಷ್ಟೀಕರಣವನ್ನು ತಿದ್ದುಪಡಿ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು.
ಸಂಬಂಧಿತ ಸಚಿವಾಲಯವು ನೀಡಿದ ಅನುಮೋದನೆಯನ್ನು ಗಮನದಲ್ಲಿಟ್ಟುಕೊಂಡು ಕೊರೊನಿಲ್ ಅನ್ನು COVID-19 ಗೆ ಚಿಕಿತ್ಸೆ ಎಂದು ಪ್ರಚಾರ ಮಾಡಲು ರಾಮ್ದೇವ್ ಅರ್ಹರಾಗಿದ್ದಾರೆ ಮತ್ತು ಅವರ ಹೇಳಿಕೆಗಳು ಯಾವುದೇ ಹಾನಿಯನ್ನುಂಟುಮಾಡಿದೆಯೇ ಎಂಬುದರ ಕುರಿತು ಏನನ್ನೂ ದಾಖಲಿಸಲಾಗಿಲ್ಲ ಎಂದು ಅವರು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ: ಫಾಝಿಲ್ ಹತ್ಯೆ ಬಗ್ಗೆ ಪ್ರಚೋದನಕಾರಿ ಪೋಸ್ಟ್: ಬೈಂದೂರು ಯುವಕನ ವಿರುದ್ಧ ಪ್ರಕರಣ ದಾಖಲು







